ಅಣ್ಣಿಗೇರಿ

Contributed bymahanteshshetty61635@gmail.com|Vijaya Karnataka
22nd september
21 a್ಞಜ 4

ಅಣ್ಣಿಗೇರಿಯಲ್ಲಿಲೀಲಾಬಾಯಿ ಸಿಕ್ಕೇದೇಸಾಯಿ ಸ್ಮರಣೆ
ಬಡ ಮಕ್ಕಳಿಗೆ ನೋಟಬುಕ್ , ಪೆನ್ ವಿತರಣೆ

ವಿಕ ಸುದ್ದಿಲೋಕ ಅಣ್ಣಿಗೇರಿ

ಲೀಲಾಬಾಯಿ ಸಿಕ್ಕೇದೇಸಾಯಿ ಅವರ ಸ್ಮರಣಾರ್ಥ ಜ್ಯೋತಿ ಮಹಿಳಾ ಮಂಡಲದವರು ಬಡ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದರು.

ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾದೇವಿ ಸಿಕ್ಕೇದೇಸಾಯಿ ಮಾತನಾಡಿ, ಲೀಲಾಬಾಯಿ ಸಿಕ್ಕೇದೇಸಾಯಿ ಅವರು ನಮ್ಮನ್ನಗಲಿ 7 ವರ್ಷವಾಯಿತು. ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಸಮಾಜದಲ್ಲಿಎಲ್ಲರಿಗೂ ಶಿಕ್ಷಣ ಸೌಲಭ್ಯ ಒದಗಿಸಲು ಅವರು ಬಹಳಷ್ಟು ಶ್ರಮಿಸಿದ್ದರು. ಅವರ ಸ್ಮರಣಾರ್ಥ ಪ್ರತಿ ವರ್ಷ ನಿರಂತರವಾಗಿ ಬಡ ಮಕ್ಕಳಿಗೆ ನೋಟ್ ಬುಕ್ ವಿತರಿಸುತ್ತ ಬರಲಾಗಿದೆ ಎಂದು ಹೇಳಿದರು.

ಲೀಲಾಬಾಯಿ ಸಿಕ್ಕೇದೇಸಾಯಿ ಅವರು ಅಮೃತೇಶ್ವರ ಶಿಕ್ಷಣ ಸಂಸ್ಥೆ ಚೇರಮನ್ ರಾಗಿ, ಅಣ್ಣಿಗೇರಿ ಪುರಸಭೆ ಪ್ರಥಮ ಮಹಿಳಾ ಅಧ್ಯಕ್ಷರಾಗಿ, ಸ್ಥಳೀಯ ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷರಾಗಿ ಸೇವೆ ಸಲ್ಲಿಸದ್ದಾರೆ. ಮಹಿಳೆಯರಿಗಾಗಿ ಹೊಲಿಗೆ ಸೇರಿದಂತೆ ವಿವಿಧ ತರಬೇತಿಗಳನ್ನು ಹಮ್ಮಿಕೊಂಡು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ. ಅವರ ಉತ್ತಮ ಕೆಲಸಗಳನ್ನು ಮುಂದುವರೆಸಲಾಗಿದ್ದು, ಪ್ರತಿ ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿಸುಮಾರು 45 ಬಡ ಮಕ್ಕಳಿಗೆ ನೋಟಬುಕ್ ಮತ್ತು ಪೆನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಂಸ್ಥೆಯ ಕಾರ್ಯದರ್ಶಿ ವೀರೇಶ ಕುಬಸದ, ಲಲಿತಾ ಸಿಕ್ಕೇದೇಸಾಯಿ, ಬಸಮ್ಮ ಬೆಳೆಬಾಳ, ಗಾಯತ್ರಿ ಮುಂಡರಗಿ, ಸವಿತಾ ಮುಂಡರಗಿ ಭಾಗವಹಿಸಿದ್ದರು.

ಪೋಟೋ.1

ಲೀಲಾಬಾಯಿ ಸಿಕ್ಕೇದೇಸಾಯಿ ಅವರ ಸ್ಮರಣಾರ್ಥ ಅಣ್ಣಿಗೇರಿ ಜ್ಯೋತಿ ಮಹಿಳಾ ಮಂಡಳದಲ್ಲಿಸೋಮವಾರ ಬಡ ಮಕ್ಕಳಿಗೆ ನೋಟಬುಕ್ , ಪೆನ್ ವಿತರಿಸಲಾಯಿತು.