ನಯನಾತಾರ

Contributed byshubha.hegde@timesgroup.com|Vijaya Karnataka
nayanatara a model of healthy living
ಟಾಕ್ಸಿಕ್ ನಟಿಯ ಹೆಲ್ದಿ ಲೈಫ್ ಸ್ಟೈಲ್

ಇಂಟ್ರೊ: ಟಾಕ್ಸಿಕ್ ಚಿತ್ರದ ನಟಿ ನಯನಾತಾರಾ ಅವರ ಶಿಸ್ತುಬದ್ಧ ಜೀವನಶೈಲಿಯಲ್ಲಿಏನೆಲ್ಲಇದೆ ಎಂಬ ಮಾಹಿತಿ ಇಲ್ಲಿದೆ.
ಲವಲವಿಕೆ ಸುದ್ದಿಲೋಕ

ಯಶ್ ಅಭಿನಯದ ‘ಟಾಕ್ಸಿಕ್ ’ ಚಿತ್ರದಲ್ಲಿಪ್ರಮುಖ ಪಾತ್ರದಲ್ಲಿಮಿಂಚಿರುವ ನಯನಾತಾರಾ ತಮ್ಮ ನಲವತ್ತರ ವಯೋಮಾನದಲ್ಲೂಹದಿಹರೆಯದ ಲವಲವಿಕೆಯನ್ನು ಕಾಪಾಡಿಕೊಂಡಿದ್ದಾರೆ. ಅದಕ್ಕೆ ಅವರ ಆರೋಗ್ಯಪೂರ್ಣ ಜೀವನಶೈಲಿಯೇ ಪ್ರಮುಖ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ. ನಯನತಾರಾ ತಮ್ಮ ಸೌಂದರ್ಯ ಹಾಗೂ ದೈಹಿಕ ದಾರ್ಢ್ಯತೆಯನ್ನು ಕಾಯ್ದುಕೊಳ್ಳಲು ಸರಳ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಅನುಸರಿಸುತ್ತಾರೆ.

ಮನೆಯೂಟಕ್ಕೆ ಆದ್ಯತೆ

ಕಠಿಣ ಡಯಟ್ ನಲ್ಲಿಹೆಚ್ಚೇನೂ ನಂಬಿಕೆ ಇಡದ ಇವರು ತಮ್ಮ ಆಹಾರವನ್ನು ಸರಳವಾಗಿಟ್ಟುಕೊಳ್ಳಲು ಬಯಸುತ್ತಾರೆ. ಮನೆಯಲ್ಲಿಸಿದ್ಧಪಡಿಸಿದ ಸಾಂಪ್ರದಾಯಿಕ ಅಡುಗೆಗೆ ಇವರು ಆದ್ಯತೆ ನೀಡುತ್ತಾರೆ. ಚಿತ್ರೀಕರಣದ ಸ್ಥಳಗಳಲ್ಲೂಸಂಸ್ಕರಿಸಿದ ಆಹಾರವನ್ನು ಸೇವಿಸುವುದಿಲ್ಲ. ಅನ್ನ ರಸಂನಂತಹ ಸರಳ ಹಾಗೂ ಪೌಷ್ಟಿಕ ಮನೆಯೂಟವನ್ನೇ ಸೇವಿಸುತ್ತಾರೆ.

ಸಮತೋಲಿತ ಪೋಷಕಾಂಶ

ಕಾರ್ಬೋಹೈಡ್ರೇಟ್ , ಪ್ರೊಟೀನ್ ಮತ್ತು ಖನಿಜಾಂಶಗಳ ಸರಿಯಾದ ಪ್ರಮಾಣವಿರುವ ತಾಜಾ ತರಕಾರಿ, ಹಣ್ಣುಗಳು, ಮೊಟ್ಟೆ ಹಾಗೂ ಮಾಂಸವನ್ನು ದಿನನಿತ್ಯದ ಆಹಾರದಲ್ಲಿಅಳವಡಿಸಿಕೊಂಡಿದ್ದಾರೆ. ಆಹಾರ ಸೇವನೆ ಜೊತೆಗೆ ದೇಹ ಸದಾ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿದೇಹದ ನಿರ್ಜಲೀಕರಣ ತಡೆಯಲು ದಿನವೂ ಎಳನೀರು ಕುಡಿಯುತ್ತಾರೆ.

ದೈಹಿಕ ಹಾಗೂ ಮಾನಸಿಕ ಸಮತೋಲನ

ಸ್ನಾಯುಗಳ ದಾರ್ಢ್ಯತೆ ಮತ್ತು ಶಕ್ತಿ ಹೆಚ್ಚಿಸಲು ಜಿಮ್ ನಲ್ಲಿಬೆವರು ಸುರಿಸುತ್ತಾರೆ. ಆದರೆ ಅಷ್ಟಕ್ಕೆ ತಮ್ಮ ವ್ಯಾಯಾಮವನ್ನು ಸೀಮಿತಗೊಳಿಸದೆ

ಮನಸ್ಸಿನ ಏಕಾಗ್ರತೆ ಹಾಗೂ ಶಾಂತಿಗಾಗಿ ನಿತ್ಯ ಯೋಗಾಭ್ಯಾಸ ಮಾಡುತ್ತಾರೆ.

ಸರಿಯಾದ ನಿದ್ರೆ

ಶೂಟಿಂಗ್ ನಡುವೆ ಅತಿಯಾಗಿ ದಣಿಯುತ್ತಾರೆ. ಆದರೆ ಶ್ರಮದ ಜೊತೆಗೆ ವಿಶ್ರಾಂತಿಯೂ ಅಗತ್ಯ ಎಂಬುದನ್ನು ಅವರು ಮನಗೊಂಡಿದ್ದಾರೆ. ಹೀಗಾಗಿ ದೇಹಕ್ಕೆ ಅಗತ್ಯವಿರುವ ವಿಶ್ರಾಂತಿ ಹಾಗೂ ಸುಖಕರ ನಿದ್ರೆಗೆ ನಯನತಾರಾ ಪ್ರಾಮುಖ್ಯತೆ ನೀಡುತ್ತಾರೆ.