ದಲಿತ ವಿರೋಧಿ ಬಿಜೆಪಿಗೆ ತಕ್ಕ ಪಾಠ

Contributed byVinayaka Naik P|Vijaya Karnataka
a community ready to teach a lesson to the anti dalit bjp in the 2028 elections
ದಲಿತ ವಿರೋಧಿ ಬಿಜೆಪಿಗೆ ತಕ್ಕ ಪಾಠ

ದಾವಣಗೆರೆ: ದಲಿತ ವಿರೋಧಿ ಬಿಜೆಪಿ ಬರುವ 2028ರ ವಿಧಾನಸಭಾ ಚುನಾವಣೆಯಲ್ಲಿರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ 2028ರ ವಿಧಾನಸಭಾ ಚುನಾವಣೆಯಲ್ಲಿರಾಜ್ಯದ ಯಾವುದೇ ಕ್ಷೇತ್ರದಲ್ಲಿಸ್ಪರ್ಧಿಸಿದರೂ ಅವರ ವಿರುದ್ಧ ಹೋರಾಟ ಶತಸಿದ್ಧ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ವೀರಣ್ಣ ತಿಳಿಸಿದ್ದಾರೆ.
‘‘ಜನಾರ್ದನ್ ರೆಡ್ಡಿ ಅವರ ರಾಜಕೀಯ ಬೆಳವಣಿಗೆಗೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಕೊಡುಗೆ ಇದೆ. ನಾಯಕ ಸಮಾಜದಿಂದಲೇ ಲಾಭ ಪಡೆದುಕೊಂಡು, ಇದೀಗ ಅದೇ ಸಮಾಜವನ್ನು ಎತ್ತಿಕಟ್ಟುತ್ತಿರುವ ಅವರ ನಡವಳಿಕೆಯನ್ನು ರಾಜ್ಯದ ನಾಯಕ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ರೆಡ್ಡಿ ಹಾಗೂ ಶ್ರೀರಾಮುಲು ಅವರು ನಾಯಕ ಸಮಾಜದ ಹೆಸರಿನಲ್ಲಿರಾಜಕೀಯ ಲಾಭ ಪಡೆದು, ನಂತರ ಸಮಾಜವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಮಾಜ ಹಾಗೂ ನಾಯಕ ಸಮಾಜದ ನಾಯಕರ ವಿರುದ್ಧ ಇದೇ ರೀತಿ ಮಾತನಾಡಿದರೆ ಮುಂಬರುವ ಚುನಾವಣೆಯಲ್ಲಿಸಮುದಾಯ ಮತ್ತು ರಾಜ್ಯದ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ’’ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಫೋಟೋ: 2ಡಿವಿಜಿ ವೀರಣ್ಣ