ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ: ಎಚ್ .ಡಿ.ಕುಮಾರಸ್ವಾಮಿ

Contributed byshashidhar.nandikal@timesgroup.com|Vijaya Karnataka
harassment of farmers in bidadi hd kumaraswamy
ಬೆಂಗಳೂರು: ಬಿಡದಿಯ ಭೈರಮಂಗಲದಲ್ಲಿಪ್ರತಿ ಭಟಿಸಲು ಮುಂದಾದ ರೈತರ ಮೇಲೆ ಅಮಾನುಷವಾಗಿ ದಬ್ಬಾಳಿಕೆ ನಡೆಸಲಾಗಿದ್ದು, ‘ಹಿರಣ್ಯಾಕ್ಷ’ನ ಪಾಪದ ಕೊಡ ತುಂಬುತ್ತಿದೆ ಎಂದು ಕೇಂದ್ರ ಸಚಿವ ಎಚ್ .ಡಿ. ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೊಸದಿಲ್ಲಿಯಿಂದ ಮಾಧ್ಯಮ

ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘‘ರಾಜ್ಯದಲ್ಲಿನಾಗರಿಕ ಸರಕಾರವಿದೆಯೋ? ಅಥವಾ ರಾಕ್ಷಸ ಸರಕಾರವಿದೆಯೋ?,’’ ಎಂದು ಪ್ರಶ್ನಿಸಿದ್ದಾರೆ. ‘‘ತಮ್ಮ ಭೂಮಿ ಉಳಿಸಿಕೊಳ್ಳಲು ಬಿಡದಿಯ ರೈತರು ಶಾಂತಿಯುತವಾಗಿ ಪ್ರತಿಭಟಿಸುವಾಗ ಬಲಪ್ರಯೋಗದಿಂದ ಹತ್ತಿಕ್ಕಲು ಯತ್ನಿಸಿದ ದುಷ್ೊ್ರಯತ್ನ ಖಂಡನಾರ್ಹ. ಭೈರಮಂಗಲದಲ್ಲಿರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ ‘ದೈವದ್ರೋಹ’ಕ್ಕೂ ಮೀರಿದ್ದು,’’ ಎಂದು ಎಚ್ .ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.