ಕಸ್ತೂರಿ ರಂಗನ್ ವರದಿ: ಸಾಧಕ- ಬಾಧಕ ಚರ್ಚಿಸಿ, ಸರಕಾರ ನಿರ್ಧಾರ ಕೈಗೊಳ್ಳಲಿ

Contributed bytejas.homshi01@gmail.com|Vijaya Karnataka
kasturi rangan report state governments next step
ಕಸ್ತೂರಿ ರಂಗನ್ ವರದಿ : ಸಾಧಕ- ಬಾಧಕ ಚರ್ಚಿಸಿ, ಸರಕಾರ ನಿರ್ಧಾರ ಕೈಗೊಳ್ಳಲಿ

ಮೈಸೂರು: ಕಸ್ತೂರಿರಂಗನ್ ಸಮಿತಿ ವರದಿ ಆಧರಿಸಿ ಪಶ್ಚಿಮಘಟ್ಟ ಸಂರಕ್ಷಣೆ ಕುರಿತಾಗಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಅದೇ ಅಂತಿಮವಲ್ಲ. ಅಧಿಕೃತ ಅಧಿಸೂಚನೆ ಹೊರಡಿಸುವ ಮುನ್ನ ಸಾಧಕ- ಬಾಧಕಗಳನ್ನು ರಾಜ್ಯ ಸರಕಾರ ಚರ್ಚಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅರಮನೆ ಆವರಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಪಶ್ಚಿಮಘಟ್ಟ ಸಂರಕ್ಷಣೆ ಕುರಿತು ಅಂತಿಮ ಅಧಿಸೂಚನೆ ಹೊರಡಿಸಿದರೆ, ಈ ಘಟ್ಟದ ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳಿಗೆ ತೊಂದರೆಯಾಗಲಿದೆ. ಕರಡು ಅಧಿಸೂಚನೆಯಲ್ಲಿಚರ್ಚೆ ಮಾಡಿ, ಕೇಂದ್ರ ಸರಕಾರಕ್ಕೆ ವಾಸ್ತವತೆ ತಿಳಿಸಬೇಕು,’’ ಎಂದರು.

ಯುಪಿಎ ಸರಕಾರ ಇದ್ದಾಗಲೇ ವರದಿ: ‘‘ಯುಪಿಎ ಕಾಲದಲ್ಲಿಯೇ ಹುಟ್ಟಿದ ವರದಿ ಇದಾಗಿದೆ. ಆಗ ಕೇಂದ್ರದಲ್ಲಿಕಾಂಗ್ರೆಸ್ ಸರಕಾರ ಇತ್ತು. ಈಗ ಕರ್ನಾಟಕದಲ್ಲಿಇದೆ. ಸರಿಯಾದ ಚೌಕಟ್ಟು ರೂಪಿಸಿ ಸ್ಥಳೀಯರಿಗೆ ತೊಂದರೆಯಾಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು,’’ ಎಂದು ಹೇಳಿದರು.

ಪಾರದರ್ಶಕವಾಗಿರಲಿ: ‘‘ಜಿಲ್ಲಾಡಳಿತವು ದಸರಾ ಮಹೋತ್ಸವ ವೀಕ್ಷಣೆಗೆ ನೀಡುತ್ತಿರುವ ಟಿಕೆಟ್ ಒಂದೇ ವೆಬ್ ಸೈಟ್ ಮೂಲಕ ವಿತರಿಸಬೇಕು. ಟಿಕೆಟ್ ಗಳಿಗೆ ಕ್ರಮ ಸಂಖ್ಯೆ ನೀಡಬೇಕು. ವಿತರಣೆಯಲ್ಲಿರಾಜಕಾರಣಿಗಳು ಭಾಗಿಯಾಗಬಾರದು, ಜಿಲ್ಲಾಡಳಿತ ಟಿಕೆಟ್ ವಿತರಣೆಯನ್ನು ಪಾರದರ್ಶಕವಾಗಿ ಮಾಡಬೇಕು,’’ ಎಂದು ಸಲಹೆ ನೀಡಿದರು.