ಬ್ಯೂಟಿ ಟಿಫ್ಸ್

Contributed byshubha.hegde@timesgroup.com|Vijaya Karnataka
Vijay Karnataka
ನೋ ಮೇಕಪ್ ಲುಕ್ ಗಾಗಿ

ಮುಖದ ಮೇಲೆ ಬಣ್ಣಗಳು ಇಲ್ಲದೆ ಮನೆಯಿಂದ ಹೊರ ಬರಲು ಅಸಾಧ್ಯ ಎನ್ನುವಷ್ಟು ಮೇಕಪ್ ಮೇಲೆ ಅವಲಂಬನೆ ಬೆಳೆಸಿಕೊಳ್ಳುತ್ತಾರೆ ಕೆಲವರು. ಅವರ ಆತ್ಮವಿಶ್ವಾಸವೂ ಇದೇ ಮೇಕಪ್ ನಲ್ಲಿಕೆಲವೊಮ್ಮೆ ಇರುತ್ತದೆ. ಆದರೆ ಮೇಕಪ್ ಇದ್ದರೂ ಇಲ್ಲದಂತೆ ಕಾಣುವ ಅಥವಾ ಕಡಿಮೆ ಮೇಕಪ್ ನಲ್ಲೂಸುಂದರವಾಗಿ ಕಾಣಬಹುದು. ಮೇಕಪ್ ಇಲ್ಲದಂತೆ ಆದರೆ ಸುಂದರ ವದನಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಿ.
ನೋ ಮೇಕಪ್ ಲುಕ್ ಪಡೆಯಲು ಹೈಡ್ರೇಷನ್ ಹಾಗೂ ಪ್ರೈಮಿಂಗ್ ಕೀ ಇದ್ದ ಹಾಗೆ. ಲೈಟ್ ವೇಚ್ ಬೇಸ್ ಗಾಗಿ ಬಿಬಿ ಕ್ರೀಮ್ ಅಥವಾ ಶೀರ್ ಫೌಂಡೇಷನ್ ಬಳಸಿ. ಇದು ನೈಸರ್ಗಿಕ ಲುಕ್ ನೀಡುತ್ತದೆ. ತಿಳಿ ವರ್ಣದ ಹಾಗೂ ಕ್ರೀಂ ಬೇಸ್ಡ್ ಬ್ಲಷ್ ಬಳಸಿ. ಮುಖ ನೈಸರ್ಗಿಕವಾಗಿಯೇ ಹೊಳೆಯುತ್ತದೆ. ಕಂದು ಬಣ್ಣದ ಐಲೈನರ್ ಹಾಗೂ ಮಸ್ಕರಾ ನಿಮ್ಮ ಸೌಂದರ್ಯವನ್ನು ಇಮ್ಮಡಿಸುತ್ತದೆ. ನೈಸರ್ಗಿಕ ತುಟಿಯ ಬಣ್ಣ ಒಳಗೊಂಡ ಟಿಂಟೆಡ್ ಲಿಪ್ ಬಾಮ್ ಬಳಸಿ. ದಿನಪೂರ್ತಿ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ ಕೊನೆಯಲ್ಲಿಬಳಸುವ ಸೆಟ್ಟಿಂಗ್ ಸೆ್ೊ್ರ.