ಪಟ್ಟಣದ ನಿವಾಸಿಗಳ ಆಸ್ತಿಗಳಿಗೆ ಸಮರ್ಪಕ ಹಾಗೂ ವ್ಯವಸ್ಥಿತ ದಾಖಲೆ ಒದಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಇ-ಸ್ವತ್ತು ಆಂದೋಲನಕ್ಕೆ ಶಾಸಕ ಎಂ.ಆರ್ . ಮಂಜುನಾಥ್ ಚಾಲನೆ ನೀಡಿದರು.ಆಂದೋಲನದ ಅಂಗವಾಗಿ ಶಾಸಕ ಮಂಜುನಾಥ್ ಅವರು ಪಟ್ಟಣದ ವಿವಿಧ ವಾರ್ಡ್ ಗಳಿಗೆ ತೆರಳಿ, ಸಾರ್ವಜನಿಕರಿಗೆ ಇ-ಸ್ವತ್ತು ದಾಖಲೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಇ-ಸ್ವತ್ತು ಮಾಡಿಸಿಕೊಂಡಿರುವ ಬಗ್ಗೆ ವಿಚಾರಿಸಿ, ಇನ್ನೂ ಮಾಡಿಸಿಕೊಳ್ಳದ ಆಸ್ತಿ ಮಾಲೀಕರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆಂದೋಲನದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ನಂತರ ಮಾತನಾಡಿದ ಶಾಸಕರು,‘‘ಇ-ಸ್ವತ್ತು ದಾಖಲೆಯಿಂದ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಇ-ಸ್ವತ್ತು ಮಾಡಿಸಿಕೊಳ್ಳಬೇಕು,’’ ಎಂದರು.
‘‘ಇ-ಸ್ವತ್ತು ಮಾಡಿಸಿಕೊಳ್ಳಲು ಸಾರ್ವಜನಿಕರು ಕಚೇರಿಗಳಿಗೆ ಪದೇಪದೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ವಾರ್ಡ್ ನಲ್ಲೂಅರ್ಹ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ಮಾಡಿಕೊಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು,’’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿಪ.ಪಂ. ಮುಖ್ಯಾಧಿಕಾರಿ ರೇಖಾ, ಎನ್ . ಸಿದ್ದರಾಜು, ಎಸ್ . ಸಿದ್ದರಾಜು, ದೇವರಾಜು, ರವೀಂದ್ರ, ಬಸವರಾಜು, ಲಿಂಗರಾಜು, ಮಾದೇಶ್ , ವೆಂಕಟೇಶ್ , ಮಹೇಶ್ , ಚಂದ್ರು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಅಊಓ19ಊಓಖ03
ಹನೂರು ಪಟ್ಟಣದ ನಿವಾಸಿಗಳ ಆಸ್ತಿಗಳಿಗೆ ಸಮರ್ಪಕ ಹಾಗೂ ವ್ಯವಸ್ಥಿತ ದಾಖಲೆ ಒದಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಇ-ಸ್ವತ್ತು ಆಂದೋಲನಕ್ಕೆ ಶಾಸಕ ಎಂ.ಆರ್ . ಮಂಜುನಾಥ್ ಚಾಲನೆ ನೀಡಿದರು.