ಅಗ್ರಹಾರ ಗ್ರಾಮದಲ್ಲಿಕೃಷಿ ತರಬೇತಿ ಕಾರ ್ಯಕ್ರಮ

Contributed byvkkonanur@gmail.com|Vijaya Karnataka
agricultural training program introduces new agricultural horizons in agrahara village
ವಿಕ ಸುದ್ದಿಲೋಕ ಕೊಣನೂರು

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಮನಾಥಪುರ ವಲಯದ ಅಗ್ರಹಾರ ಗ್ರಾಮದಲ್ಲಿಕೃಷಿ ತರಬೇತಿ ಕಾರ ್ಯಕ್ರಮ ನಡೆಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಸಾದ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಾಬು ಹಾಗೂ ಪ್ರಗತಿ ಪರ ಕೃಷಿಕರು, ಮುಖಂಡರು ದೀಪ ಬೆಳಗುವುದರ ಮೂಲಕ ಕಾರ ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಗತಿ ಪರ ಕೃಷಿಕ ಯೋಗೇಶ್ ಮಾತನಾಡಿ, ‘‘ಕೃಷಿ ಮಾಡುವ ಮುನ್ನ ಎಚ್ಚರ ವಹಿಸಬೇಕಾದ ಮಣ್ಣಿನ ಪರೀಕ್ಷೆ ಬಗ್ಗೆ ಸವಿಸ್ತಾರವಾಗಿ ತಿಳಿಸಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪದ್ದತಿಯನ್ನು ಅನುಸರಿಸಿ ಬೇಕಾದ ಕ್ರಮಗಳ ಬಗ್ಗೆ ಮತ್ತು ಸಾವಯವ ಗೊಬ್ಬರ ಬಳಕೆ ಮಾಡಿ ಕೃಷಿ ಮಾಡುವ ಬಗ್ಗೆ ಮತ್ತು ಆರೋಗ್ಯಕರ ಗುಣಮಟ್ಟದ ಬೆಳೆಗಳನ್ನು ಬೆಳೆದು ಮಾರುಕಟ್ಟೆಯಲ್ಲಿರೈತನು ಉತ್ತಮ ಬೆಲೆಯನ್ನು ನಿಗದಿಸಿ ಮಾರಾಟ ಮಾಡುವ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಪ್ರಸಾದ್ ಮಾತನಾಡಿ,‘‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾರ್ವಜನಿಕ ಉಪಯೋಗಕ್ಕಾಗಿ ಹಲವಾರು ಕಾರ ್ಯಕ್ರಮಗಳನ್ನು ಆಯೋಜಿಸುತ್ತಿದೆ. ರೈತರು ಕಾರ ್ಯಕ್ರಮದ ಸದುಪಯೋಗ ಪಡೆದುಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆದು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಅತಿ ಹೆಚ್ಚು ಬಳಕೆ ಮಾಡಿ ಕೃಷಿ ಮಾಡುವುದರ ಬಗ್ಗೆ ಗಮನಹರಿಸಬೇಕು,’’ಎಂದು ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಾಬು ಮಾತನಾಡಿ,‘‘ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಪದ್ಧತಿ ಬಗ್ಗೆ ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು ಇತರೆ ಬೆಳೆಗಳ ಜತೆಗೆ ಏಕ ಬೆಳೆಗೆ ಸೀಮಿತವಾಗದೆ ಮಿಶ್ರ ಬೆಳೆಗಳಾದ ಮೆಣಸು, ಕೆಸೆ, ಸುವರ್ಣ ಗೆಡ್ಡೆ, ಬಾಳೆ ಇನ್ನಿತರ ಬೆಳೆಗಳನ್ನು ಹಾಗೂ ಕೃಷಿಯೊಂದಿಗೆ ಉಪಕೃಷಿಗಳಾದ ಮೀನು ಸಾಕಣೆ, ಜೇನು ಸಾಕಣೆ ಇತರೆ ಉಪ ಕೃಷಿಗಳನ್ನು ಮತ್ತು ಸಮಗ್ರ ಕೃಷಿ ಮಾಡಿದಲ್ಲಿರೈತನು ಲಾಭದಾಯಕವಾಗಿ ಬೆಳೆಯಬಹುದು,’’ಎಂದು ತಿಳಿಸಿದರು.

ಗ್ರಾಪಂ ಕಾರ ್ಯದರ್ಶಿ ಧರ್ಣೇಶ್ ಗೌಡ, ಗ್ರಾಮದ ಮುಖಂಡ ವೀರಪ್ಪ, ಒಕ್ಕೂಟದ ಅಧ್ಯಕ್ಷ ಶಿವಣ್ಣ, ವಲಯ ಮೇಲ್ವಿಚಾರಕ ರವೀಂದ್ರ, ಕೃಷಿ ಮೇಲ್ವಿಚಾರಕ ಎಂ.ಸುನೀಲ್ ಕುಮಾರ್ , ಸೇವಾ ಪ್ರತಿನಿಧಿ ಲತಾ,ಗ್ರಾಮದ ರೈತರು ಹಾಜರಿದ್ದರು.

ಏಖN2ಓN್ಕ3 ರಾಮನಾಥಪುರ ವಲಯದ ಅಗ್ರಹಾರ ಗ್ರಾಮದಲ್ಲಿನಡೆದ ಕೃಷಿ ತರಬೇತಿ ಕಾರ ್ಯಕ್ರಮವನ್ನು ಗ್ರಾಪಂ ಮಾಜಿ ಅಧ್ಯಕ್ಷ ಪ್ರಸಾದ್ , ತಾಲೂಕು ಯೋಜನಾಧಿಕಾರಿ ಬಾಬು ಹಾಗೂ ಪ್ರಗತಿ ಪರ ಕೃಷಿಕ ಯೋಗೇಶ್ ಉದ್ಘಾಟಿಸಿದರು.