ಪತ್ರ ವೃಕ್ಷ

Contributed byShridevi Ambekallu|Vijaya Karnataka
paalisu gajavadana the best insights on devotion ideologies and festivals
ಸಕಾಲಿಕ ಸಂಚಿಕೆ

ಸೆಪ್ಟೆಂಬರ್ 12ರ ಬೋಧಿವೃಕ್ಷ ಸಂಚಿಕೆಯಲ್ಲಿಪ್ರಕಟವಾದ ‘ಪಾಲಿಸು ಗಜವದನ‘ ಲೇಖನಗಳು ಸಕಾಲಿಕ. ವರ್ಷಕ್ಕೊಮ್ಮೆ ಬಂದು ಭಕ್ತರಲ್ಲಿಸಂತಸ ಮೂಡಿಸುವ, ಸ್ವಾತಂತ್ರ್ಯ ಚಳುವಳಿಗೆ ಶಕ್ತಿ ತುಂಬಿದ, ದೇಶ ವಿದೇಶಗಳಲ್ಲಿಯೂ ಭಕ್ತರನ್ನು ಹೊಂದಿದ ಮೋದಕ ಪ್ರಿಯನ ಕುರಿತಾದ ಲೇಖನ ಮನಸ್ಸಿಗೆ ಮುದ ನೀಡಿತು.
ಎಸ್ ಜಿ ಹವಾಲ್ದಾರ |ನವನಗರ ಬಾಗಲಕೋಟೆ

---

ಚಿತ್ರ -ಬರಹ ಆಕರ್ಷಕ

ಸೆಪ್ಟೆಂಬರ್ 12-18 ರ ಬೋಧಿವೃಕ್ಷ ಆಕರ್ಷಕವಾಗಿ ಮೂಡಿಬಂದಿದೆ. ಗೌರಿ ಗಣೇಶ ಹಬ್ಬಗಳ ಕುರಿತ ಚಿತ್ರ ಬರಹಗಳು ವಿಚಾರಪ್ರದವಾಗಿ ಗಮನಸೆಳೆಯುವಂತಿದ್ದವು. ಅಬಾಲಹವೃದ್ಧರಾದಿಯಾಗಿ ಎಲ್ಲರ ಮೆಚ್ಚಿನ ದೇವರಾದ ಗಣೇಶನನ್ನು ಕುರಿತ ಬರಹಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.

ಚಂದ್ರಶೇಖರ್ | ಕಣಜನಹಳ್ಳಿ