ಪು. 1 ಲೀಡ್

Contributed byShridevi Ambekallu|Vijaya Karnataka
special viewing cancellation for tirupati brahmotsav
ಶ್ರೀವಾರಿ ಬ್ರಹ್ಮೋತ್ಸವ

ತಿರುಮಲದ ಬೆಟ್ಟದೊಡೆಯನ ವೈಭವದ ಉತ್ಸವ
--------------

-ಸೆ. 16ರಿಂದ ಆರಂಭಗೊಂಡು 9 ದಿನಗಳ ವೈಭವ, ವಿವಿಧ ಉತ್ಸವಗಳು

- ನವರಾತ್ರಿ ಬ್ರಹ್ಮೋತ್ಸವವು ಅಕ್ಟೋಬರ್ 12ರಿಂದ 20ರವರೆಗೆ

- ಸಿದ್ಧತೆ, ಅಲಂಕಾರ ವೈಭವ, ಪೌರಾಣಿಕ ಹಾಗೂ ತಿರುಮಲದ ಅಪರೂಪದ ಚಿತ್ರ ಪ್ರದರ್ಶನ

- ಬ್ರಹ್ಮನಿಂದಲೇ ನಡೆಯುವ ಬ್ರಹ್ಮೋತ್ಸವ ಎಂಬ ನಂಬಿಕೆ

- ಸೆ. 16ರಿಂದ 9ದಿನಗಳ ಕಾಲ ತಿರುಪತಿಯಲ್ಲಿಉತ್ಸವಗಳ ವೈಭವ

--------

ಬ್ಲರ್ಬ್ -....

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಮಹೋತ್ಸವವಾದ ಶ್ರೀವಾರಿ ಬ್ರಹ್ಮೋತ್ಸವವು ಸನಾತನ ಧಾರ್ಮಿಕ ಪರಂಪರೆಯಲ್ಲಿವಿಶೇಷ ಸ್ಥಾನ ಪಡೆದಿದೆ. ಲಕ್ಷಾಂತರ ಭಕ್ತರು ಭಾಗವಹಿಸುವ ಈ ಉತ್ಸವವು ಭಕ್ತಿ, ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಿದೆ. ಪ್ರತಿ ವರ್ಷ ತಿರುಮಲದಲ್ಲಿಒಂಬತ್ತು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿಶ್ರೀ ಮಲಯಪ್ಪಸ್ವಾಮಿಯ ಉತ್ಸವಮೂರ್ತಿಯನ್ನು ವಿವಿಧ ವಾಹನಗಳಲ್ಲಿಮೆರವಣಿಗೆ ಮಾಡಲಾಗುತ್ತದೆ. ಧ್ವಜಾರೋಹಣದೊಂದಿಗೆ ಆರಂಭವಾಗುವ ಉತ್ಸವವು ಚಕ್ರಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಸಮಾಪ್ತಿಯಾಗುತ್ತದೆ.

---

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವ ಆರಂಭಗೊಂಡಿದ್ದು ಸೆ. 23ರವರೆಗೆ ವಿವಿಧ ವಾಹನ ಉತ್ಸವಗಳು, ಅಲಂಕಾರ ಸೇವೆ ನಡೆಯಲಿದೆ. ದೇಶ -ವಿದೇಶದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲು ಟಿಟಿಡಿ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಉತ್ಸವಗಳು ಅದ್ಧೂರಿಯಾಗಿ ಆರಂಭವಾಗಿದ್ದು, ತಿರುಮಲ ಬೆಟ್ಟಗಳು ವೈಕುಂಠವನ್ನು ನೆನಪಿಸುವಂತೆ ಕಂಗೊಳಿಸುತ್ತಿವೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಟಿಟಿಡಿ ಹಲವು ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಎರಡು ಬಾರಿ ಬ್ರಹ್ಮೋತ್ಸವ

ಈ ವರ್ಷ ಅಧಿಕ ಮಾಸ ಇರುವುದರಿಂದ ಶ್ರೀವಾರಿಗೆ ಎರಡು ಬಾರಿ ಬ್ರಹ್ಮೋತ್ಸವಗಳು ನಡೆಯಲಿವೆ. ಮೊದಲಿಗೆ ಭಾದ್ರಪದ ಮಾಸದಲ್ಲಿಸಾಲಕಟ್ಲಬ್ರಹ್ಮೋತ್ಸವ ಹಾಗೂ ನಂತರ ಆಶ್ವಯುಜ ಮಾಸದಲ್ಲಿನವರಾತ್ರಿ ಬ್ರಹ್ಮೋತ್ಸವವನ್ನು ಆಯೋಜಿಸಲಾಗುತ್ತದೆ.

----

ವಿವಿಧ ಯೋಜನೆಗಳಿಗೆ ಚಾಲನೆ

ಬ್ರಹ್ಮೋತ್ಸವದ ಮೊದಲ ದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲಗೆ ಭೇಟಿ ನೀಡಿ, ರಾಜ್ಯ ಸರಕಾರದ ಪರವಾಗಿ ದೇವರಿಗೆ ರೇಶ್ಮೆ ವಸ್ತ್ರಗಳನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿಅವರು ಸುಮಾರು 900 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

---ಧಿಧಿಧಿಧಿಧಿಧಿಧಿಧಿಧಿ-----------------

ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ವಾಹನ ಸೇವೆಗಳು: ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಮಲಯಪ್ಪ ಸ್ವಾಮಿಯ ವಿವಿಧ ವಾಹನ ಸೇವೆಗಳು ಜರುಗಲಿವೆ.

ಸೆ. 19ರಂದು ಗರುಡ ಸೇವೆ, ಸ್ವರ್ಣ ರಥೋತ್ಸವ ಹಾಗೂ ಚಕ್ರಸ್ನಾನ. 20ರಂದು ಸ್ವರ್ಣ ರಥೋತ್ಸವ, 22ರಂದು ಮಹಾ ರಥೋತ್ಸವ ಹಾಗೂ 23ರಂದು ಬೆಳಗ್ಗೆ ಪುಷ್ಕರಿಣಿಯಲ್ಲಿಚಕ್ರಸ್ನಾನದೊಂದಿಗೆ ಬ್ರಹ್ಮೋತ್ಸವ ಮುಕ್ತಾಯಗೊಳ್ಳಲಿದೆ.

--

ವಿಶೇಷ ದರ್ಶನಗಳ ರದ್ದು

ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಕಲ್ಪಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ನಿರ್ಧಾರ ಕೈಗೊಂಡಿದೆ. ಉತ್ಸವದ ದಿನಗಳಲ್ಲಿವಿಐಪಿ ಬ್ರೇಕ್ ದರ್ಶನ, ವೃದ್ಧರು, ದಿವ್ಯಾಂಗರು ಮತ್ತು ಶಿಫಾರಸು ಪತ್ರಗಳ ಆಧಾರಿತ ಪ್ರಿವಿಲೇಜ್ ದರ್ಶನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

---

ಕಟ್ಟು ನಿಟ್ಟಿನ ಭದ್ರತೆ

ಬ್ರಹ್ಮೋತ್ಸವದ ಯಶಸ್ವಿ ನಿರ್ವಹಣೆಗೆ 3,000ಕ್ಕೂ ಹೆಚ್ಚು ಪೊಲೀಸರು, ಟಿಟಿಡಿ ಭದ್ರತಾ ಸಿಬ್ಬಂದಿ ಹಾಗೂ ಸಾವಿರಾರು ನೈರ್ಮಲ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಾರಿಗೆ ಮತ್ತು ಉಚಿತ ಅನ್ನಪ್ರಸಾದ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ.

---

ವಿಶೇಷ ದರ್ಶನ ರದ್ದು

ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವದ ಸಂದರ್ಭದಲ್ಲಿಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಉತ್ಸವದ ದಿನಗಳಲ್ಲಿಭಕ್ತರ ಭಾರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾರೀತಿಯ ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ. ಪ್ರೋಟೋಕಾಲ್ ಗಣ್ಯರಿಗೆ ಮಾತ್ರ ವಿಐಪಿ ಬ್ರೇಕ್ ದರ್ಶನವನ್ನು ಸೀಮಿತಗೊಳಿಸಲಾಗಿದ್ದು, ಸಾಮಾನ್ಯ ಶಿಫಾರಸು ಪತ್ರಗಳ ಆಧಾರದ ಮೇಲೆ ನೀಡಲಾಗುತ್ತಿದ್ದ ಬ್ರೇಕ್ ದರ್ಶನಗಳನ್ನು ಸ್ಥಗಿತಗೊಳಿಸಲಾಗಿದೆ.

----

ಛಾಯಾಚಿತ್ರ ಪ್ರದರ್ಶನ

ಶ್ರೀವಾರಿ ಬ್ರಹ್ಮೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಿವಿಧ ಇಲಾಖೆಗಳ ವತಿಯಿಂದ ಕಲ್ಯಾಣ ವೇದಿಕೆಯಲ್ಲಿಆಯೋಜಿಸಿರುವ ಪ್ರದರ್ಶನಗಳು ಭಕ್ತರನ್ನು ಆಕರ್ಷಿಸುತ್ತಿವೆ.

ಪೌರಾಣಿಕ ಕಥಾನಕಗಳು

ಪ್ರದರ್ಶನದ ಪ್ರವೇಶದ್ವಾರದಲ್ಲಿಶ್ರೀ ಮಹಾವಿಷ್ಣುವಿನ ಕಲ್ಕಿ ಅವತಾರದ ಮರಳು ಶಿಲ್ಪವನ್ನು ಸ್ಥಾಪಿಸಲಾಗಿದೆ. ರಥದಲ್ಲಿಶ್ರೀರಾಮ, ಸೀತೆ ಮತ್ತು ಲಕ್ಷ್ಮಣರೊಂದಿಗೆ ಹನುಮಂತನಿರುವ ದೃಶ್ಯವಲ್ಲದೆ, ನಾಲ್ಕು ಯುಗಗಳ ಪ್ರಮುಖ ಘಟನೆಗಳನ್ನೂ ಕಲಾತ್ಮಕವಾಗಿ ರೂಪಿಸಲಾಗಿದೆ. ಸಮುದ್ರಮಂಥನ, ಲಕ್ಷ್ಮಣನಿಂದ ಇಂದ್ರಜಿತುವಿನ ಸಂಹಾರ, ಶಶಿರೇಖಾ-ಘಟೋತ್ಕಚರ ಪ್ರಸಂಗ ಹಾಗೂ ಶಿಶುಪಾಲ ವಧೆಯ ದೃಶ್ಯಗಳು ಪ್ರದರ್ಶನದಲ್ಲಿವೆ.

ಅಲ್ಲದೇ 150ಕ್ಕೂ ಹೆಚ್ಚು ಅಪರೂಪದ ಛಾಯಾಚಿತ್ರಗಳಿವೆ. 1960 ಮತ್ತು 1980ರ ದಶಕಗಳ ತಿರುಮಲ ಹಾಗೂ ಅಲಿಪಿರಿ ಪಾದಯಾತ್ರೆಯ ಮಾರ್ಗದ ಚಿತ್ರಗಳೊಂದಿಗೆ ಇಂದಿನ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ.

----

ಗರುಡ ಸೇವೆ ಪ್ರಮುಖ

ಬ್ರಹ್ಮೋತ್ಸವದ ಪ್ರಮುಖ ಸೇವೆ ಗರುಡಸೇವೆ (ಸೆ. 19) ಹಾಗೂ ಬ್ರಹ್ಮೋತ್ಸವದ ಕೊನೆಯ ದಿನ ನಡೆಯುವ ಚಕ್ರಸ್ನಾನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗರುಡಸೇವೆಯ ದಿನ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಅಗತ್ಯ ಭದ್ರತಾ ಕ್ರಮಗಳನ್ನು ಸಮರ್ಪಕವಾಗಿ ರೂಪಿಸಲಾಗಿದೆ. ಚಕ್ರಸ್ನಾನ ನಡೆಯುವ ಶ್ರೀವಾರಿ ಪುಷ್ಕರಿಣಿ ಬಳಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಕಾಮಗಾರಿ ಮಾಡಲಾಗಿದೆ.



ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಗಳು

ಬ್ರಹ್ಮೋತ್ಸವದ ಪ್ರತಿದಿನವೂ ಶ್ರೀನಿವಾಸನಿಗೆ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ವಾಹನ ಸೇವೆಗಳು ನಡೆಯುತ್ತವೆ. ಗರುಡ ವಾಹನ, ಹನುಮಂತ ವಾಹನ, ಗಜ ವಾಹನ ಹಾಗೂ ರಥೋತ್ಸವಗಳು ಭಕ್ತರ ಗಮನ ಸೆಳೆಯುತ್ತವೆ.

ಗರುಡ ವಾಹನ ಸೇವೆ: ಶ್ರೀ ಮಹಾವಿಷ್ಣುವಿನ ವಾಹನ ಗರುಡನ ಮೇಲೆ ಸ್ವಾಮಿಯು ವಿರಾಜಮಾನರಾಗುವ ಈ ಸೇವೆಗೆ ವಿಶೇಷ ಮಹತ್ವವಿದೆ.

ಹನುಮಂತ ವಾಹನ ಸೇವೆ: ಶ್ರೀರಾಮನ ಪರಮಭಕ್ತ ಹನುಮಂತನ ವಾಹನದಲ್ಲಿಸ್ವಾಮಿಯ ದರ್ಶನ ಪಡೆಯುವುದು ಭಕ್ತರಿಗೆ ವಿಶೇಷ ಅನುಭವ.

ಗಜ ವಾಹನ ಸೇವೆ: ಆನೆ ವಾಹನದಲ್ಲಿಸ್ವಾಮಿಯ ಮೆರವಣಿಗೆ ಉತ್ಸವದ ವೈಭವವನ್ನು ಹೆಚ್ಚಿಸುತ್ತದೆ.

ರಥೋತ್ಸವ: ಅಲಂಕೃತ ರಥದಲ್ಲಿಸ್ವಾಮಿಯ ಮೆರವಣಿಗೆ ನಡೆಯುತ್ತದೆ. ಭಕ್ತರು ರಥವನ್ನು ಎಳೆದು ಪುನೀತರಾಗುತ್ತಾರೆ.

ಚಕ್ರಸ್ನಾನ: ಉತ್ಸವದ ಕೊನೆಯ ದಿನ ಸ್ವಾಮಿಯ ಸುದರ್ಶನ ಚಕ್ರಕ್ಕೆ ಪವಿತ್ರ ಸ್ನಾನ ಮಾಡಿಸಲಾಗುತ್ತದೆ.

-----

ವಿವರ: ಪುಟ 3

ಬ್ರಹ್ಮೋತ್ಸವದ ಪೌರಾಣಿಕ ಹಿನ್ನೆಲೆ, ವಿವಿಧ ವಾಹನೋತ್ಸವಗಳು

----------------------------