ವಿಧಾನ: ಮಡಿಕೆಕಾಳು, ತೊಗರಿಬೇಳೆ ಎರಡನ್ನು ಕುಕ್ಕರ್ ನಲ್ಲಿಬೇಯಿಸಿ. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಎಣ್ಣೆಯಲ್ಲಿಹುರಿಯಿರಿ. ಈರುಳ್ಳಿ ಹೊಂಬಣ್ಣ ಬಂದಾಗ ಸಣ್ಣದಾಗಿ ಹೆಚ್ಚಿದ ಟೊಮೆಟೊ, ಹೆಚ್ಚಿದ ಪಾಲಕ್ ಸೊಪ್ಪು, ಹಾಕಿ ಹುರಿಯಿರಿ. ಸ್ವಲ್ಪ ನೀರು ಸೇರಿಸಿ ಕುದಿಸಿ. ಈ ಮಿಶ್ರಣಕ್ಕೆ ಬೆಂದ ಬೇಳೆ ಕಾಳನ್ನು ಹಾಕಿ, ಉಪ್ಪು ಅಚ್ಚ ಮೆಣಸಿನ ಪುಡಿ, ಒಂದು ಚಮಚ ಗರಂ ಮಸಾಲಾ, ತೆಂಗಿನ ತುರಿ, ಎಲ್ಲವನ್ನು ಹಾಕಿ ಚೆನ್ನಾಗಿ ಹೊಂದುವಂತೆ ಕೈಯಾಡಿಸಿ.
ವಿಧಾನ: ಕಡಲೆ ಕಾಳನ್ನು ಹಿಂದಿನ ದಿನವೇ ನೆನೆ ಹಾಕಬೇಕು. ಮಾರನೇದಿನ ತೊಗರಿಬೇಳೆ, ಕಾಳನ್ನು ಕುಕ್ಕರ್ ನಲ್ಲಿಬೇಯಿಸಿ. ಬದನೆಕಾಯಿಯನ್ನು ಉದ್ದುದ್ದಕ್ಕೆ ಹೋಳುಗಳಾಗಿ ಹೆಚ್ಚಿ ಬೇಯಿಸಿ. ಬೆಂದ ತೊಗರಿಬೇಳೆ, ಕಾಳು, ಬೆಂದ ಹೋಳು ಹಾಕಿ ಹಾಕಿ ಎಲ್ಲವನ್ನು ಚೆನ್ನಾಗಿ ಹೊಂದಿಸಿ, ಉಪ್ಪು, ಹುಳಿಪುಡಿ, ಹುಣಸೆರಸ, ತೆಂಗಿನತುರಿ ಹಾಕಿ ಕುದಿಸಿ ಒಗ್ಗರಣೆ ಕೊಡಿ.
-------------
ಹೆಸರುಕಾಳಿನ ದೋಸೆ
ಸಾಮಗ್ರಿ: ಹೆಸರುಕಾಳು 1/2ಕೆಜಿ, ಅಕ್ಕಿ 1/4 ಕೆಜಿ, ಉಪ್ಪು, ಶುಂಠಿ 1 ಸಣ್ಣ ತುಂಡು, 10 ಒಣ ಮೆಣಸಿನಕಾಯಿ.
ವಿಧಾನ: ಹಿಂದಿನ ರಾತ್ರಿ ಹೆಸರುಕಾಳು ಮತ್ತು ಅಕ್ಕಿಯನ್ನು ನೆನೆ ಹಾಕಿ. ಮಾರನೇದಿನ ನೆನೆಸಿದ ಹೆಸರುಕಾಳು ಅಕ್ಕಿ ಮಿಶ್ರಣವನ್ನು ಒಣ ಮೆಣಸಿನಕಾಯಿಯೊಂದಿಗೆ ಶುಂಠಿ ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಹಿಟ್ಟನ್ನು ಕಾದ ಕಾವಲಿಯ ಮೇಲೆ ದೋಸೆ ಎರೆಯಿರಿ.