ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೊರತೆವಿಕ ಸುದ್ದಿಲೋಕ ಹುನಗುಂದ
‘‘ನೀರಾವರಿಗೆ ಮತ್ತು ಕೃಷಿ ಚಟುವಟಿಕೆ ಅಭಿವೃದ್ಧಿಪಡಿಸಲು ಬ್ಯಾಂಕಿಗೆ ಅನುದಾನ ಕೊರತೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿಸಚಿವರಿಗೆ ಮತ್ತು ಸರಕಾರಕ್ಕೆ ಮನವೊಲಿಸುವ ಪ್ರಯತ್ನ ಮಾಡುತ್ತೇವೆ,’’ಎಂದು ಬ್ಯಾಂಕಿನ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಹೇಳಿದರು.
ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿನಡೆದ 65ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘‘ಕೃಷಿಕರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಾಗಿರುವುದು ಬ್ಯಾಂಕಿನ ಕರ್ತವ್ಯ, ಆದರೆ ಅನುದಾನದ ಕೊರತೆಯಿಂದ ಷೇರುದಾರರಿಗೆ ಸರಿಯಾದ ಸಾಲ ಸೌಲಭ್ಯ ಒದಗಿಸಲು ಆಗುತ್ತಿಲ್ಲ. ಬರುವ ದಿನಗಳಲ್ಲಿಸಮಸ್ಯೆಗಳಿಗೆ ಪರಿಹಾರ ಕಡುಕೊಳ್ಳಲಾಗುವುದು,’’ಎಂದರು.
ಬ್ಯಾಂಕಿನ ಷೇರುದಾರರು ಸಾಮೂಹಿಕವಾಗಿ ಮಾತನಾಡಿ,‘‘ ಬ್ಯಾಂಕಿಗೆ 9 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದು ಬ್ಯಾಂಕಿನಿಂದ ಯಾವುದೆ ಮಾಹಿತಿ ದೊರಕುತ್ತಿಲ್ಲ. ಕೃಷಿ ಚಟುವಟಿಕೆಗೆ, ನೀರಾವರಿ ಸೌಲಭ್ಯಕ್ಕೆ ಮತ್ತು ಇನ್ನಿತರ ಯೋಜನೆಗಳಡಿ ಯಾವುದೆ ರೀತಿಯ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಇದು ರೈತರ ಬ್ಯಾಂಕ್ , ಕಟ್ಟಡ ಶಿಥಿಲಾವಸ್ಥೆಗೊಂಡು ಬೀಳುವ ಹಂತದಲ್ಲಿದೆ. ಕಟ್ಟಡಕ್ಕೆ ಮತ್ತು ಬ್ಯಾಂಕ್ ಅಭಿವೃದ್ಧಿಗೆ ಹಾಗೂ ಷೇರುದಾರರಿಗೆ ಸಾಲ ಸೌಲಭ್ಯ ಸಿಗುವಂತೆ ಸರಕಾರದಿಂದ ಹೆಚ್ಚಿನ ಅನುದಾನಕ್ಕೆ ಪತ್ರ ವ್ಯವಹರಿಸುವ ಜತೆಗೆ ನಮ್ಮ ಕ್ಷೇತ್ರದ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು,’’ಎಂದರು.
ಬ್ಯಾಂಕ್ ವ್ಯವಸ್ಥಾಪಕ ಆನಂದಗೌಡ ವರದಿ ವಾಚಿಸಿದರು. ಉಪಾಧ್ಯಕ್ಷ ಖಾಜೇಸಾಬ ಮುದಗಲ್ , ನಿರ್ದೇಶಕ ಮಹಾಲಿಂಗಪ್ಪ ಕಾಶಪ್ಪನವರ, ಬಾಲನಗೌಡ ಪಾಟೀಲ, ಮಲ್ಲಪ್ಪ ಬಿಸರಡ್ಡಿ, ಶಿವನಗೌಡ ಜಡಿಯಪ್ಪಗೌಡ್ರ, ಸೋಮಶೇಖರ ಬಲಕುಂದಿ, ರುದ್ರಪ್ಪ ಶೀಲವಂತ, ಶಿವಕುಮಾರ ಬಿನ್ನೇದ, ನೂರಪ್ಪ ಲಮಾಣಿ, ಲೀಲಾವತಿ ಪಾಟೀಲ, ಸುವರ್ಣಾ ಇಲಕಲ್ಲ, ಪ್ರಭಾಕರ ನಾಗರಾಳ, ವೀರೇಶ ಗೌಡರ ಮತ್ತು ಚಂದ್ರಶೇಖರ ಸನ್ನಿ ಇದ್ದರು.
16;ಎಚ್ ಎನ್ ಡಿ;2;
ಹುನಗುಂದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 65ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಬ್ಯಾಂಕ್ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಉದ್ಘಾಟಿಸಿದರು.