ಅಭಿವೃದ್ಧಿಗೆ ಸಹಕಾರ ಸಂಘಗಳು ಸಹಕಾರಿ

Contributed byutkolekar@gmail.com|Vijaya Karnataka
the importance of cooperative societies in rural development
ಅಭಿವೃದ್ಧಿಗೆ ಸಹಕಾರ ಸಂಘಗಳು ಸಹಕಾರಿ

ವಿಕ ಸುದ್ದಿಲೋಕ ಇಂಡಿ
‘‘ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರು ಬದುಕು ಕಟ್ಟಿಕೊಳ್ಳಲು ಸಹಾಯಕವಾಗಿವೆ’’ ಎಂದು ನಾದ ಬಿ.ಕೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಯ ಅವುಜಿ ಹೇಳಿದರು.

ನಾದ (ಬಿ.ಕೆ) ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ಸಹಕಾರ ಸಂಘಗಳ ಶ್ರೇಯೋಭಿವೃದ್ಧಿಗೆ ಜನರ ಸಹಕಾರ ಮುಖ್ಯ. ಸಾಲ ಪಡೆದವರು ಸಕಾಲದಲ್ಲಿಸಾಲ ಮರು ಪಾವತಿ ಮಾಡಬೇಕು’’ ಎಂದರು.

ಉಪಾಧ್ಯಕ್ಷ ಹಣಮಂತರಾಯ ಇಂಡಿ, ಸಿಂಧೂರಲಕ್ಷ್ಮಣ ಮೂಲಿ, ರವಿಕಾಂತಗೌಡ ಪಾಟೀಲ, ಬಸವರಾಜ ಬಿರಾದಾರ, ಗಂಗಪ್ಪ ದ್ಯಾಮಗೊಂಡ, ಬಸವರಾಜ ಅವುಜಿ, ಅನೀಲ ಅಳ್ಳಗಿ, ಸೋಮನಿಂಗ ಅವುಜಿ, ಕಾರ್ಯದರ್ಶಿ ದ್ಯಾಮಗೊಂಡ ಜಮಾದಾರ, ನಿವೃತ್ತ ಶಿಕ್ಷಕ ಮಹಾಂತೇಶ ಕೋಳಿ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ - 18 ಇಂಡಿ07

ಇಂಡಿ ತಾಲೂಕಿನ ನಾದ ಬಿ.ಕೆ ಗ್ರಾಮದಲ್ಲಿಕೃಷಿ ಪತ್ತಿನ ಸಹಕಾರ ಸಂಘದ ಸರ್ವಸಾಧಾರಣ ಸಭೆಯಲ್ಲಿಅಧ್ಯಕ್ಷ ಧರ್ಮರಾಯ ಅವುಜಿ ಮಾತನಾಡಿದರು.