ಗೃಹಲಕ್ಷ್ಮೀ: ಫಲಾನುಭವಿಗಳ ಹೆಸರಲ್ಲೇ ಮೊಬೈಲ್ ಇರಲಿ

Contributed byVeeresh.Handigi@timesgroup.com|Vijaya Karnataka
gruhalakshmi scheme cms directive to include mobile numbers in beneficiary names
ಧಾರವಾಡ, ಹಾವೇರಿ,ಬೆಳಗಾವಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ

ಗೃಹಲಕ್ಷ್ಮೀ:
ಫಲಾನುಭವಿಗಳ ಹೆಸರಲ್ಲೇ ಮೊಬೈಲ್ ಇರಲಿ

ಹುಬ್ಬಳ್ಳಿ : ರಾಜ್ಯದಲ್ಲಿಬಹಳಷ್ಟು ಗೃಹಲಕ್ಷ್ಮೀ ಫಲಾನುಭವಿಗಳ ಹೆಸರಿನಲ್ಲಿಮೊಬೈಲ್ ನಂಬರ್ ಇಲ್ಲ. ಹೀಗಾಗಿ ಫಲಾನುಭವಿಗಳ ಹೆಸರಿನಲ್ಲೇ ಮೊಬೈಲ್ ನಂಬರ್ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿ ಜಿಲ್ಲೆಯ ಒಂದು ತಾಲೂಕನ್ನು ಪೈಲಟ್ ಪ್ರಾಜೆಕ್ಟ್ಗೆ ಆಯ್ಕೆ ಮಾಡಿಕೊಂಡು ಅನುಷ್ಠಾನಗೊಳಿಸಬೇಕೆಂದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲಿನಲ್ಲಿರಾತ್ರಿ 9 ಗಂಟೆ ವೇಳೆಗೆ ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಇತರ ಇಲಾಖೆ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು. ಪೈಲಟ್ ಪ್ರಾಜೆಕ್ಟ್ಗೆ ಶಾಸಕರನ್ನು ಕೇಳಬೇಡಿ. ನೀವೇ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ಯಾರಂಟಿ ಯೋಜನೆ ಕುರಿತು ಹೆಣ್ಣು ಮಕ್ಕಳ ಫಲಾನುಭವಿಗಳಿಗೆ ಸರಕಾರದಿಂದ ನೇರ ಸಂದೇಶ ತಲಪುವಂತಾಗಬೇಕು. ಸಾಧ್ಯವಾದರೆ ಅವರ ಹೆಸರಿನಲ್ಲಿಯೇ ಸಿಮ್ ಖರೀದಿಸುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.

ಈ ಮಧ್ಯೆ ಸಚಿವ ಸಂತೋಷ ಲಾಡ್ ಅವರು, ಎಸ್ ಐಆರ್ ನಲ್ಲಿಬಹಳಷ್ಟ ಫಿಲ್ಟರ್ ಆಗಿದೆ. ಫಾರ್ಮನಲ್ಲಿಮೊಬೈಲ್ ನಂಬರ್ ಇದ್ದು, ಆ ದತ್ತಾಂಶ ಬಳಸಿಕೊಳ್ಳಬಹುದೇ ಎಂಬುದನ್ನು ಯೋಚಿಸಿ ಎಂದರು.

ಗೃಹಲಕ್ಷ್ಮೀಯರ ಬೃಹತ್ ಕಾರ್ಯಕ್ರಮ:

ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ಸಂದ ಹಿನ್ನೆಲೆಯಲ್ಲಿಅವಿಭಜಿತ ಧಾರವಾಡ ಜಿಲ್ಲೆಯಲ್ಲಿದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಿಎಂ ಡಿ.ಕೆ. ಶಿವಕುಮಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮ ಎಲ್ಲಿಹೇಗೆ ಏನು ಎಂಬ ರೂಪುರೇಷೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ರೂಪಿಸಬೇಕು ಎಂದರು.

ಕರ್ತವ್ಯ ಕ್ಷೇತ್ರದಲ್ಲಿಅಧಿಕಾರಿಗಳು ಇರಬೇಕು:

ಅಧಿಕಾರಿಗಳು ತಾವು ಕೆಲಸ ಮಾಡುವ ಸ್ಥಳಗಳಲ್ಲೆ ಕಡ್ಡಾಯವಾಗಿ ಮನೆ ಮಾಡಿಕೊಂಡು ಇರಬೇಕು. ಈ ಕುರಿತು ಸರಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಇಂಗೀತ ವ್ಯಕ್ತಪಡಿಸಿದರು.

ಬಹುತೇಕ ತಾಲೂಕು ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿದ್ದು ಜನರಿಗೂ ಸಿಗುವುದಿಲ್ಲಎಂಬ ದೂರುಗಳಿವೆ. ಜನರ ಮಧ್ಯೆ ಸರಕಾರ ಇರಬೇಕೆಂಬುದು ಮುಖ್ಯ ಎಂದರು.

ಬಿಹಾರ, ಬಂಗಾಳದಂತೆ ಆಗಬಾರದು:

ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿಮತದಾನ ಇಲ್ಲದವರಿಗೆ ಯಾವ ಸೌಲಭ್ಯಗಳನ್ನು ಕೊಡುತ್ತಿಲ್ಲ. ಅಂತಹ ಸನ್ನಿವೇಶ ಕರ್ನಾಟಕದಲ್ಲಿಆಗಬಾರದು. ಹಾಗಾಗಿ ಪ್ರತಿಯೊಬ್ಬರೂ ಕಡಾಯವಾಗಿ ಮತದಾರ ಹಕ್ಕನ್ನು ಬಿಎಲ್ ಎ-1, ಬಿಎಲ್ ಎ-2 ಅವರು ಕೈ ಬಿಟ್ಟು ಹೋದ ಜನರಿಗೆ ಮತದಾರರ ಪಟ್ಟಿಯಲ್ಲಿಸೇರ್ಪಡೆ ಮಾಡಬೇಕೆಂದು ಸೂಚಿಸಿದರು.

ಪ್ರಜಾಸೇವೆ ಇಲಾಖೆ ಆರಂಭ :

ಹೊಸ ಮಾದರಿಯಲ್ಲಿಶಾಸಕರು ತಮ್ಮ ಕ್ಷೇತ್ರದಲ್ಲಿತಿಂಗಳಲ್ಲಿಎರಡು ಬಾರಿ ಜನರ ಸಮಸ್ಯೆ ಅಲಿಸಬೇಕು. ಎಲ್ಲಅರ್ಜಿದಾರರಿಗೆ ಸ್ವೀಕೃತಿ ಹಾಗೂ ಅರ್ಜಿ ಸ್ಥಿತಿಗತಿ ಬಗ್ಗೆ ತಿಳಿಯಪಡಿಸಬೇಕು. ಯಾವ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ? ಎಂಬುದರ ಬಗ್ಗೆ ಮಾಹಿತಿ ಒದಗಿಸಬೇಕು. ಪ್ರತ್ಯೇಕ ತಂಡವನ್ನು ಜಿಲ್ಲಾ ಮಟ್ಟದಲ್ಲಿರಚನೆ ಮಾಡಲಾಗುವುದು. ಗ್ರಾಪಂ, ತಾಪಂ ಹಾಗೂ ಜಿಪಂ ಹಂತಗಳಲ್ಲಿಸಭೆ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳು ಪ್ರತಿ ಹಳ್ಳಿಗೂ ಕೂಡ ಭೇಟಿ ನೀಡಬೇಕು. ಜನರ ಸಮಸ್ಯೆ ಪರಿಹರಿಸಲು ಕ್ರಮ ವಹಿಸಬೇಕಿದೆ. ಭಾರತ ಜೋಡೋ ಆನ್ ಲೈನ್ ಬಳಿಕ ಆಫ್ ಲೈನ್ ನಲ್ಲಿಅರ್ಜಿ ಸಲ್ಲಿಸಬಹುದು. ಗ್ಯಾರಂಟಿ ಯೋಜನೆಗಳ ಸದಸ್ಯರು ಅರ್ಜಿ ನೀಡಲಿದ್ದಾರೆ.ಯುವಕರಲ್ಲಿರುವ ಯುವ ಪ್ರತಿಭೆ ಹೊರತರಲು ಭಾರತ ಜೋಡೋ ಕಾರ್ಯಕ್ರಮ ನಡೆಯಲಿದೆ. ಸಮುದಾಯ ಭವನ, ಸರಕಾರಿ ಶಾಲೆಗಳಲ್ಲಿವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿ, ಭಾರತ ಜೋಡೋ ಕಾರ್ಯಕ್ರಮವು ದೇಶದಲ್ಲೇ ವಿಶಿಷ್ಟ ಕಾರ್ಯಕ್ರಮವಾಗಿದೆ.ಎರಡು ಮೂರು ಜಿಲ್ಲೆಗಳ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ಶಾಸಕ ಎನ್ .ಎಚ್ .ಕೋನರಡ್ಡಿ ಮಾತನಾಡಿ, ಹುಬ್ಬಳ್ಳಿ ಕೇಂದ್ರದಲ್ಲಿಗೃಹ ಲಕ್ಷ್ಮಿ ಯೋಜನೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ನವಲಗುಂದ ಕ್ಷೇತ್ರದಲ್ಲಿಪ್ರಜಾ ಸೇವೆ ಇಲಾಖೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿಪರಿಷತ್ ಸದಸ್ಯ ಎಫ್ .ಎಚ್ .ಜಕ್ಕಪ್ಪನವರ, ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರ್ ಖಾದ್ರಿ, ಧಾರವಾಡ ಜಿಲ್ಲಾಧಿಕಾರಿ ಆರ್ .ಸ್ನೇಹಲ್ , ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ , ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ, ಹಾವೇರಿ ಜಿಪಂ ಸಿಇಒ ದಲಜೀತ ಕುಮಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

......ಬಾಕ್ಸ್ ............

ತೇಗದ ಸಿರಿ ಯೋಜನೆ

ರಸ್ತೆಗುಂಟ ರೈತರ ಜಮೀನುಗಳಲ್ಲಿಸಾಗವಾನಿ ಮರ ಬೆಳೆಸುವ ಯೋಜನೆ ಬಗ್ಗೆ ಸರಕಾರ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದು, ನನ್ನ ನೇತೃತ್ವದ ಸರಕಾರ ನೂರು ದಿನಗಳ ಸಂಭ್ರಮದ ವೇಳೆ ಘೋಷಿಸುವುದಾಗಿ ಸಿಎಂ ಪ್ರಕಟಿಸಿದರು.

ಸಾಗವಾನಿ ಮರಕ್ಕೆ ಚಿನ್ನದ ಬೆಲೆ ಇದೆ. ಮುಂದಿನ 20 ವರ್ಷಗಳಲ್ಲಿಅದು 80ಲಕ್ಷಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ಈ ಸಂಪತ್ತು ರೈತರಿಗೂ ಸರಕಾರಕ್ಕೂ ಅನುಕೂಲವಾಗಬೇಕು. ಅದಕ್ಕಾಗಿ 70ಃ30 ಅನುಪಾತದಲ್ಲಿಆದಾಯ ವಿಂಗಡಣೆ ಮಾಡಲಾಗುವುದು. ಸಾಗವಾನಿ ಸಸಿಗಳನ್ನು ಅರಣ್ಯ ಇಲಾಖೆ ಪೂರೈಸಿ ಅದನ್ನು ಬೆಳೆಸುವ ಜಾಗೃತಿ ಮೂಡಿಸಲಿದೆ ಎಂದರು.