ಸ್ಟೈಲ್

Contributed byshubha.hegde@timesgroup.com|Vijaya Karnataka
ananya pandey shines in stunning bandhani and patola attire
ಹಳೆಯ ಕುಶಲ ಕಲೆಯಲ್ಲಿಅನನ್ಯಾ ಮಿಂಚು

ಬಾಲಿವುಡ್ ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಧರಿಸಿದ್ದ ಸಾಂಪ್ರದಾಯಿಕ ಉಡುಪು ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಬಾಂದನಿ ಸೀರೆಯಲ್ಲಿಕಂಗೊಳಿಸುವ ಮೂಲಕ ಭಾರತದ ಪ್ರಾಚೀನ ಕರಕುಶಲತೆಗೆ ಹೊಸ ಮೆರುಗು ನೀಡಿದ್ದಾರೆ. ಪುರಾತನ ಕಲೆಗೆ ಹೊಸ ಟ್ವಿಸ್ಟ್ ಈ ಉಡುಗೆಯುವ ಹಲವು ವಿಶೇಷಗಳನ್ನು ಒಳಗೊಂಡಿದೆ.
ಇದು ಗುಜರಾತಿನ ಅತ್ಯಂತ ಹಳೆಯ ಎರಡು ಕೈಮಗ್ಗ ಕಲೆಗಳಾದ ಬಾಂದನಿ ಮತ್ತು ಪಟೋಲಾ ದ ಸುಂದರ ಸಮ್ಮಿಲನ. ಅನನ್ಯಾ ಧರಿಸಿದ್ದ ಕಪ್ಪು ಮತ್ತು ಮೆರೂನ್ ಬಣ್ಣದ ರೇಷ್ಮೆ ಸೀರೆಯಲ್ಲಿಸಾಂಪ್ರದಾಯಿಕ ಚುಕ್ಕಿ ಹಾಗೂ ಜ್ಯಾಮಿತೀಯ ಹೂವಿನ ವಿನ್ಯಾಸಗಳಿದ್ದು, ಇದನ್ನು ಆಧುನಿಕ ಶೈಲಿಯ ಪ್ರಿ ಪ್ಲೀಟೆಡ್ ಸ್ಕರ್ಟ್ ಮಾದರಿಯಲ್ಲಿಡ್ರೇಪ್ ಮಾಡಲಾಗಿತ್ತು. ಸಾಮಾನ್ಯ ಬ್ಲೌಸ್ ಬದಲು ಕಾರ್ಸೆಟ್ ಧರಿಸಿದ್ದರು. ಇದರಲ್ಲಿಮಲ್ಟಿ ಕಲರ್ ಬೀಡ್ಸ್ ಮತ್ತು ದಾರದ ಕಸೂತಿ ಕೆಲಸದಿಂದ ಸಿಂಗಾರಗೊಂಡಿತ್ತು. ಈ ಉಡುಪಿಗೆ ಸೂಕ್ತವಾಗುವಂತೆ ಪಟೋಲಾ ಶೈಲಿಯ ಕಿವಿಯೋಲೆಗಳು, ಲೈಟ್ ಮೇಕಪ್ ಮತ್ತು ಕೇಶವಿನ್ಯಾಸದೊಂದಿಗೆ ಅನನ್ಯಾ ಮಿಂಚಿದ್ದರು.