ವೆಂಡಕ್ಕ ಮಪ್ಪಾಸ್

Contributed bybabitha.salian@timesgroup.com|Vijaya Karnataka
Vijay Karnataka
ವೆಂಡಕ್ಕ ಮಪ್ಪಾಸ್

ಬೆಂಡೆಕಾಯಿ ಮತ್ತು ತೆಂಗಿನ ಹಾಲು ಬಳಸಿ ತಯಾರಿಸುವ ಕೇರಳದ ಜನಪ್ರಿಯ ವ್ಯಂಜನ ವೆಂಡಕ್ಕ ಮಪ್ಪಾಸ್ ಎಂಬ ಆರೋಗ್ಯಕರ ಮತ್ತು ಸ್ವಾದಿಷ್ಟ ಗ್ರೇವಿಯನ್ನು ಪರೋಠ, ಚಪಾತಿ, ಆಪಂ, ದೋಸೆಗಳೊಂದಿಗೆ ಸೇವಿಸಬಹುದು.
ಸಾಮಗ್ರಿ: ಬೆಂಡೆಕಾಯಿ-ಕಾಲು ಕೆ.ಜಿ., ಈರುಳ್ಳಿ-1, ಟೊಮೆಟೊ-1, ಸಣ್ಣ ತುಂಡು ಶುಂಠಿ, ಹಸಿ ಮೆಣಸಿನಕಾಯಿ-4, ಕರಿಬೇವು-1 ಕಡ್ಡಿ, ಧನಿಯಾ ಪುಡಿ-1 ಚಮಚ, ಖಾರ ಪುಡಿ ಮತ್ತು ಅರಿಶಿಣ ಪುಡಿ-ತಲಾ ಅರ್ಧ ಚಮಚ, ಗರಂ ಮಸಾಲ ಪುಡಿ-ಕಾಲು ಚಮಚ, ಗಟ್ಟಿ ತೆಂಗಿನ ಹಾಲು-ಅರ್ಧ ಕಪ್ , ತೆಂಗಿನಕಾಯಿಯ ತೆಳು ಹಾಲು-1 ಕಪ್ , ತೆಂಗಿನ ಎಣ್ಣೆ-4 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಬಾಣಲೆಯಲ್ಲಿಎಣ್ಣೆ ಹಾಕಿ ಹೆಚ್ಚಿದ ಬೆಂಡೆಕಾಯಿಗಳನ್ನು ನಾಲ್ಕೈದು ನಿಮಿಷ ಬಾಡಿಸಿ ತೆಗೆದಿಡಿ. ನಂತರ ಸಾಸಿವೆ ಸಿಡಿಸಿ ಹೆಚ್ಚಿದ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಕರಿಬೇವು, ಉಪ್ಪು ಹಾಕಿ ಹುರಿಯಿರಿ. ಬಳಿಕ ಟೊಮೆಟೊ, ಮಸಾಲ ಪುಡಿಗಳನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಈಗ ಬೆಂಡೆಕಾಯಿ, ತೆಳ್ಳಗಿನ ಕಾಯಿ ಹಾಲು, ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ ಉರಿ ಆರಿಸಿ. ಬಳಿಕ ಇದಕ್ಕೆ ಗಟ್ಟಿ ಕಾಯಿ ಹಾಲು ಸೇರಿಸಿ ಮಿಶ್ರಣ ಮಾಡಿ.