ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಪ್ರತಿಭಟನೆಗೆ ಬೆಂಬಲ

Contributed byk.suresh1258@gmail.com|Vijaya Karnataka
basavadi sharanas hindu sammavesha support from lingayat mutt heads for protest
ವಿಕ ಸುದ್ದಿಲೋಕ ಭಾಲ್ಕಿ ಬಸವಾದಿ ಶಿವಶರಣರ ಹೆಸರಿನಲ್ಲಿನ ಹಿಂದೂ ಸಮಾವೇಶವನ್ನು ನಾಡಿನ ಪ್ರಗತಿಪರ ಚಿಂತಕರು. ಎಲ್ಲತಳ ಸಮುದಾಯಗಳ ಜನರು ವಿರೋಧಿಸಿ ಸೆ.25ರಂದು ಕಲಬುರಗಿಯಲ್ಲಿನಡೆಸುತ್ತಿರುವ ಪ್ರತಿಭಟನೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬೆಂಬಲವಿದೆ ಎಂದು ಒಕ್ಕೂಟ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಬಸವಾದಿ ಶಿವಶರಣರ ಮೂಲ ಆಶಯಗಳಿಗೆ ಧಕ್ಕೆ ತರುವ ಕಾರ್ಯವನ್ನು ನಾವೆಲ್ಲರೂ ನೈತಿಕ ನೆಲಗಟ್ಟಿನ ಮೇಲೆ ಸಂವಿಧಾನಿಕ ಹಿನ್ನೆಲೆಯಲ್ಲಿವಿರೋಧಿಸಬೇಕಿದೆ. ಬಸವಾದಿ ಶಿವಶರಣರು ಸಮ ಸಮಾಜದ ಕನಸು ಕಂಡವರು, ಮೇಲು-ಕೀಳು ಬಡವ ಬಲ್ಲಿದ ಮುಂತಾದ ಶ್ರೇಣಿಕೃತ ಜಾತಿಯ ವ್ಯವಸ್ಥೆಯನ್ನು ವಿರೋಧಿಸಿದವರು. ಸಮಾನತೆಗಾಗಿ ಜೀವ ತೆತ್ತವರು. ಸಮಾಜೋ ಧಾರ್ಮಿಕ ಅರಿವಿನೊಂದಿಗೆ ಕಾಯಕ ದಾಸೋಹ ಸಮಾನತೆಯ ದಿಕ್ಷೆ ನೀಡಿದವರು. ಅವರ ತ್ಯಾಗ ಬಲಿದಾನಗಳನ್ನು ನಾವು ಮರೆಯಲಾಗುವುದಿಲ್ಲ. ಸರಕಾರ ಹಾಗೂ ಆಡಳಿತಾತ್ಮಕ ಮುಖ್ಯಸ್ಥರು ಈ ಕುರಿತು ಕಠಿಣ ಕ್ರಮವನ್ನು ಕೈಗೊಳ್ಳಬೇಕು. ನಾಡಿನಲ್ಲಿಶಾಂತಿ, ಸಮಾಧಾನ ನೆಲೆಸುವಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿಒತ್ತಾಯಿಸಿದ್ದಾರೆ.