ಮೇಷ : ಹೆಚ್ಚು ತಿಳಿದವರೊಂದಿಗೆ ನಿಮ್ಮ ಆಲೋಚನೆ ಹಂಚಿಕೊಳ್ಳುವುದರಿಂದ ಅನುಕೂಲವಾಗಲಿದೆ. ಉತ್ಸಾಹ ಮತ್ತು ಜಾಣ್ಮೆಯಿಂದ ಜನರನ್ನು ಆಕರ್ಷಿಸುವಿರಿ. ಐಷಾರಾಮಿ ವಸ್ತುಗಳಿಗಾಗಿ ಹಣ ಖರ್ಚು ಮಾಡುವಂತೆ ಆಗಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಸಿಂಧೂರ ಕೆಂಪು)
---------
ವೃಷಭ : ಸುಣ್ಣದ ನೀರನ್ನು ಹಾಲೆಂದು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಿಮ್ಮದಾಗಿರುತ್ತದೆ. ನಿಮ್ಮ ಕೆಲಸ-ಕಾರ್ಯಗಳಿಗೆ ಹಿರಿಯರಿಂದ ಅಪಸ್ವರ ಅಥವಾ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಗಬಹುದು.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಬಿಳಿ)
-----------
ಮಿಥುನ : ನಿಮ್ಮ ಪ್ರಾಮಾಣಿಕ ಕೆಲಸಗಳಿಗೆ ಉತ್ತಮ ಪ್ರತಿಫಲ ಸಿಗಲಿದೆ. ಒಳ್ಳೆಯ ಅವಕಾಶಗಳಿಂದ ನಿಮ್ಮ ಜೀವನದ ದಿಕ್ಕು ಬದಲಾಗಲಿದೆ. ಹಳೆಯ ವಾಹನ ಮಾರಾಟದಿಂದ ಲಾಭವಿಲ್ಲದಿದ್ದರೂ ನಷ್ಟವಿರುವುದಿಲ್ಲ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಬಿಳಿ)
----------
ಕರ್ಕ : ಕಬ್ಬಿಣದ ಕೆಲಸ ಮಾಡುವವರು ಜಾಗ್ರತರಾಗಿರಿ. ಹೋಟೆಲ್ ಉದ್ಯಮದಾರರಿಗೆ ಬಹು ನಿರೀಕ್ಷಿತ ಲಾಭಗಳು ಎದುರಾಗುವುವು. ದೇವತಾ ಕಾರ್ಯಗಳಲ್ಲಿಭಾಗವಹಿಸುವ ಅವಕಾಶ ದೊರೆಕಲಿದೆ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಪ್ಪು)
---------
ಸಿಂಹ : ಎಲ್ಲರಿಗೂ ಬೇಕಾಗುವ ವ್ಯಕ್ತಿತ್ವ ನಿಮ್ಮದಾಗಲಿದೆ. ಕುಟುಂಬದ ಮತ್ತು ಸ್ನೇಹಿತರ ನಡುವಿನ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುವು. ಪತ್ನಿಯ ಆರೋಗ್ಯದಲ್ಲಿಸಮಸ್ಯೆ ಎದುರಾಗಬಹುದು.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಆಕಾಶ ನೀಲಿ)
---------
ಕನ್ಯಾ : ಓದಿನ ಕಡೆಗೆ ಹೆಚ್ಚಿನ ಗಮನಹರಿಸುವುದು ಉತ್ತಮ. ಹೊಸ ಆಲೋಚನೆಗಳು ನಿಮ್ಮಲ್ಲಿಹುಟ್ಟಿಕೊಳ್ಳಲಿವೆ. ಅದರಿಂದಾಗಿ ವ್ಯವಹಾರದಲ್ಲಿಕಠಿಣ ನಿಲುವು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಪ್ರಯಾಣ ಮಾಡಬೇಕಾಗುವುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಖಾಕಿ)
--------------
ತುಲಾ : ಮಾತಿನಲ್ಲಿಹಿಡಿತವಿರಲಿ. ಗೆಳೆಯರೊಂದಿಗೆ ಗೃಹ ನಿರ್ಮಾಣ ವಿಚಾರಗಳ ಚರ್ಚೆ ನಡೆಯಲಿದೆ. ವೃತ್ತಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದೀರಿ. ಸಂಸಾರದಲ್ಲಿನೆಮ್ಮದಿ ಇರುವುದು.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಬೂದು)
-----------
ವೃಶ್ಚಿಕ : ತಾಳ್ಮೆ, ಸಮಾಧಾನ ಚಿತ್ತದಿಂದ ವ್ಯವಹಾರ ನಡೆಸಿ. ಯಾವುದೇ ಗಲಾಟೆಗಳಿಗೆ ಆಸ್ಪದ ನೀಡುವುದು ಸರಿಯಲ್ಲ. ಖರ್ಚು-ವೆಚ್ಚಗಳು ಸಮನಾಗಿರುವುವು. ಪ್ರಯತ್ನಿಸಿದ ಕೆಲಸಗಳು ದಿನಾಂತ್ಯದಲ್ಲಿಕೈಗೂಡಲಿವೆ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಪಾಚಿ ಹಸಿರು)
--------------
ಧನು : ನಿಮ್ಮ ಅಭಿವೃದ್ಧಿಯನ್ನು ಸಹಿಸಲಾಗದ ಜನರ ಮಧ್ಯದಲ್ಲಿಜೀವನ ನಡೆಸಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕೇಸರಿ)
----------
ಮಕರ : ಹೊರ ದೇಶದಲ್ಲಿಉದ್ಯೋಗದ ಅನ್ವೇಷಣೆ ಮಾಡುವುದಕ್ಕೆ ಒಳ್ಳೆಯ ಸಮಯ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಕ್ರಮಗಳಿಂದ ಮತ್ತು ಮಾಧ್ಯಮದಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸುವದು ಒಳ್ಳೆಯದು.
(ಶುಭ ಸಂಖ್ಯೆ :7, ಅದೃಷ್ಟ ಬಣ್ಣ : ಹಸಿರು)
---------
ಕುಂಭ : ಆಫೀಸಿನಲ್ಲಿನಿಮ್ಮ ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವಿರಿ. ಅನುಕೂಲತೆಯ ಮೇಲೆ ಹೊಸ ಕೆಲಸವನ್ನು ಒಪ್ಪಿಕೊಳ್ಳುವಿರಿ. ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯಪ್ರವೃತ್ತರಾಗುವಿರಿ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಹಳದಿ)
-----
ಮೀನ : ನೀವು ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲೇ ನಿಮಗೆ ಶುಭಫಲ ನೀಡಲಿವೆ. ಮಕ್ಕಳು ನೆಲೆ ನಿಂತಿದ್ದರಿಂದ ಸಮಾಧಾನವಾಗುವುದು. ಮುದ್ರಣಕಾರರಿಗೆ ಬಿಡುವಿಲ್ಲದಂತೆ ಕೆಲಸವಿರಲಿದೆ.