ಕ್ರೀಡೆಯಿಂದ ಸಾಮರಸ್ಯಕ್ಕೆ ಸಹಕಾರಿ

Contributed byshankardp123@gmail.com|Vijaya Karnataka
a tool for uniting youth talents through sports
-ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಚಾಲನೆ

ವಿಕ ಸುದ್ದಿಲೋಕ ಯಳಂದೂರು
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿಹಮ್ಮಿಕೊಂಡಿದ್ದ 14ರಿಂದ 17 ವರ್ಷ ಒಳಗಿನವರ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಎ.ಆರ್ . ಕೃಷ್ಣಮೂರ್ತಿ ಚಾಲನೆ ನೀಡಿದರು.

ನಂತರ ಮಾತನಾಡಿ,‘‘ಜೀವನದಲ್ಲಿಶಿಸ್ತು, ಸಮಯ ಪಾಲನೆ ಜತೆಗೆ ಸಾಮರಸ್ಯದ ಗುಣ ರೂಢಿಸಿಕೊಳ್ಳಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿಭಾಗವಹಿಸಿ ಜಿಲ್ಲೆ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂಭಾಗವಹಿಸಿ ತಾಲೂಕಿಗೆ ಕೀರ್ತಿ ತರಬೇಕು,’’ ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಪ್ರಭುಪ್ರಸಾದ್ , ಲೋಕೋಪಯೋಗಿ ಇಲಾಖೆ ನಿವೃತ್ತ ಎಂಜಿನಿಯರ್ ವೇಕಟೇಶ್ , ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಸರಕಾರಿ ನೌಕರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್ , ಪ.ಪಂ. ಮುಖ್ಯ ಅಧಿಕಾರಿ ಮಹೇಶ್ ಕುಮಾರ್ , ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಡಾ.ಆರ್ ನಂಜುಂಡಯ್ಯ, ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಸಿದ್ದಮ್ಮ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಅಲ್ಮಾಸ್ ಬೇಗಂ, ವೃತ್ತ ನಿರೀಕ್ಷಕರಾದ ಜಿ.ಕೆ.ಸುಬ್ರಹ್ಮಣ್ಯ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮುರುಳೀಧರ, ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ತಾಲೂಕಿನ ಎಲ್ಲಾಶಾಲೆಯ ಕ್ರೀಡಾಪಟ್ಟುಗಳು ಭಾಗವಹಿಸಿದ್ದರು.

ಸಿ ಹೆಚ್ ಎನ್ 19 ವೈ ಎಲ್ ಡಿ 1

ಯಳಂದೂರು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಶಾಸಕ ಎ.ಆರ್ .ಕೃಷ್ಣಮೂರ್ತಿ ಚಾಲನೆ ನೀಡಿದರು.