Google Fined By European Union 463 Million Rupees Violation
ಯುರೋಪಿಯನ್ ಒಕ್ಕೂಟದ ನಿಯಮ ಉಲ್ಲಂಘನೆ
Contributed by: Jaya shree|Vijaya Karnataka•
ಯುರೋಪಿಯನ್ ಒಕ್ಕೂಟದ ನಿಯಮ ಉಲ್ಲಂಘನೆ
- ಗೂಗಲ್ ಗೆ 463 ಮಿಲಿಯನ್ ರೂ. ದಂಡಬಳಕೆದಾರರ ಸ್ಥಳ ಮಾಹಿತಿಯ (ಲೊಕೇಷನ್ ಡೇಟಾ) ಗೌಪ್ಯತೆ ನಿಯಮಗಳನ್ನು ಉಲ್ಲಂಘಿಘಿಸಿದ್ದಕ್ಕಾಗಿ ಯುರೋಪಿಯನ್ ಒಕ್ಕೂಟವು ಗೂಗಲ್ ಕಂಪನಿಗೆ 403 ಮಿಲಿಯನ್ ಯುರೋಗಳು (ಸುಮಾರು 4,432 ಕೋಟಿ ರೂ.) ದಂಡ ವಿಧಿಸಿದೆ. ಐರ್ಲೆಂಡ್ ನ ಡೇಟಾ ಪ್ರೊಟೆಕ್ಷನ್ ಕಮಿಷನ್ ಈ ಆದೇಶವನ್ನು ಹೊರಡಿಸಿದೆ.
ವೆಬ್ ಮತ್ತು ಆ್ಯಪ್ ಚಟುವಟಿಕೆ ಹಾಗೂ ಸ್ಥಳ ಇತಿಹಾಸದಲ್ಲಿಗೂಗಲ್ ಸಂಸ್ಥೆಯು ಬಳಕೆದಾರರ ಮಾಹಿತಿಗಳನ್ನು ಕಾನೂನುಬದ್ಧವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಿಲ್ಲಎಂದು ತನಿಖೆಯಿಂದ ತಿಳಿದುಬಂದಿದೆ. ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನ ‘ಲೊಕೇಶನ್ ಅಕ್ಯುರಸಿ’ ವೈಶಿಷ್ಟ್ಯದಲ್ಲೂನಿಯಮಗಳನ್ನು ಪಾಲಿಸುವಲ್ಲಿಕಂಪನಿ ವಿಫಲವಾಗಿದೆ ಎಂದು ನಿಯಂತ್ರಕರು ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟದ ಸಾಮಾನ್ಯ ಡೇಟಾ ರಕ್ಷಣಾ ನಿಯಮಗಳ (ಎಈP್ಕ) ಅಡಿಯಲ್ಲಿ, 2018ರಿಂದ 2020ರ ಫೆಬ್ರವರಿ ವರೆಗಿನ ಅವಧಿಯಲ್ಲಿಗೂಗಲ್ ಅನುಸರಿಸಿದ ನೀತಿಗಳ ಬಗ್ಗೆ ಕಳೆದ ಆರು ವರ್ಷಗಳಿಂದ ಈ ತನಿಖೆ ನಡೆದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆ, ‘‘ಇದು ಹಿಂದಿನ ನೀತಿಗಳಿಗೆ ಸಂಬಂಧಿಸಿದ ಪ್ರಕರಣವಾಗಿದ್ದು, ನಾವು 2019ರಿಂದಲೇ ನಮ್ಮ ನೀತಿಗಳಲ್ಲಿಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಸ್ಥಳ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಲು ಅಗತ್ಯವಿರುವ ನೂತನ ಪರಿಕರಗಳನ್ನು ಪರಿಚಯಿಸಲಾಗಿದೆ’’ ಎಂದು ಸ್ಪಷ್ಟಪಡಿಸಿದೆ.
ಸ್ಥಳ ಮಾಹಿತಿಯು ಅತ್ಯಂತ ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯಾಗಿದ್ದು, ಇದು ವ್ಯಕ್ತಿಗಳ ಖಾಸಗಿ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಐರ್ಲೆಂಡ್ ನ ಉಪ ಆಯುಕ್ತ ಗ್ರಹಾಂ ಡಾಯ್ಲ… ತಿಳಿಸಿದ್ದಾರೆ. ಐರ್ಲೆಂಡ್ ನ ಡೇಟಾ ಪ್ರೊಟೆಕ್ಷನ್ ಕಮಿಷನ್ ಈಗಾಗಲೇ ಮೆಟಾ ಮತ್ತು ಟಿಕ್ ಟಾಕ್ ಕಂಪನಿಗಳಿಗೂ ಭಾರಿ ದಂಡ ವಿಧಿಸಿದ್ದು, ಗೂಗಲ್ ವಿರುದ್ಧ ಇನ್ನೂ ಮೂರು ತನಿಖೆಗಳು ಬಾಕಿ ಇವೆ.