ಸೆಸ್ಕ್ ಕಚೇರಿಯಲ್ಲಿಜನಸಂಪರ್ಕ ಸಭೆ ವಿದ್ಯುತ್ ಸಮಸ್ಯೆ ಕುರಿತು ದೂರು

Contributed byabhilash.gowda7707@gmail.com|Vijaya Karnataka
public meeting on electricity issues at the office in hanur
ವಿಕ ಸುದ್ದಿಲೋಕ ಹನೂರು

ಪಟ್ಟಣದ ಸೆಸ್ಕ್ ಕಚೇರಿಯಲ್ಲಿಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 15 ದೂರುಗಳು ಸ್ವೀಕರಿಸಲಾಯಿತು.
‘‘ಸಭೆಯಲ್ಲಿರಾಮನಗುಡ್ಡೆ ಜಲಾಶಯದಲ್ಲಿನೀರು ಸಂಗ್ರಹವಾಗಿರುವುದರಿಂದ ವಿದ್ಯುತ್ ಕಂಬಗಳು ಮುಳುಗಡೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಮಂಗಲ ಗ್ರಾಮದಲ್ಲಿಕುಡಿಯುವ ನೀರು ಸೇರಿದಂತೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ,’’ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ಸಮಸ್ಯೆ ಉಲ್ಬಣವಾಗುವ ಮುನ್ನ ಅಗತ್ಯ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ತಾಲೂಕಿನ ಹಲವು ಭಾಗಗಳಲ್ಲಿವಿದ್ಯುತ್ ಕಂಬಗಳ ಸ್ಥಿತಿ ಶೋಚನೀಯವಾಗಿದ್ದು, ಕೆಲವು ಕಡೆ ಕಂಬಗಳ ಕೆಳಭಾಗದಲ್ಲಿವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಇದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಪರಿಶೀಲಿಸಿ ದುರಸ್ತಿ ಮಾಡಬೇಕು,’’ಎಂದು ಸಾರ್ವಜನಿಕರು ಒತ್ತಾಯಿಸಿದರು.

‘‘ರಾತ್ರಿ ವೇಳೆಯಲ್ಲಿಹಲವು ಗ್ರಾಮಗಳಲ್ಲಿಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ,’’ಎಂದು ಪೋಷಕರು ದೂರಿದರು.

ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅಧಿಕಾರಿಗಳು, ‘‘ಸಮಸ್ಯೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ,’’ ಭರವಸೆ ನೀಡಿದರು. ವಿದ್ಯುತ್ ಕಂಬಗಳು, ತಂತಿಗಳು ಹಾಗೂ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ದೂರುಗಳಿಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚಿಸಲಾಯಿತು.

ಸಭೆಯಲ್ಲಿಸೆಸ್ಕ್ ಇಇ ತಬಸುಮ್ ಭಾನು, ಇಇಇ ರಂಗಸ್ವಾಮಿ, ಜೆಇಗಳಾದ ಮಹದೇವಸ್ವಾಮಿ, ವೆಂಕಟೇಶ್ , ಮಹೇಶ್ , ನವೀನ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

--------

ಅಊಓ19ಊಓಖ06

ಹನೂರು ಪಟ್ಟಣದ ಸೆಸ್ಕ್ ಕಚೇರಿಯಲ್ಲಿಜನಸಂಪರ್ಕ ಸಭೆ ನಡೆಯಿತು.