ಕನ್ನಡ, ಹಿಂದು, ಉರ್ದು, ಇಂಗ್ಲಿಷ್ ಕವಿತೆಗಳ ವಾಚನ

Contributed bytvlbdr@gmail.com|Vijaya Karnataka
recitation of kannada hindi urdu and english poems in multilingual poetry symposium
ಚಿತ್ರ:3-9-ಬಿಡಿಆರ್ 6

ಬೀದರ್ ನಲ್ಲಿಈಚೆಗೆ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿಉಪನ್ಯಾಸಕರಾದ ಡಾ. ರಾಮಚಂದ್ರ ಗಣಾಪುರ ಕನ್ನಡದ ಕವಿತೆ ವಾಚಿಸಿದರು.
ಕನ್ನಡ, ಹಿಂದು, ಉರ್ದು, ಇಂಗ್ಲಿಷ್ ಕವಿತೆಗಳ ವಾಚನ

ವಿಕ ಸುದ್ದಿಲೋಕ ಬೀದರ್

ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಇದರಾ ಅದಬ್ ಏ ಇಸ್ಲಾಮೀ ಹಿಂದ್ ಸಹಯೋಗದಲ್ಲಿಈಚೆಗೆ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿಬಹುಭಾಷಾ ಕವಿಗೋಷ್ಠಿ ನಡೆಯಿತು. ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಮುಹಮ್ಮದ್ ನಿಜಾಮುದ್ದಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಥಾನೀಯ ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಮುಹಮ್ಮದ್ ಮೌಝ್ಹಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿಗೋಷ್ಠಿಯಲ್ಲಿಡಾ.ರಾಮಚಂದ್ರಗಣಾಪುರ, ಡಾ.ರಘುಶಂಖಭಾತಂಬ್ರಾ, ಡಾ.ಮಕ್ತುಂಬಿಎಂ., ಅಶ್ವಜೀತ್ ದಂಡಿನ್ , ಡಾ.ಶ್ರೇಯಾ ಮಹೀಂದ್ರಕರ್ , ಸಂಗಮೇಶ ಜವಾದಿ, ವಿದ್ಯಾವತಿ ಅವರು ಕನ್ನಡದಲ್ಲಿಕವಿತೆ ವಾಚಿಸಿದರು. ಜಗದೀಶ್ವರ ಬಿರಾದಾರ್ , ಧನಲಕ್ಷ್ಮೇ ಪಾಟೀಲ್ ಇಂಗ್ಲಿಷ್ ಕವಿತೆ ವಾಚಿಸಿದರು.

ಉರ್ದು ಭಾಷೆಯಲ್ಲಿಸೈಯದ್ ಜಮೀಲ್ ಹಾಸ್ಮಿ, ಮುನವ್ವರ್ ಅಲಿಶಾಹಿದ್ , ಸೈಯದ್ ಖಾಸಿಂಸಾಜಿದ್ , ಖಾಜಿ ಇದ್ರಿಸ್ ಅಲಿ, ಹಾಮೆದ್ ಸಲೀಂ ಹಾಮೆದ್ ,ಹೈದರ್ ಅಲಿ ಸೌದಾಗರ್ ಹಾಗೂ ಹಿಂದಿಯಲ್ಲಿಅಜೀಮ್ ಬಾದಶಾ ಕವಿತೆ ವಾಚಿಸಿದರು. ಇದರಾ ಅದಬ್ ಏ ಇಸ್ಮಾಮೀ ಹಿಂದ್ ಅಧ್ಯಕ್ಷ ರಫೀವುಝ್ಹಮಾ ಖಾದ್ರಿ ಪ್ರಾಸ್ತಾವಿಕವಾಗಿಮಾತನಾಡಿದರು.

ಮಕ್ಸೂದ್ ಅಲಿಯವರು ದೇವರ ಪ್ರಶಂಸೆ ಮತ್ತು ಪ್ರವಾದಿಯವರ ಗುಣಗಾನ ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿಸಾಹಿತ್ಯಾಸಕ್ತರು, ಜಮಾಅತೆ ಇಸ್ಲಾಮೀ ಹಿಂದ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದರಾ ಅದಬ್ ಏ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಹಾಮೇದ್ ಸಲೀಂ ಹಾಮೆದ್ ವಂದಿಸಿದರು.