ವಿಕ ಸುದ್ದಿಲೋಕ ಕುದೂರು: ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರದಿಂದ ನಿರ್ಮಿಸಿರುವ ಶ್ರೀ ಗ್ರಾಮದೇವತಾ ದೇವಾಲಯದ ಸಂಪ್ರೋಕ್ಷಣಾ ಹಾಗೂ ಪ್ರತಿಷ್ಠಾ ಹೋಮ ಕಾರ್ಯಕ್ರಮವನ್ನು ಸೆ.20 ಮತ್ತು 21ರಂದು ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.ಸೆ.20ರ ಭಾನುವಾರ ಸಂಜೆ 5 ಗಂಟೆಯಿಂದ ಮಂಗಳವಾದ್ಯದೊಂದಿಗೆ ಗಂಗೆ ಪೂಜೆ, ಗ್ರಾಮ ಪ್ರದಕ್ಷಿಣೆ, ಮಹಾಸಂಕಲ್ಪ, ಪುಣ್ಯಾಹ, ಗಣಪತಿ ಪೂಜೆ, ವೇದಿಕಾರ್ಚನೆ, ಅಗ್ನಿಮುಖ, ಮೋದಕ ಸಹಿತ ಗಣಪತಿ ಹೋಮ, ವಾಸ್ತು ಶಾಂತಿ, ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
ಪ್ರಧಾನ ಹೋಮ, ಬಲಿಹರಣ, ಜಯಾದಿ, ಪೂರ್ಣಾಹುತಿ ಹಾಗೂ ಕಲಶಾಭಿಷೇಕ ಸೇರಿದಂತೆ ನಾನಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಶ್ರೀ ಕಾಳಿಕಾಂಬ ದೇವಾಲಯದ ಶತಾಧಿಕ ಪ್ರತಿಷ್ಠಾಪನಾಚಾರ್ಯ, ವೈದಿಕ ಶಿರೋಮಣಿ ವೇ.ಬ್ರ. ಶ್ರೀ ಬಿ.ಎಲ್ . ಕೃಷ್ಣಶಾಸ್ತ್ರಿ ಹಾಗೂ ಸಂಘಡಿಗರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಕೋಡಿಹಳ್ಳಿಯ ಅರ್ಚಕ ಶ್ರೀ ಕೆ.ಜಿ. ಹೇಮಂತಾಚಾರ್ ಉಪಸ್ಥಿತರಿರುವರು.
ಕೋಡಿಹಳ್ಳಿ, ಕೋಡಿಹಳ್ಳಿ ಕಾಲೊನಿ, ಗೊಲ್ಲಹಳ್ಳಿ, ಮಂದಾನಿಪಾಳ್ಯ, ಹುಲ್ಲಯ್ಯನಪಾಳ್ಯ, ಅಂಕೇಗೌಡರಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
19ಸೆಪ್ಟೆಂಬರ್ ಕೆಡಿಆರ್ 2: ಸಂಪ್ರೋಕ್ಷಣಾ ಕಾರ್ಯಕ್ರಮಕ್ಕೆ ಸಿದ್ಧಗೊಂಡಿರುವ ಕೋಡಿಹಳ್ಳಿ ಗ್ರಾಮದ ಗ್ರಾಮದೇವತಾ ದೇವಾಲಯ.