ವಿಕ ಸುದ್ದಿಲೋಕ ಹರಪನಹಳ್ಳಿನಗರ ಸೇರಿ ತಾಲೂಕಿನ ನಾನಾ ಕಡೆ ಪ್ರತಿಷ್ಠಾಪಿಸಿದ್ದ 174 ಗಣೇಶ ಮೂರ್ತಿಗಳನ್ನು ಶುಕ್ರವಾರ ತಡ ರಾತ್ರಿ ನಿಗದಿತ ಸ್ಥಳದಲ್ಲಿವಿಸರ್ಜಿಸಲಾಯಿತು.
ಸ್ಥಳೀಯ ಬಾಪೂಜಿ ನಗರದ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಬಾಪೂಜಿ ನಗರದಿಂದ ಬಾಣಗೆರೆಯ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಯುವಕರು, ಮುಖಂಡರು, ಮಹಿಳೆಯರು ಸಂಗೀತಕ್ಕೆ ಹೆಜ್ಜೆ ಹಾಕುತ್ತ ಮೆರವಣಿಗೆಗೆ ಮೆರುಗು ನೀಡಿದರು.
ವಿವಿಧ ಸಂಘ-ಸಂಸ್ಥೆಗಳ ಕಚೇರಿ, ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ರಿಬ್ಬನ್ , ವಿದ್ಯುತ್ ದೀಪ, ಬಲೂನುಗಳಿಂದ ಸಿಂಗರಿಸಿದ್ದ ಟ್ರ್ಯಾಕ್ಟರ್ , ಆಟೊರೀಕ್ಷಾ ಸೇರಿದಂತೆ ನಾನಾ ವಾಹನಗಳಲ್ಲಿ ಪೊಲೀಸ್ ಇಲಾಖೆ ಮಾರ್ಗ ಸೂಚಿಯಂತೆ ಬಾಪೂಜಿ ನಗರದಿಂದ ಬಾಣಗೆರೆ ರಸ್ತೆಯ ಮೂಲಕ ಬಿಗಿ ಪೊಲೀಸ್ ಬಂದೋ ಬಸ್ ್ತ ನಡುವೆ ಗಣೇಶ ಮೂರ್ತಿ ವಿಸರ್ಜಿಸಲಾಯಿತು.
ತಾಲೂಕಿನ 174 ಕಡೆಗಳಲ್ಲಿಗಣೇಶ ವಿಸರ್ಜನೆಗೆ ಕೆಎಸ್ ಆರ್ ಪಿ ತುಕಡಿ 1, ಡಿವೈಎಸ್ಪಿ 1, ಪಿಎಸ್ ಐ 5, ಎಎಸ್ ಐ 16, 110 ಪೊಲೀಸ್ ಸಿಬ್ಬಂದಿ, 75 ಹೋಂ ಗಾರ್ಡ್ ನಿಯೋಜಿಸಿಲಾಗಿದೆ ಎಂದು ಸಿಪಿಐ ಮಹಾಂತೇಶ್ ಜಿ. ಸಜ್ಜನ್ ತಿಳಿಸಿದ್ದಾರೆ.ಗಣೇಶ ವಿಸರ್ಜನೆ ನಿಮಿತ್ತ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಡಿವೈಎಸ್ಪಿ ಸಂತೋಷ ಚೌಹ್ವಾಣ್ , ಪಿಎಸ್ ಐ ಶಂಭುಲಿಂಗ ಸಿ.ಹಿರೇಮಠ್ , ಎಎಸ್ ಐ ಗಿರೀಶ್ ಇತರರು ಇದ್ದರು.
11ಎಚ್ ಆರ್ ಪಿ.03: ಹರಪನಹಳ್ಳಿಯ ಬಾಪೂಜಿ ನಗರದ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ಮೆರವಣಿಗೆ ಮಾಡಿ ಶುಕ್ರವಾರ ರಾತ್ರಿ ವಿಸರ್ಜಿಸಲಾಯಿತು.