ಮಕ್ಕಳ ಹೃದ್ರೋಗ ತೀವ್ರ ನಿಗಾ ಆರೈಕೆ ಕುರಿತ 2ನೇ ಅಂತಾರಾಷ್ಟ್ರೀಯ ನರ್ಸಿಂಗ್ ಸಮ್ಮೇಳನವು ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿನಡೆಯಿತು.‘ಒನ್ ವಲ್ಡ…ರ್ ಒನ್ ಫ್ಯಾಮಿಲಿ ಮಿಷನ್ ’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಸಾನ್ನಿಧ್ಯದಲ್ಲಿನಡೆದ 2 ದಿನಗಳ ಸಮ್ಮೇಳನದಲ್ಲಿಶೈಕ್ಷಣಿಕ ಚರ್ಚೆ, ಪ್ರಾಯೋಗಿಕ ಕಾರ್ಯಾಗಾರ ನಡೆದವು. ಸಮ್ಮೇಳನದಲ್ಲಿದೇಶದ ವಿವಿಧೆಡೆಯಿಂದ 480ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಏಮ್ಸ್ ನವದೆಹಲಿ, ಪೀಡಿಯಾಟ್ರಿಕ್ ಕಾರ್ಡಿಯಾಕ್ ಸೊಸೈಟಿ ಆಫ್ ಇಂಡಿಯಾ, ಯುಕೆ ಮೂಲದ ಹೀಲಿಂಗ್ ಲಿಟಲ್ ಹಾರ್ಟ್ಸ್ ಹಾಗೂ ಗ್ರೀಸ್ನ ಕಲಾಂಗೋಸ್ ಫೌಂಡೇಷನ್ ಸಹಯೋಗದಲ್ಲಿಸಮ್ಮೇಳನ ಆಯೋಜಿಸಲಾಗಿತ್ತು.
ಮೊದಲ ದಿನ ಜನ್ಮಜಾತ ಹೃದಯ ದೋಷಗಳು, ಕಾರ್ಡಿಯೋಪಲ್ಮನರಿ ಬೈಪಾಸ್ , ಇನೋಟ್ರೋಪ್ ನಿರ್ವಹಣೆ, ವೆಂಟಿಲೇಟರ್ ತಂತ್ರಗಳು ಹಾಗೂ ಶಸ್ತ್ರಚಿಕಿತ್ಸೆಯ ನಂತರ ಎದುರಾಗಬಹುದಾದ ತೊಡಕುಗಳ ಕುರಿತು ಚರ್ಚೆ ನಡೆಯಿತು. 2ನೇ ದಿನ ನಾನ್ -ಇನ್ವೇಸಿವ್ ವೆಂಟಿಲೇಷನ್ ಮತ್ತು ಕಾರ್ಡಿಯೋಪಲ್ಮನರಿ ರಿಸಸಿಟೇಷನ್ ಕುರಿತು ಪ್ರಾಯೋಗಿಕ ಹಾಗೂ ಸಿಮ್ಯುಲೇಷನ್ ತರಬೇತಿ ನೀಡಲಾಯಿತು.
ಭಾರತದಲ್ಲಿಮಕ್ಕಳ ಹೃದ್ರೋಗ ತೀವ್ರ ನಿಗಾ ವಿಭಾಗದ ನರ್ಸ್ ಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮ ಅಗತ್ಯವಿದೆ ಎಂದು ತಜ್ಞರು ಒತ್ತಿ ಹೇಳಿದರು. ವಿವಿಧ ಪ್ರಮುಖ ಸಂಸ್ಥೆಗಳ ಸಹಯೋಗದಲ್ಲಿನರ್ಸ್ ಗಳ ನಿರಂತರ ಕಲಿಕೆಗಾಗಿ ವೇದಿಕೆ ಆರಂಭಿಸುವ ಕುರಿತು ಚರ್ಚೆ ನಡೆಯಿತು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಸಿ.ಎಸ್ . ಹಿರೇಮಠ ಮಾತನಾಡಿ, ಭಾರತದಲ್ಲಿಪ್ರತಿ ವರ್ಷ 2.5 ಲಕ್ಷ ಮಕ್ಕಳು ಹೃದಯ ಸಂಬಂಧಿ ಸಮಸ್ಯೆಗಳೊಂದಿಗೆ ಜನಿಸುತ್ತಾರೆ. ತಜ್ಞ ವೈದ್ಯರು 4 ಗಂಟೆಯಲ್ಲಿಶಸ್ತ್ರಚಿಕಿತ್ಸೆ ಮಾಡಿದರೆ ಮುಂದಿನ 40 ಗಂಟೆಗಳ ಕಾಲ ನರ್ಸ್ ಗಳೇ ರೋಗಿಗಳ ಆರೋಗ್ಯ ಕಾಪಾಡುತ್ತಾರೆ ಎಂದು ನರ್ಸ್ ಗಳ ಸೇವೆಯನ್ನು ಶ್ಲಾಘಿಘಿಸಿದರು. ಪಿಸಿಎಸ್ ಐ ಅಧ್ಯಕ್ಷ ಪೊ›. ಡಾ. ಸಚಿನ್ ತಲ್ವಾರ್ ಇಂತಹ ಸಮ್ಮೇಳನಗಳ ಅಗತ್ಯವನ್ನು ಶ್ಲಾಘಿಘಿಸಿದರು.
18ಸಿಬಿಪಿಪೊಟೋ03
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿನಡೆದ 2 ದಿನಗಳ ಮಕ್ಕಳ ಹೃದ್ರೋಗ ತೀವ್ರ ನಿಗಾ ಆರೈಕೆ ಕುರಿತ 2ನೇ ಅಂತಾರಾಷ್ಟ್ರೀಯ ನರ್ಸಿಂಗ್ ಸಮ್ಮೇಳನದಲ್ಲಿದೇಶ ವಿದೇಶಗಳ ತಜ್ಞರು ಭಾಗವಹಿಸಿದ್ದರು.