ಕಣಿತಹಳ್ಳಿ ಎನ್ .ಚಂದ್ರೇಗೌಡ ಚಿಕ್ಕಬಳ್ಳಾಪುರ ್ಚha್ಞd್ಟಛಿಜಟಡಿda.್ಞಃಠಿಜಿಞಛಿsಟ್ಛಜ್ಞಿdಜಿa.್ಚಟಞ ಜಿಲ್ಲೆಯಲ್ಲಿಮತ್ತೆ ಎತ್ತಿನಹೊಳೆ ಯೋಜನೆ ಸದ್ದು ಮಾಡುತ್ತಿದೆ. ಇನ್ನೊಂದು ವರ್ಷದಲ್ಲಿನೀರು ಹರಿಸಿಯೇ ಸಿದ್ಧ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಕಳೆದ 12 ವರ್ಷಗಳಿಂದ ಕೊಡುತ್ತಲೇ ಭರವಸೆಯ ಮುಂದುವರಿದ ಭಾಗ ಎಂಬುದು ವಿಪಕ್ಷಗಳ ತಿರುಗೇಟು. ಇನ್ನು ನೀರಾವರಿ ಹೋರಾಟಗಾರರಂತೂ ಸಾಧ್ಯವೇ ಇಲ್ಲ. ಇದು ಲೂಟಿ ಯೋಜನೆ ಎಂದು ಷರಾ ಬರೆದಿದ್ದಾರೆ. ಬರಪೀಡಿತ ಬಯಲುಸೀಮೆಯ ಜನರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮತ್ತೆ ರಾಜಕೀಯ ವಲಯದಲ್ಲಿಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಯೋಜನೆಗೆ ಭೂಮಿಪೂಜೆ ನೆÃ ವೇರಿ ಬರೋಬ್ಬರಿ 12 ವರ್ಷಗಳು ಉರುಳಿದರೂ ಜಿಲ್ಲೆಯ ಜನರಿಗೆ ಮಾತ್ರ ಒಂದು ಹನಿ ನೀರು ದಕ್ಕಿಲ್ಲ. ಯಕ್ಷಪ್ರಶ್ನೆ: ಆಡಳಿತ ಪಕ್ಷದ ಜನಪ್ರತಿನಿಧಿಗಳು ಮುಂದಿನ ಒಂದು ವರ್ಷದಲ್ಲಿನೀರು ಹರಿಸುತ್ತೇವೆ ಎಂಬ ಅಬ್ಬರದ ಘೋಷಣೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಇದೆಲ್ಲಾಕೇವಲ ಬೂಟಾಟಿಕೆ ಎಂಬ ವ್ಯಂಗ್ಯದ ನಡುವೆ, ಜನರ ದಾಹ ಇಂಗುವುದು ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಆಡಳಿತ ಪಕ್ಷದ ವಿಶ್ವಾಸ: ಯೋಜನೆಯ ಬಹುತೇಕ ಕಾಮಗಾರಿಗಳು ಅಂತಿಮ ಹಂತ ತಲುಪಿವೆ. ತಾಂತ್ರಿಕ ಅಡೆತಡೆಗಳು ಮತ್ತು ಭೂಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇನ್ನು ಒಂದೇ ವರ್ಷದಲ್ಲಿಜಿಲ್ಲೆಯ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಆಡಳಿತಾರೂಢ ನಾಯಕರು ಹುಮ್ಮಸ್ಸಿನಿಂದ ವಾದಿಸುತ್ತಿದ್ದಾರೆ. ಪ್ರತಿಪಕ್ಷಗಳ ಆಕ್ರೋಶ: ಎತ್ತಿನಹೊಳೆ ಯೋಜನೆಗೆ ಭೂಮಿಪೂಜೆ ನಡೆದು ಒಂದು ದಶಕವೇ ಕಳೆದಿದೆ. ಆದರೆ ನೀರು ತರುತ್ತೇವೆ ಎಂದು ಹೇಳುವ ಆಡಳಿತ ಪಕ್ಷ, ಜನರಿಗೆ ಮಂಕುಬೂದಿ ಎರಚುತ್ತಿದೆ. ಇವರ ಆಡಳಿತಾವಧಿಯಲ್ಲಿನೀರು ಹರಿಯುತ್ತದೆ ಎಂಬ ಕನಿಷ್ಠ ನಿರೀಕ್ಷೆಯೂ ನಮಗಿಲ್ಲ. ಇದು ಕೇವಲ ಹಣ ಲೂಟಿ ಮಾಡುವ ಯೋಜನೆಯಾಗಿದೆ ಎಂದು ಪ್ರತಿಪಕ್ಷ ಮುಖಂಡರು ಕಿಡಿಕಾರುತ್ತಿದ್ದಾರೆ. ಮೂಲದಲ್ಲೇ ನೀರಿಲ್ಲ; ಇತ್ತ ರಾಜಕಾರಣಿಗಳ ಪರ-ವಿರೋಧದ ವಾಕ್ಸಮರದ ನಡುವೆ, ನೀರಾವರಿ ಹೋರಾಟಗಾರರು ಮತ್ತು ತಜ್ಞರ ಆತಂಕ ಈ ಇಡೀ ಯೋಜನೆಯ ಹುಳುಕನ್ನು ಬಯಲಿಗೆಳೆಯುತ್ತಿವೆæ. ಪಶ್ಚಿಮ ಘಟ್ಟದ ಸಕಲೇಶಪುರ ಭಾಗದ ಎತ್ತಿನಹೊಳೆಯ ಮೂಲದಲ್ಲೇ ಸರಕಾರ ಅಂದಾಜಿಸಿದಷ್ಟು ನೀರಿನ ಲಭ್ಯತೆ ಇಲ್ಲಎಂಬುದು ತಜ್ಞರ ನಿರಂತರ ವಾದ. ವರದಿಯಲ್ಲಿಉಲ್ಲೇಖಿಸಲಾದ 24 ಟಿಎಂಸಿ ನೀರು ಕೇವಲ ಕಾಗದದ ಮೇಲಿದೆಯೇ ಹೊರತು ವಾಸ್ತವದಲ್ಲಿಅಷ್ಟು ಪ್ರಮಾಣದ ನೀರು ಸಿಗುವುದಿಲ್ಲ. ಮೂಲದಲ್ಲೇ ನೀರಿನ ಕೊರತೆಯಿರು ವಾಗ, ನೂರಾರು ಕಿಲೋಮೀಟರ್ ದೂರದ ಬಯಲುಸೀಮೆಯ ಜಿಲ್ಲೆಗೆ ನೀರು ಹರಿಸುವುದು ಹೇಗೆ ಎಂಬ ಗಂಭೀರ ಸಂಶಯವನ್ನು ಹೋರಾಟಗಾರರು ವ್ಯಕ್ತಪಡಿಸಿದ್ದಾರೆ. 12 ವರ್ಷಕ್ಕೂ ಬಾರದ ನೀರು: 2014ರಲ್ಲಿಚಿಕ್ಕಬಳ್ಳಾಪುರದಲ್ಲೇ ಅಡಿಗಲ್ಲುಹಾಕಿದ ಈ ಯೋಜನೆಗೆ ಆರಂಭದಲ್ಲಿಅಂದಾಜಿಸಲಾಗಿದ್ದ ಮೊತ್ತಕ್ಕೂ, ಇಂದಿನ ವೆಚ್ಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯೋಜನೆ ವಿಳಂಬವಾದಷ್ಟೂ ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣ ಪೋಲಾಗುತ್ತಿದೆಯೇ ವಿನಃ, ಒಣಗಿದ ಗಂಟಲುಗಳಿಗೆ ಪರಿಹಾರ ಸಿಕ್ಕಿಲ್ಲ.ಪೈಪ್ ಲೈನ್ , ಕಾಲುವೆ, ಪಂಪ್ ಹೌಸ್ ನಿರ್ಮಾಣದ ನೆಪದಲ್ಲಿಕಾಲಹರಣ ಮಾಡುತ್ತಾ ಬಂದಿರುವ ಸರಕಾರಗಳು ಇನ್ನೊಂದು ವರ್ಷದಲ್ಲಿಭಗೀರಥ ಪ್ರಯತ್ನ ಮಾಡಿ ನೀರು ತರುತ್ತವೆಯೇ ಅಥವಾ ಈ ಬಾರಿಯೂ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಎತ್ತಿನಹೊಳೆಯನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.