ಅಗರಿ ಎಂಟರ್ ಪ್ರೈಸಸ್ : ಹಬ್ಬ ಹಬ್ಬಗಳ ಉತ್ಸವ ಡ್ರಾ

Contributed bylokeshsurathkal@gmail.com|Vijaya Karnataka
Vijay Karnataka
ವಿಕ ಸುದ್ದಿಲೋಕ ಸುರತ್ಕಲ್

ಅಗರಿ ಎಂಟರ್ ಪ್ರೈಸರ್ಸ್ ಸಂಸ್ಥೆ ಕರಾವಳಿಯಲ್ಲಿಹಲವು ಶಾಖೆ ತೆರೆದು ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿರುವುದಕ್ಕೆ ಸಂಸ್ಥೆಯ ಗ್ರಾಹಕ ಸ್ನೇಹಿ ನೀತಿ ಕಾರಣ ಎಂದು ಸುರತ್ಕಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಶ್ಲಾಘಿಘಿಸಿದರು.
ಅಗರಿ ಎಂಟರ್ ಪ್ರೈಸಸ್ ಸುರತ್ಕಲ್ ಶುಭಗಿರಿ ಶಾಖೆಯಲ್ಲಿಅಗರಿ ಹಬ್ಬ ಹಬ್ಬಗಳ ಉತ್ಸವ, ನೂರು ದಿನ, ನೂರು ಬಹುಮಾನ 11ನೇ ಹಂತದ 2ನೇ ಡ್ರಾ ಕಾರ್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಮುಖರಾದ ಕುಳಾಯಿ ಮೈರ್ಪಾಡಿ ಶಾಲೆಯ ಎಸ್ ಡಿಎಂಸಿ ಅಧಕ್ಷ ಎಚ್ .ಶ್ರೀಧರ್ ಎಚ್ ., ಕುಳಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಸಾಲಿಯಾನ್ , ಹೊಸಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಎಚ್ .ವಿ., ವಿದ್ವಾಂಸ ಕೆ.ಕೆ.ಪೇಜಾವರ, ಎಚ್ ಡಿಎಫ್ ಸಿ ಕೇಂದ್ರ ಕಚೇರಿಯ ಅಸಿಸ್ಟೆಂಟ್ , ಮ್ಯಾನೇಜರ್ ರಾಜೇಶ್ ಶೆಟ್ಟಿ, ಕುಳಾಯಿ ಭಾರತಿ ಆಂಗ್ಲಮಾಧ್ಯಮ ಶಾಲೆ ಅಧ್ಯಾಪಕಿ ಶರ್ಮಿಳಾ, ವಿದ್ಯಾದಾಯಿನಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಶುಭ ಹಾರೈಸಿದರು.

ಅಗರಿ ಎಂಟರ್ ಪ್ರೈಸಸ್ ಮಾಲೀಕ ಅಗರಿ ರಾಘವೇಂದ್ರ ರಾವ್ ಸ್ವಾಗತಿಸಿದರು. ಶುಭಗಿರಿ ಶಾಖೆಯ ಮ್ಯಾನೇಜರ್ ಮಹೇಶ್ ದೇವಾಡಿಗ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

21ಅಗರಿ

ಅಗರಿ ಶುಭಗಿರಿ ಶಾಖೆಯಲ್ಲಿಅಗರಿ ಹಬ್ಬ ಹಬ್ಬಗಳ ಉತ್ಸವ ಡ್ರಾ ನಡೆಯಿತು.