ವಿಟ್ಲದ ಅಧ್ಯಾಪಕರ ಸಹಕಾರಿ ಸಂಘದ 2025-26ನೇ ಸಾಲಿನ ಮಹಾಸಭೆ ವಿಟ್ಲಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿಸಂಘದ ಅಧ್ಯಕ್ಷ ರಮೇಶ್ ನಾಯಕ್ ಅಧ್ಯಕ್ಷತೆಯಲ್ಲಿನಡೆಯಿತು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಅಧ್ಯಕ್ಷ ಮಹಮ್ಮದ್ ರಿಯಾಝ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ 85 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ನವೀನ್ ಪಿ.ಎಸ್ ., ನಿರ್ದೇಶಕರಾದ ಪುಷ್ಪರಾಜ್ ಬಿ., ಡಾ. ನವೀನ್ ಕೋಣಾಜೆ, ಅನಿತಾ ಮಿನೇಜಸ್ , ಭಾರತಿ, ಉಮಾನಾಥ ರೈ ಎಂ., ಶಿವಕುಮಾರ್ ಎಂ.ಜಿ., ನಾಗೇಶ್ ಪಾಟಾಳಿ ಕೆ., ಸಂದೇಶ್ ಎಂ.ಎಸ್ ., ರಘು, ರವಿ ನಾಯ್ಕ ಐ., ಲಕ್ಷ್ಮೀಕಾಂತ್ ಬೇಕಲ್ ಎಸ್ ., ಶ್ರೀಧರ ಎನ್ ., ಶೀನಪ್ಪ ಎನ್ . ಹಾಗೂ ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷ ರಮೇಶ್ ನಾಯಕ್ ಸ್ವಾಗತಿಸಿದರು. ಸದಸ್ಯರಿಗೆ ಶೇ.16.25 ಡಿವಿಡೆಂಡ್ ಘೋಷಿಸಲಾಯಿತು. ಸಂಘದ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದ ಜನರಲ್ ಮ್ಯಾನೇಜರ್ ಸುಚಿನ್ ರಾಜ್ ಶೆಟ್ಟಿ , ಸಂಘವು ಪ್ರಸಕ್ತ ಸಾಲಿನಲ್ಲಿಒಟ್ಟು 8,07,57,76,642.66 ರೂ ಮೊತ್ತದ ವ್ಯವಹಾರ ನಡೆಸಿದ್ದು, 2,13,50,091.29 ರೂ. ಲಾಭ ಗಳಿಸಿದೆ ಎಂದರು.
ನಿರ್ದೇಶಕ ಉಮಾನಾಥ ರೈ ವಂದಿಸಿದರು. ನಿ¨ೕæರ್ ಶಕ ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.