ವಿಕ ಸುದ್ದಿಲೋಕ ಮೂಲ್ಕಿಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದಾನಿಗಳಾದ ಪುತ್ತೂರು ಬಾಳಿಕೆ ಮನೆ ಲತಾ ಸಾಧು ಶೆಟ್ಟಿ ಮತ್ತು ಸಹೋದರರ ಮೂಲಕ ನಿರ್ಮಾಣವಾಗಲಿರುವ ಪುತ್ತೂರು ಬಾಳಿಕೆ ಮನೆ ಮೈಂದ ಶೆಟ್ಟಿ ಮಹಾದ್ವಾರಕ್ಕೆ ಗುದ್ದಲಿಪೂಜೆ ನಡೆಯಿತು.
ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾದ ಗುತ್ತಿನಾರ್ ಸುಧಾಕರ ಎಸ್ .ಶೆಟ್ಟಿ ದೆಪ್ಪುಣಿಗುತ್ತು, ರಾಮದಾಸ್ ಶೆಟ್ಟಿ ಬಾಳಿಕೆ ಮನೆ ವಿಶೇಷ ಪ್ರಾರ್ಥನೆ ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಂಬಯಿ ಸಮಿತಿ ಅಧ್ಯಕ್ಷ ವಿಜಿತ್ ಟಿ.ಶೆಟ್ಟಿ ಬಾಳಿಕೆಮನೆ, ಅಧ್ಯಕ್ಷರಾದ ಶಿವಚಂದ್ರ ಶೆಟ್ಟಿ ದೆಪ್ಪುಣಿಗುತ್ತು, ಸಮಿತಿ ಕಾರ್ಯಾಧ್ಯಕ್ಷ ಜನಾನಂದ ಶೆಟ್ಟಿ ತಿಂಗೊಳೆ ಮನೆ, ಪ್ರಧಾನ ಕಾರ್ಯದರ್ಶಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಎಂಜಿನಿಯರ್ ಜೀವನ್ ಶೆಟ್ಟಿ ಕಾರ್ನಾಡ್ , ಗುತ್ತಿಗೆದಾರ ಹರ್ಷಿತ್ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಫೋಟೋ:21ಎಮ್ ಎಲ್ ಕೆ1
ಕ್ಯಾ: ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ನೂತನ ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.