ಡಾ.ಬಿ.ಆರ್ .ಅಂಬೇಡ್ಕರ್ ತಮ್ಮ ಜೀವನದ ಪ್ರತಿ ಹಂತದಲ್ಲಿಅಸಮಾನತೆ ಎದುರಿಸಿದವರು. ಅವರ ಪ್ರಬುದ್ಧ ಚಿಂತನೆಯ ಮೂಲಕ ಸಂವಿಧಾನವನ್ನು ರಚಿಸಿ ದೇಶದ ಪ್ರಜಾಪ್ರಭುತ್ವಕ್ಕೆ ಭದ್ರ ಅಡಿಪಾಯ ಹಾಕಿದರು ಎಂದು ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಹೇಳಿದರು.ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಕೆಪಿಎಸ್ ) ಉಡುಪಿ ಜಿಲ್ಲಾಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇತ್ತೀಚಿಗೆ ನಡೆದ ಡಾ.ಬಿ.ಆರ್ .ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಭಾಸ್ಕರ್ ವಿಟ್ಲಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನದ ಮೂಲಕ ಹೆಣ್ಣು ಮಕ್ಕಳಿಗೆ ಗೌರವ ಸ್ವತಂತ್ರ ಸಮಾನತೆ ಒದಗಿಸಿದವರು ಡಾ.ಬಿ.ಆರ್ .ಅಂಬೇಡ್ಕರ್ . ಸಂವಿಧಾನದಂತೆ ಇಂದಿನ ಪೀಳಿಗೆಯು ಮಹಿಳೆಯರಿಗೆ ಸಮಾನ ಅವಕಾಶ ಗೌರವ ಸ್ವತಂತ್ರ ನೀಡಬೇಕು ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಡಾ. ಸುಮಾ ಎಸ್ . ಅಧ್ಯಕ್ಷತೆ ವಹಿಸಿದ್ದರು. ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಹೇಮಚಂದ್ರ ಸಾಲ್ಯಾನ್ , ಕೆಪಿಎಸ್ ಪಡುಬಿದ್ರಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಬಂಗೇರ, ಪ್ರೌಢಶಾಲಾ ವಿಭಾಗ ಹಿರಿಯ ಸಹಶಿಕ್ಷಕಿ ಸರಿತಾ ಡಿಸೋಜ, ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಶೈಲಜಾ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಶಾಲೆಯ ಶಿಕ್ಷಕಿ ಸುಜಾತಾ ನಿರೂಪಿಸಿ, ಅಜಯ್ ವಂದಿಸಿದರು.
ಫೋಟೋ:21ಎಚ್ ಕೆ1
ಕ್ಯಾ: ಪಡುಬಿದ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿನಡೆದ ಡಾ. ಬಿ.ಆರ್ . ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿಪ್ರಶಸ್ತಿ ವಿತರಿಸಲಾಯಿತು.