ಸರಕಾರಿ ಸಿಬ್ಬಂದಿ ಸವಲತ್ತುಗಳನ್ನು ಮರುಸ್ಥಾಪಿಸಲು ಎಸ್ ಇಯು ಆಗ್ರಹ

Contributed bycrastalp19@gmail.com|Vijaya Karnataka
Vijay Karnataka
ಕಾಸರಗೋಡು: ಎಲ್ ಡಿಎಫ್ ಸರಕಾರವು ಹತ್ತು ವರ್ಷಗಳಿಂದ ನೌಕರರಿಗೆ ನಿಷೇಧಿಸಿದ ಲೀವ್ ಸರೆಂಡರ್ ಮತ್ತಿತರ ಸವಲತ್ತುಗಳು, ಪಾವತಿಸಲು ಬಾಕಿ ಇರುವ ಕ್ಷೇಮಭತ್ಯೆ ಮಂಜೂರುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾರ್ಮಿಕರ ಸಂಘಟನೆ(ಎಸ್ ಇಯು) ಜಿಲ್ಲಾಸಮ್ಮೇಳನವು ಆಗ್ರಹಿಸಿದೆ.

ಇದೇ ವೇಳೆ ಸಮಯೋಚಿತವಾಗಿ ಸವಲತ್ತುಗಳನ್ನು ವಿತರಿಸುವುದಾಗಿ ಹೇಳಿದ ಯುಡಿಎಫ್ ಸರಕಾರದ ಘೋಷಣೆಯು ಕಾರ್ಮಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದು, ಸ್ವಾಗತಾರ್ಹವಾಗಿದೆ ಎಂದು ಸಮ್ಮೇಳನವು ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಲೀಗ್ ಜಿಲ್ಲಾಅಧ್ಯಕ್ಷ ಶಾಸಕ ಕಲ್ಲಟ್ರ ಮಾಹಿನ್ ಕಾರ ್ಯಕ್ರಮ ಉದ್ಘಾಟಿಸಿದರು. ಎಸ್ ಇಯು ಜಿಲ್ಲಾಅಧ್ಯಕ್ಷ ಅಬ್ದುಲ್ ರಹ್ಮಾನ್ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಆಮಿರ್ ಕೋಡೂರು, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಬ್ದುಲ್ಲಕುಂಞಿ ಚೆರ್ಕಳ, ಕೆ.ಇ.ಎ.ಬಕ್ಕರ್ , ಅಶ್ರಫ್ ಎಡನೀರು, ಕೆ. ಬಿ.ಮುಹಮ್ಮದ್ ಕುಂಞಿ, ಎ.ಎಂ.ಅಬೂಬಕ್ಕರ್ , ಒ.ಎಂ.ಶೆಫೀಕ್ , ಬೀರು ಪಿ. ಮುಹಮ್ಮದ್ , ಟಿ.ಎ.ಸಲೀಂ, ನಾಸರ್ ನಙರತ್ , ಶಾನಿಫ್ ನೆಲ್ಲಿಕಟ್ಟೆ, ರಜೀಶ್ ಅನಿಯರಂ ಮಾತನಾಡಿದರು.

ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮ್ಮೇಳನವನ್ನು ಮುಸ್ಲಿಂ ಲೀಗ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಎ. ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಕೋಶಾಧಿಕಾರಿ ಮುನೀರ್ ಹಾಜಿ ಕಂಬಾರು ಸ್ಮರಣಿಕೆಗಳನ್ನು ವಿತರಿಸಿದರು. ಶೆಬಿನ್ ಹಾರಿಸ್ ಅಧ್ಯಕ್ಷತೆ ವಹಿಸಿದ್ದರು.

......

ಚಿತ್ರ: 20ಕೆಎಸ್ ಎಲ್ ಎಸ್ ಇಯು- ಮುಸ್ಲಿಂ ಲೀಗ್ ಜಿಲ್ಲಾಅಧ್ಯಕ್ಷ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.