ಮುದಗಲ್ - * ಕೇಳ್ರಪ್ಪೋ ಕೇಳಿ-ರಸ್ತೆ ಮೇಲೆ ಚರಂಡಿ ನೀರು

Contributed bydnkodihal@gmail.com|Vijaya Karnataka
Vijay Karnataka
ರಸ್ತೆ ಮೇಲೆ ಚರಂಡಿ ನೀರು

ಮುದಗಲ್ ಸಮೀಪದ ಬಯ್ಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಲಗುಡ್ಡದಲ್ಲಿಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಪರಿಣಾಮ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ರಸ್ತೆಯಲ್ಲಿನೀರು ನಿಂತಿರುವುದರಿಂದ ದುರ್ವಾಸನೆ ಹಾಗೂ ಸೊಳ್ಳೆಗಳ ಹಾವಳಿ ಹೆಚ್ಚಾಗುವ ಆತಂಕವೂ ಗ್ರಾಮಸ್ಥರಲ್ಲಿಮೂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಚರಂಡಿ ನೀರು ರಸ್ತೆಗೆ ಹರಿಯದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಹಾಗೂ ಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು.
-ಮುತ್ತಣ್ಣ ಕೆಲೂರು, ಹನುಮಮ್ಮ, ಶಾಂತಪ್ಪ ಚಲುವಾದಿ, ಸಂಗಪ್ಪ ಜೂಲಗುಡ್ಡ, ರಾಘವೇಂದ್ರ, ಬಯ್ಯಾಪುರ ಗ್ರಾಮಸ್ಥರು

* ಕೋಚ್

ಸಜ್ಜಲಗುಡ್ಡದಲ್ಲಿರಸ್ತೆಗೆ ಚರಂಡಿ ನೀರು ಹರಿಯುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಸ್ಥಳ ಪರೀಶಿಲಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

-ಸುರೇಶ ಪಾಟೀಲ್ ಪಿಡಿಒ, ಬಯ್ಯಾಪುರ ಗ್ರಾ.ಪಂ

ಪೋಟೋ(ಆರ್ .ಸಿ.ಹೆಚ್ 21ಮುದಗಲ್ 01)

ಮುದಗಲ್ ಸಮೀಪದ ಬಯ್ಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜ್ಜಲಗುಡ್ಡ ಗ್ರಾಮದಲ್ಲಿಚರಂಡಿ ನೀರು ರಸ್ತೆಗೆ ಹರಿಯುತ್ತಿರುವುದು.