(ಮಸ್ಟ್ )** ಸ್ವಾವಲಂಬಿ ಜೀವನ ಸೃಷ್ಟಿಗೆ ಧರ್ಮಸ್ಥಳ ಯೋಜನೆ ಸಹಕಾರಿ: ಶಾಸಕ ರಾಜೇಶ್ ನಾಯ್ ್ಕ

Contributed bymambadynews@gmail.com|Vijaya Karnataka
Vijay Karnataka
(ಮಸ್ಟ್ )ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕಾರ್ಯಕ್ರಮ

ವಿಕ ಸುದ್ದಿಲೋಕ ಬಂಟ್ವಾಳ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಂದಾಗಿ ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ ಆರ್ಥಿಕ ಭದ್ರತೆಯೊಂದಿಗೆ ಬದುಕುವಂತಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ ್ಕ ಹೇಳಿದರು.

ಕಲ್ಲಡ್ಕ ಪೂರ್ಲಿಪಾಡಿ ಮರಾಠಿ ಭವನದಲ್ಲಿಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವಿಟ್ಲಇದರ ಕಲ್ಲಡ್ಕ ವಲಯದ 7 ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದಲ್ಲಿನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಾಗೂ ದಾಖಲಾತಿ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಮಾತನಾಡಿ, ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿಕ್ರಾಂತಿಕಾರಿ ಬದಲಾವಣೆ ತರಲು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಗ್ರಾಮಾಭಿವೃದ್ಧಿ ಯೋಜನೆಯೇ ಪ್ರಮುಖ ಕಾರಣ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ ಬಾಬು ನಾಯ್ ್ಕ ಮಾತನಾಡಿ, ಯೋಜನೆಯು ಬೆಳೆದು ಬಂದ ಹಾದಿಯನ್ನು ವಿವರಿಸುತ್ತಾ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯವಾಹಿನಿಗೆ ತರುವಲ್ಲಿಯೋಜನೆಯ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.

ಸಾಧಕರಿಗೆ ಗೌರವಾರ್ಪಣೆ: ಯೋಜನೆಗೆ ವಿಶೇಷ ಬೆಂಬಲ ನೀಡುತ್ತಿರುವ ಶೇಖರ ಪೂಜಾರಿ ಕಾನೇಕೋಡಿ ಹಾಗೂ ಶಂಕರನಾರಾಯಣ ಐತಾಳ್ ಅವರನ್ನು ಗೌರವಿಸಲಾಯಿತು. ಜತೆಗೆ ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಅಧ್ಯಕ್ಷ ಪದ್ಮನಾಭ ರೈ, ನೇತಾಜಿ ಯುವಕ ಮಂಡಲದ ಗೌರವಾಧ್ಯಕ್ಷ ನಾಗೇಶ್ ಕಲ್ಲಡ್ಕ, ಉದ್ಯಮಿ ಗಣೇಶ್ ಶೆಟ್ಟಿ ಗೋಳ್ತಮಜಲು, ಜಿಲ್ಲಾಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ , ಜನಜಾಗೃತಿ ವೇದಿಕೆ ಅಧ್ಯಕ್ಷ ವೆಂಕಟರಾಯ ಪ್ರಭು, ವಿಟ್ಲತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಗಣೇಶ್ ನಾಯ್ ್ಕ ಉಪಸ್ಥಿತರಿದ್ದರು. ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರಾದ ಶಾಂಭವಿ ಆಚಾರ್ಯ, ದಯಾನಂದ ಗೌಡ, ಸೀತಾ ಆಚಾರ್ಯ, ಸೀತಾರಾಮ್ ಶೆಟ್ಟಿ, ಮಮತಾ, ಉಮಾವತಿ, ಮಮತಾ ಶೆಟ್ಟಿ ಹಾಗೂ ನೂತನ ಅಧ್ಯಕ್ಷರಾದ ಚಿದಾನಂದ ಸುವರ್ಣ, ಮಾಧವ ಸಾಲಿಯಾನ್ , ಸುನಿಲ್ ನಾಯ್ ್ಕ, ವೀಣಾ, ಚಂದ್ರಾವತಿ, ಶಾಲಿನಿ, ನಾಗಪ್ಪ ಭಾಗವಹಿಸಿದ್ದರು.

ವಲಯ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಅಶ್ವಿನಿ ವರದಿ ವಾಚಿಸಿದರು. ಚಿದಾನಂದ ಸುವರ್ಣ ಅನಿಸಿಕೆ ಹಂಚಿಕೊಂಡರು. ಸೇವಾಪ್ರತಿನಿಧಿ ವಿದ್ಯಾ ವಂದಿಸಿದರು. ಸಂತೋಷ್ ಬೊಲ್ಪೊಡಿ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ: 21ಬಿಎಚ್ ಯೋಜನೆ

ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಏಳು ಒಕ್ಕೂಟಗಳ ಪದಗ್ರಹಣ ನಡೆಯಿತು.