ಪಂಚರಂಗಿ ಬ್ಯಾನರ್ ಅಡಿಯಲ್ಲಿಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ ‘ಅಮರ್ಥ’ ಸಿನಿಮಾವು ನಗರದ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿಶುಕ್ರವಾರ ಬಿಡುಗಡೆಗೊಂಡಿತು.ನಾನಾ ಗಣ್ಯರ ಸಮ್ಮುಖದಲ್ಲಿಕಾರ್ಯಕ್ರಮ ಉದ್ಘಾಟಿಸಲಾಯಿತು.
ಬಳಿಕ ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಕನ್ನಡದಲ್ಲಿಒಂದು ಉತ್ತಮ ಸಿನಿಮಾ ನಿರ್ಮಿಸಬೇಕೆಂಬ ನನ್ನ ಆಸೆ ‘ಅಮರ್ಥ’ ಚಿತ್ರದ ಮೂಲಕ ಈಡೇರಿದೆ ಎಂದರು.
ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತನಾಡಿ, ಕನ್ನಡದಲ್ಲಿಉತ್ತಮ ಸದಭಿರುಚಿಯ ಸಿನಿಮಾಗಳು ಮೂಡಿಬರುತ್ತಿವೆ. ಇಂತಹ ಚಿತ್ರಗಳನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಉದ್ಯಮಿ ಬರೋಡ ಶಶಿಧರ ಶೆಟ್ಟಿ ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿ ಅವರ ಬ್ಯಾನರ್ ನಿಂದ ಮುಂಬರುವ ದಿನಗಳಲ್ಲಿಇನ್ನಷ್ಟು ಉತ್ತಮ ಸಿನಿಮಾಗಳು ತೆರೆಗೆ ಬರಲಿ ಎಂದರು.
ಸತೀಶ್ ಶೆಟ್ಟಿ ಪಟ್ಲ, ಚಿತ್ತರಂಜನ್ , ರವೀಂದ್ರನಾಥ ರೈ, ಬಾಲಕೃಷ್ಣ ಶೆಟ್ಟಿ, ಸ್ವರ್ಣಸುಂದರ್ , ತಾರಾನಾಥ ಶೆಟ್ಟಿ, ಕೃಷ್ಣ ತಾರೆಮಾರ್ , ಡಾ. ಮಮತಾ ಪಿ. ಶೆಟ್ಟಿ, ಮೋಹನ್ ಕೊಪ್ಪಲ ಹಾಗೂ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.
ಫೊಟೋ:
18ಸೆ-ಅಮರ್ಥ
‘ಅಮರ್ಥ’ ಸಿನಿಮಾದ ಬಿಡುಗಡೆ ಕಾರ್ಯಕ್ರಮವು ನಗರದ ಭಾರತ್ ಸಿನಿಮಾಸ್ ನಲ್ಲಿನಡೆಯಿತು.