* ಮುದಗಲ್ ಉಪಮಾರುಕಟ್ಟೆಯಲ್ಲಿಸೂರ್ಯಕಾಂತಿ ಮಾರಾಟಕ್ಕೆ ತೊಂದರೆ* ಎಪಿಎಂಸಿ ದಲ್ಲಾಳಿಗಳ ಕಾರುಬಾರು
* ಅಧಿಕಾರಿಗಳ ನಿರ್ಲಕ್ಷತ್ರ್ಯಕ್ಕೆ ರೈತರ ಆಕ್ರೋಶ
ದೇವಣ್ಣ ಎನ್ .ಕೋಡಿಹಾಳ ಮುದಗಲ್
d್ಞkಟdಜಿha್ಝಃಜಞaಜ್ಝಿ.್ಚಟಞ
ಸ್ಥಳೀಯ ಎಪಿಎಂಸಿ ಉಪಮಾರುಕಟ್ಟೆಯಲ್ಲಿಸೂರ್ಯಕಾಂತಿ ಮಾರಾಟಕ್ಕೆ ತಂದಿರುವುದಕ್ಕೆ ‘ಸೂಟ್ ’ ನೆಪದಲ್ಲಿದರ ಕಡಿತ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಗೆ 5 ಕೆಜಿ ಸೂಟ್ ಕಡಿತಮಾಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಶುಕ್ರವಾರ ರೈತರು ಮತ್ತು ರೈತ ಸಂಘದವರು ಸಂಚಾರ ತಡೆದು ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿಎಚ್ಚೆತ್ತ ದಲ್ಲಾಳಿಗಳು ಭಾನುವಾರ ರೈತರು ಮಾರಾಟಕ್ಕೆ ತಂದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್ ಗೆ 3 ಕೆಜಿ ಸೂಟ್ ಮಾಡಲು ಮುಂದಾಗಿದ್ದಾರೆ. ಜಿಲ್ಲಾಮತ್ತು ತಾಲೂಕು ಎಪಿಎಂಸಿ ಕೇಂದ್ರಗಳಲ್ಲಿಅಲ್ಲಿನ ದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ 7,700 ರೂ. ದರದಲ್ಲಿಖರೀದಿಸುತ್ತಿದ್ದಾರೆ. ಆದರೆ ಇಲ್ಲಿನ ದಲ್ಲಾಳಿಗಳು 7,500 ರೂ. ದರದಲ್ಲಿಖರೀದಿಗೆ ಮುಂದಾಗಿದ್ದಾರೆ. ಉತ್ಪನ್ನದಲ್ಲಿತೇವಾಂಶ, ಕಸಕಡ್ಡಿ, ಗುಣಮಟ್ಟ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟು ದಲ್ಲಾಳಿಗಳು ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಇದರಿಂದ ಈಗಾಗಲೇ ಬೆಲೆ ಕುಸಿತ, ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ನಷ್ಟವಾಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಯಲ್ಲಿಉತ್ಪನ್ನದ ಗುಣಮಟ್ಟ ಪರಿಶೀಲನೆ ಹಾಗೂ ದರ ನಿಗದಿಯಲ್ಲಿಪಾರದರ್ಶಕತೆ ಇರಬೇಕು. ‘ಸೂಟ್ ’ ಹೆಸರಿನಲ್ಲಿಕಡಿತ ಮಾಡುವ ಪ್ರಮಾಣವನ್ನು ರೈತರಿಗೆ ಸ್ಪಷ್ಟವಾಗಿ ತಿಳಿಸಿ, ತೂಕ ಮತ್ತು ದರದ ವಿವರಗಳನ್ನು ದಾಖಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕೂಡಲೇ ಎಪಿಎಂಸಿ ಆಡಳಿತ ಮಂಡಳಿಯವರು ಈ ಕುರಿತು ಪರಿಶೀಲಿಸಿ, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿಪ್ರಚಲಿತ ದರ, ಉತ್ಪನ್ನದ ಗುಣಮಟ್ಟ ಹಾಗೂ ಮಾಡಿರುವ ಕಡಿತದ ವಿವರಗಳನ್ನು ರೈತರಿಗೆ ಸ್ಪಷ್ಟವಾಗಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
*ಕೋಟ್ -
ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿದಲ್ಲಾಳಿಗಳು ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ 5 ಕೆಜಿ ಕಡಿತ ಮಾಡಿದ್ದರು. ಆದರೆ ಈಗ 3 ಕೆಜಿ ಕಡಿತಮಾಡಿ ದರದಲ್ಲಿ200 ರೂ. ಕಡಿತ ಮಾಡಿರುವುದು ಸರಿಯಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಭರವಸೆ ನೀಡಿದ್ದಾರೆ.
-ಶಿವಪುತ್ರಗೌಡ ಜಾಗೀರನಂದಿಹಾಳ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ
* ಕೋಟ್ -
ಮುದಗಲ್ ಎಪಿಎಂಸಿ ಉಪಮಾರುಕಟ್ಟೆಯಲ್ಲಿದಲ್ಲಾಳಿಗಳು ಸೂರ್ಯಕಾಂತಿ ಸೂಟ್ ನೆಪದಲ್ಲಿಯೂ ದರದಲ್ಲಿಕಡಿತ ಮಾಡಿ ಖರೀದಿಸುತ್ತಿರುವುದು ನನ್ನ ಗಮನಕ್ಕಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಅಮರೇಶ ಹೆಸರೂರು, ಅಧ್ಯಕ್ಷ, ಎಪಿಎಂಸಿ ಲಿಂಗಸುಗೂರು
* ಬಾಕ್ಸ್ -
ಆರಂಭವಾಗದ ಖರೀದಿ ಕೇಂದ್ರ
ಕಳೆದ ವರ್ಷ ಸೂರ್ಯಕಾಂತಿ ಬೆಳೆಯನ್ನು ಎಂಎಸ್ ಪಿ ದರದಲ್ಲಿಕೇಂದ್ರ ಸರಕಾರ ಆಯಾ ವ್ಯವಸಾಯ ಸೇವಾ ಕೆಂದ್ರಗಳಲ್ಲಿಪ್ರತಿ ಕ್ವಿಂಟಾಲ್ ಗೆ 7,721 ರೂ.ನಂತೆ ರೈತರು ಖರೀದಿ ಕೇಂದ್ರಗಳಿಗೆ ನೀಡಿದ್ದರು. ಆದರೆ ಈ ವರ್ಷ ಮತ್ತೆ 622 ರೂ. ಹೆಚ್ಚುವರಿ ಮಾಡಿ 8,343 ಎಎಸ್ಪಿ ದರ ನಿಗದಿ ಮಾಡಿದೆ. ಆದರೆ ಈ ವರ್ಷ ಬರ ಆವರಿಸಿದ್ದರಿಂದ ಅಲ್ಪಸ್ವಲ್ಪ ಮಳೆಗೆ ರೈತರು ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ತೇವಾಂಶ ಕೊರತೆಯಿಂದ ಬೆಳೆ ಇಳುವರಿಯಲ್ಲಿಕಡಿಮೆಯಾಗಿದೆ. ದರದಲ್ಲಿಹೆಚ್ಚಾಗಿದೆ ಎಂದು ನಂಬಿಕೊಂಡಿದ್ದ ರೈತರಿಗೆ ದಲ್ಲಾಳಿಗಳು ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದ ಇದುವರೆಗೂ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರಗಳಲ್ಲಿಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಇದರಿಂದ ಅನ್ನದಾತರು ಕಡಿಮೆ ದರ ಹಾಗೂ ಸೂಟ್ ನೆಪದಲ್ಲಿದಲ್ಲಾಳಿಗಳಿಗೆ ನೀಡಲು ಮುಂದಾಗಿದ್ದಾರೆ. ಕೂಡಲೇ ತಾಲೂಕಿನಲ್ಲಿಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ಅನೂಕೂಲಮಾಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
---
ಆರ್ .ಸಿ.ಹೆಚ್ 20ಮುದಗಲ್ 1
ಮುದಗಲ್ ಎಪಿಎಂಸಿ ಉಪಮಾರುಕಟ್ಟೆ ಕಚೇರಿ.
ಆರ್ .ಸಿ.ಹೆಚ್ 20ಮುದಗಲ್ 2
ಮುದಗಲ್ ಎಪಿಎಂಸಿ ಉಪಮಾರುಕಟ್ಟೆಗೆ ರೈತರು ಸೂರ್ಯಕಾಂತಿ ಬೆಳೆ ಮಾರಾಟ ಮಾಡಲು ಆಟೊ ಮೂಲಕ ತಂದಿರುವುದು.