ವಿಕ ಸುದ್ದಿಲೋಕ ಗಂಗಾವತಿ‘‘ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ,’’ ಎಂದು ಯಾದವ ಸಮಾಜದ ತಾಲೂಕು ಅಧ್ಯಕ್ಷ ಎಚ್ .ಸಿ.ಯಾದವ್ ಹೇಳಿದರು.
ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿತಾಲೂಕು ಯಾದವ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ‘‘ಸಾಧಕರನ್ನು ಗುರುತಿಸಿ ಗೌರವಿಸುವುದು ಹಾಗೂ ಮಾನವೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವುದು ಉತ್ತಮ ಕಾರ್ಯ,’’ ಎಂದರು.
ಇದಕ್ಕೂ ಮುನ್ನ ಕಲಾ ತಂಡಗಳು, ಸಮಾಜದ ಮುಖಂಡರು ಹಾಗೂ ಮಹಿಳೆಯರು, ಯುವಕರು ಸೇರಿ ಅಪಾರ ಸಂಖ್ಯೆಯಲ್ಲಿಮೆರವಣಿಗೆ ನಡೆಯಿತು. ನಂತರ ಶ್ರೀಕೃಷ್ಣನ ನಾಮಸ್ಮರಣೆ, ಭಜನೆ ಹಾಗೂ ನಾನಾ ಕಾರ್ಯಕ್ರಮ ನಡೆದವು. ನಂತರ ಸಮಾಜದ ಪ್ರತಿಭಾವಂತ ಹಾಗೂ ವಿಶೇಷವಾಗಿ ಪತಿಗೆ ಕಿಡ್ನಿ ದಾನ ಮಾಡಿದ ಮಲ್ಲಾಪುರದ ಮಹಿಳೆಯನ್ನು ಗೌರವಿಸಲಾಯಿತು.
ಆನೆಗೊಂದಿ ಆದಿಶಕ್ತಿ ದುರ್ಗಾಮಾತೆಯ ದಾಸೋಹ ರತ್ನ ಬ್ರಹ್ಮಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಶ್ರೀಕೃಷ್ಣನ ಜೀವನ ಸಂದೇಶ, ಧರ್ಮ, ಮಾನವೀಯತೆ ಹಾಗೂ ಸಮಾಜದಲ್ಲಿಪರಸ್ಪರ ಸಹಕಾರದ ಮಹತ್ವದ ಕುರಿತು ಆಶೀರ್ವಚನ ನೀಡಿದರು.
ನಗರಸಭೆ ಮಾಜಿ ಅಧ್ಯಕ್ಷ ಎಸ್ . ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಸೋಮನಾಥ ಪಟ್ಟಣಶೆಟ್ಟಿ, ನೀಲಕಂಠಪ್ಪ ನಾಗಶೆಟ್ಟಿ, ಪ್ರಮಾಣಾನಂದ ಯಾದವ್ , ಹನುಮಂತಪ್ಪ ವೆಂಕಟಗಿರಿ, ಬಸಣ್ಣ ಹೇಡಹಳ್ಳಿ ಇದ್ದರು.
---
20 ಗಂಗಾವತಿ 03
ಗಂಗಾವತಿ ಸರೋಜಮ್ಮ ಕಲ್ಯಾಣ ಮಂಟಪದಲ್ಲಿತಾಲೂಕು ಯಾದವ ಸಮಾಜದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.