ವಿಶೇಷ ಚೇತನ ಮಕ್ಕಳಿಗಾಗಿ ಮಂಜೇಶ್ವರ ಬಿಆರ್ ಸಿಯಲ್ಲಿವೈದ್ಯಕೀಯ ಶಿಬಿರ

Contributed byyajjupnagar@gmail.com|Vijaya Karnataka
manjeshwara brc medical camp for special needs children
ವಿಕ ಸುದ್ದಿಲೋಕ ಉಪ್ಪಳ

ವಿಶೇಷ ಚೇತನ ಮಕ್ಕಳಿಗೆ ಸಹಾಯಕ ಸಾಧನಗಳನ್ನು ಖಾತರಿಪಡಿಸಲು ಮಂಜೇಶ್ವರ ಬಿ.ಆರ್ .ಸಿ.ಯಲ್ಲಿವೈದ್ಯಕೀಯ ಮೌಲ್ಯಮಾಪನ ಶಿಬಿರವನ್ನು ಆಯೋಜಿಸಲಾಯಿತು. ಈ ಸಂದರ್ಭ ಮಂಜೇಶ್ವರ ಬಿ.ಆರ್ .ಸಿ. ವ್ಯಾಪ್ತಿಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿದಾಖಲಾಗಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿರುವ ಸಹಾಯಕ ಸಾಧನಗಳನ್ನು ಒದಗಿಸುವ ಸಲುವಾಗಿ ಮಕ್ಕಳನ್ನು ತಜ್ಞ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಶಿಬಿರದ ಔಪಚಾರಿಕ ಉದ್ಘಾಟನೆಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ನೆರವೇರಿಸಿದರು. ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾಕಾರ್ಯಕ್ರಮ ಅಧಿಕಾರಿ ಚೆರಿಷ್ಮಾ ಸಿ. ಅಧ್ಯಕ್ಷತೆ ವಹಿಸಿದರು. ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಶೌಕತಲಿ ಅಕ್ಕಾಲತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಳಿಂಜ ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಶುಭ ಹಾರೈಸಿದರು. ಕಾಸರಗೋಡು ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಅರುಣ್ ರಾಮ್ ಶಿಬಿರಕ್ಕೆ ನೇತೃತ್ವ ನೀಡಿದರು.

ಸುಮಾರು ಐವತ್ತು ಮಕ್ಕಳನ್ನು ಪರೀಕ್ಷಿಸಿ, ಅವರ ಅಗತ್ಯಗಳನ್ನು ಮೌಲ್ಯಮಾಪನ ಮಾಡಲಾಯಿತು. ಅಗತ್ಯವಿರುವ ಸಹಾಯಕ ಸಾಧನಗಳನ್ನು ಒದಗಿಸುವ ಸಲುವಾಗಿ ಮಕ್ಕಳನ್ನು ಸೂಕ್ತ ಕೇಂದ್ರಗಳಿಗೆ ಶಿಫಾರಸು ಮಾಡಲಾಯಿತು.ವಿಶೇಷ ಶಿಕ್ಷಣ ಶಿಕ್ಷಕರಾದ ಬಿಂದ್ಯ ಎನ್ ., ರೀಮಾ ಮೊಂತೆರಿಯೋ, ಅನುಶ್ರೀ ಪಿ., ಸರಿತಾ ಕೆ., ಭವ್ಯ, ರಶ್ಮಿ ಹಾಗೂ ಪದ್ಮ ಸರೋಜ ಮತ್ತಿತರರು ಶಿಬಿರದ ನಾನಾ ಚಟುವಟಿಕೆಗಳಿಗೆ ನೇತೃತ್ವ ನೀಡಿದರು. ಮಂಜೇಶ್ವರ ಬಿ.ಪಿ.ಸಿ. ಪಿ. ರಾಜಗೋಪಾಲನ್ ಸ್ವಾಗತಿಸಿದರು. ವಿಶೇಷ ಶಿಕ್ಷಣ ಶಿಕ್ಷಕಿ ರೀಮಾ ಮೊಂತೆರಿಯೋ ವಂದಿಸಿದರು.

19ಎಂಜೆಉಪ್ಪಳ