ಶಾಲಾ ಸಂಸತ್ ಕಲಾಪ

Contributed byjohn.dsouza@timesofindia.com|Vijaya Karnataka
school parliament session new avenues of education
ಕುಂದಾಪುರ: ಶಾಲಾ ಸಂಸತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ಭಾಗವಾಗಿದೆ. ಇಂತಹ ಪಠ್ಯಪೂರಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ನಾವು ಬದುಕುತ್ತಿರುವ ಸಮಾಜವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಉಡುಪಿ ಜಿಲ್ಲಾ ಉಪ ಯೋಜನಾಸಮನ್ವಯಾಧಿಕಾರಿ ಎಚ್ .ಎಂ.ರಮೇಶ್ ಹೇಳಿದರು.

ಗುಜ್ಜಾಡಿ ಎಂ.ಭಾಸ್ಕರ ಪೈ ಸರಕಾರಿ ಪ್ರೌಢಶಾಲೆ ಶಾಲಾ ಸಂಸತ್ತಿನ ಕಲಾಪ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಾಯಕ ಯೋಜನಾ ಸಮನ್ವಯಾಧಿಕಾರಿ ಜ್ಯೋತಿ ಶುಭ ಹಾರೈಸಿದರು. ಶಾಲಾ ಸಂಸತ್ತಿನ ಸಭಾಧ್ಯಕ್ಷೆ ಭಾನುಪ್ರಿಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ನಾಯಕ ಸುಜನ್ ತಮ್ಮ ಸಚಿವ ಸಂಪುಟದ ಸಾಧನೆ ವಿವರಿಸಿದರು. ವಿರೋಧ ಪಕ್ಷದ ನಾಯಕಿ ಶಮಿತಾ ವಿದ್ಯಾರ್ಥಿ ಸರಕಾರದ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿದರು. ಸಮಾಜ ವಿಜ್ಞಾನ ಶಿಕ್ಷಕ ಅರ್ಚನಾ ಹೆಗ್ಡೆ ಮತ್ತು ವಸಂತಿ ಮಾರ್ಗದರ್ಶನ ನೀಡಿದರು. ರಂಗ ಶಿಕ್ಷಣ ಶಿಕ್ಷಕ ವಾಸುದೇವ ಗಂಗೇರ ನಿರ್ದೇಶನ ನೀಡಿದರು.
ಪೋಟೊ//21ಕೆ-ಜಿಯುಜೆ