ವಾಷಿಂಗ್ಟನ್ : ನಕಾರಾತ್ಮಕ ಸುದ್ದಿ ಪ್ರಸಾರ ಹಿನ್ನೆಲೆಯಲ್ಲಿಸಿಎನ್ ಎನ್ ಸೇರಿದಂತೆ ಮೂರು ಮಾಧ್ಯಮ ಸಂಸ್ಥೆಗಳಿಗೆ ಶ್ವೇತಭವನ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರವನ್ನು ಪ್ರಮುಖ ಸುದ್ದಿಸಂಸ್ಥೆಗಳು ಸ್ಥಗಿತಗೊಳಿಸಿವೆ.
ಉದ್ದೇಶಪೂರ್ವಕವಾಗಿ ನಕಾರಾತ್ಮಕ ವರದಿಗಳನ್ನು ನೀಡುತ್ತಿರುವ ಆರೋಪದ ಮೇಲೆ ಸಿಎನ್ ಎನ್ , ಎಂಎಸ್ ನೌ, ಪೊಲಿಟಿಕೊ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಮೇಲೆ ಶ್ವೇತಭವನ ಸೆ.18 ರಂದು ನಿಷೇಧ ಹೇರಿದೆ. ಸೆ.19 ರಂದು ಶ್ವೇತಭವನದ ಆವರಣಕ್ಕೆ ಆಗಮಿಸಿದ ಮೂರು ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಟ್ರಂಪ್ ಆಡಳಿತ ಕ್ರಮ ವಿರೋಧಿಸಿದ ನಂತರ ಎಬಿಸಿ, ಸಿಬಿಎಸ್ , ಸಿಎನ್ ಎನ್ , ಫಾಕ್ಸ್ ನ್ಯೂಸ್ , ಎನ್ ಬಿಸಿ ಒಳಗೊಂಡ ನೆಟ್ ವರ್ಕ್ ಜಂಟಿಯಾಗಿ ಅಮೆರಿಕ ಅಧ್ಯಕ್ಷರಿಗೆ ಸಂಬಂಧಿಸಿದ ಸುದ್ದಿಗಳ ಕವರೇಜ್ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿವೆ.
ಈ ನಡುವೆ ಅಧ್ಯಕ್ಷರ ಕುರಿತು ವರದಿ ಮಾಡದಂತೆ ಮಾಧ್ಯಮಗಳ ಮೇಲಿನ ನಿರ್ಬಂಧ ಕಾನೂನುಬಾಹಿರ, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳ ನಿಷೇಧವೆಂದು ವಾದಿಸಿರುವ ನಿರ್ಬಂಧಿತ ಮೂರು ಸುದ್ದಿ ಸಂಸ್ಥೆಗಳು, ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಘೋಷಿಸಿದೆ.
---------
ಷಣೆ ಮಾಡಿವೆ. ಕೋರ್ಟ್ ಅಂತಿಮ ಆದೇಶ ನೀಡುವ ತನಕ ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸುವಂತೆ ಅರ್ಜಿಯಲ್ಲಿಮನವಿ ಮಾಡಿವೆ.