ವಿದ್ಯಾರ್ಥಿ ಮೇಲೆ ಕಂಡಕ್ಟರ್ ಹಲ್ಲೆ

Contributed byshivumoktedar@gmail.com|Vijaya Karnataka
assault on student by conductor demand for inquiry
ವಿಕ ಸುದ್ದಿಲೋಕ ಔರಾದ್ ಬಸ್ ನಲ್ಲಿವಿದ್ಯಾರ್ಥಿಯೊಬ್ಬನಿಗೆ ನಿರ್ವಾಹಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕುತ್ತಿಗೆ ಹಿಡಿದು ಹೆದರಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿವೈರಲ್ ಆಗಿದ್ದು, ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಔರಾದ್ ನಿಂದ ಮುಗಳಖೋಡ ಕಡೆಗೆ ಸಂಚರಿಸುತ್ತಿದ್ದ ಬಸ್ ನಲ್ಲಿಬೀದರ್ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿ ಅಭಿಷೇಕ ಹಾಗೂ ನಿರ್ವಾಹಕ ಧೂಳಪ್ಪ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ನಿರ್ವಾಹಕನು ಕುತ್ತಿಗೆ ಹಿಡಿದು ಹೆದರಿಸಿ, ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ನಾನು ನನ್ನ ಸ್ನೇಹಿತನಿಗೆ ಬೈದಿದ್ದೆ. ಅದಕ್ಕೆ ನಿರ್ವಾಹಕ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೆದರಿಸಿದ್ದಾರೆ. ಬಸ್ ನ ಆಸನದಲ್ಲಿ4-5 ಜನ ಕುಳಿತುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಭಿಷೇಕ ತಿಳಿಸಿದ್ದಾರೆ. ನಿರ್ವಾಹಕರ ವರ್ತನೆಯಿಂದ ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಭಯಪಡುವಂತಾಗಿದೆ. ಈ ಹಿಂದೆ ಕೂಡ ಅವರ ವರ್ತನೆ ಕುರಿತು ಪ್ರಯಾಣಿಕರಿಂದ ಅನೇಕ ದೂರುಗಳು ಬಂದಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಮಾನತಿಗೆ ಆಗ್ರಹ ನಿರ್ವಾಹಕ ಧೂಳಪ್ಪ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿಸೆ.23ರಂದು ಬೆಳಗ್ಗೆ 7ಗಂಟೆಗೆ ಔರಾದ್ ಬಸ್ ನಿಲ್ದಾಣದ ಎದುರು ವಿದ್ಯಾರ್ಥಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರ ಹಾಗೂ ಕಾರ್ಯಕರ್ತ ಸುರೇಶ ಮರ್ತಳೆ ತಿಳಿಸಿದ್ದಾರೆ.