ರಸ್ತೆ ಕಾಮಗಾರಿಗಳಲ್ಲಿಪಾಲನೆಯಾಗದ ಮಾನದಂಡ ಬೊಕ್ಕಸಕ್ಕೆ ಕೋಟ್ಯಾಂತರ ಹೆಚ್ಚುವರಿ ಹೊರೆ, ಸಿಎಜಿ ವರದಿಯಲ್ಲಿಉಲ್ಲೇಖ

Contributed byKENCHE GOWDA|Vijaya Karnataka
report reveals 2407 crore additional burden due to lapses in road construction says cag report
ವಿಕ ಸುದ್ದಿಲೋಕ ಬೆಂಗಳೂರು

ರಸ್ತೆ ಕಾಮಗಾರಿಗಳ ಅಂದಾಜು ತಯಾರಿಕೆ ಹಾಗೂ ಅನುಷ್ಠಾನದಲ್ಲಿಭಾರತೀಯ ರಸ್ತೆ ಕಾಂಗ್ರೆಸ್ ಮಾನದಂಡ ಹಾಗೂ ನಿಯಮಗಳ ಪಾಲನೆ ಆಗದ ಕಾರಣ ಬೊಕ್ಕಸಕ್ಕೆ ಒಟ್ಟು 24.07 ಕೋಟಿ ರೂ. ಹೆಚ್ಚುವರಿ ಹೊರೆ ಸೇರಿ ನಾನಾ ಲೋಪಗಳು ಆಗಿವೆ ಎಂದು ಮಹಾಲೇಖಪಾಲರ (ಸಿಎಜಿಐ) ವರದಿ ಹೇಳಿದೆ.
2019-20 ರಿಂದ 2023-24ನೇ ಸಾಲಿನ ವರೆಗಿನ ಲೆಕ್ಕ ಪರಿಶೋಧನೆ ಒಳಗೊಂಡ ಸಿಎಜಿ ಅನುಸರಣಾ ಲೆಕ್ಕಪರಿಶೋಧನೆ -ಸಿವಿಲ್ ವರದಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿಸೋಮವಾರ ಮಂಡಿಸಿದರು.

ಕೆಐಎಡಿಬಿ ಲೋಪ: ಜಿಗಣಿಯಲ್ಲಿಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಕಂಪನಿಗೆ ಭೂಮಿ ಹಂಚಿಕೆ ಮಾಡುವ ಸಂದರ್ಭದಲ್ಲಿಕೆಐಎಡಿಬಿಯು ಒಟ್ಟು 31.90 ಕೋಟಿ ರೂ. ಅನಗತ್ಯ ಆರ್ಥಿಕ ಲಾಭ ಮಾಡಿಕೊಟ್ಟಿದೆ. ರಸ್ತೆಗೆ ಬಳಕೆ ಮಾಡಿದ ಭೂಮಿಗೆ ಸಂಬಂಧಿಸಿದ ಪರಿಹಾರ ಮತ್ತು ಸೇವಾ ಶುಲ್ಕವಾಗಿ ಪಾವತಿಸಬೇಕಿದ್ದ 27.07 ಕೋಟಿ ರೂ. ಮೊತ್ತವನ್ನು ಮನ್ನಾ ಮಾಡಿದೆ. ಸೇವಾ ಶುಲ್ಕವನ್ನು ಶೇ. 12ರಿಂದ ಶೇ. 6ಕ್ಕೆ ಇಳಿಸುವ ಮೂಲಕ ಹೆಚ್ಚುವರಿಯಾಗಿ 4.83 ಕೋಟಿ ರೂ. ಲಾಭವನ್ನು ಕಂಪನಿಗೆ ಮಾಡಿಕೊಡಲಾಗಿದೆ ಎಂದು ವರದಿ ಹೇಳಿದೆ.

ಕಂಪನಿಯು ಜಿಗಣಿ ಮತ್ತು ಬುಕ್ಕಸಾಗರ ಗ್ರಾಮಗಳಲ್ಲಿನ ತನ್ನ ಘಟಕಕ್ಕೆ ಹೊಂದಿಕೊಂಡಿರುವ 11.3 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಹಂಚಿಕೆ ಮಾಡಲು 2019ರ ಫೆಬ್ರುವರಿಯಲ್ಲಿಕೆಐಎಡಿಬಿಗೆ ಕೋರಿಕೆ ಸಲ್ಲಿಸಿತ್ತು. ಗ್ಯಾಸೋಲಿನ್ ಇಂಜಿನ್ ಗಳನ್ನು ತಯಾರಿಸುವ ಉದ್ದೇಶವನ್ನು ತಿಳಿಸಿ, ಭೂಸ್ವಾಧೀನಕ್ಕಾಗಿ ಕಂಪನಿಯು ಕೆಐಎಡಿಬಿಗೆ 22.92 ಕೋಟಿ ಪಾವತಿಸಿತು. ಮಾರ್ಚ್ 2020ರಲ್ಲಿಈ ಭೂಮಿಯನ್ನು ‘ಏಕ ಘಟಕ ಸಂಕೀರ್ಣ’ ಆಗಿ ಬಳಸಲು 15 ವರ್ಷಗಳ ಅವಧಿಗೆ ‘ಗುತ್ತಿಗೆ-ಕಂ-ಮಾರಾಟ’ ಆಧಾರದಲ್ಲಿಕಂಪನಿಗೆ ಹಂಚಿಕೆ ಮಾಡಲಾಗಿತ್ತು.

ಬಳಿಕ ವಾಣಿಜ್ಯಿಕವಾಗಿ ಲಾಭದಾಯಕವಲ್ಲಎಂಬ ಕಾರಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿಹೊಸ ಕಟ್ಟಡ ನಿರ್ಮಿಸುವ ಬದಲಿಗೆ ತನ್ನ ಅಸ್ತಿತ್ವದಲ್ಲಿರುವ ಆವರಣದಲ್ಲೇ ಪ್ರಸ್ತಾವಿತ ಯೋಜನೆಯನ್ನು ಕೈಗೊಳ್ಳಲು ಕಂಪನಿ ನಿರ್ಧರಿಸಿತು. ಪರಿಹಾರದ ಮೊತ್ತವನ್ನು ಈಗಾಗಲೇ ಹೆಚ್ಚಿನ ದರದಲ್ಲಿನಿಗದಿಪಡಿಸಿರುವುದರಿಂದ, ರಸ್ತೆಯ ವೆಚ್ಚವನ್ನು ಶೂನ್ಯವೆಂದು ಪರಿಗಣಿಸುವಂತೆ ಅದು ಸರಕಾರವನ್ನು ಕೋರಿತ್ತು. ಸರಕಾರವು ಫೆಬ್ರವರಿ 2021ರಲ್ಲಿಕಂಪನಿಗೆ ತನ್ನ ಅಸ್ತಿತ್ವದಲ್ಲಿರುವ ಕಟ್ಟಡದಲ್ಲಿಯೋಜನೆಯನ್ನು ಅನುಷ್ಠಾನಗೊಳಿಸಲು ಮತ್ತು ಹೊಸದಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಹಸಿರು ವಲಯದ ಅಗತ್ಯ ಹಾಗೂ ಭವಿಷ್ಯದ ವಿಸ್ತರಣೆಗಾಗಿ ಬಳಸಲು ಅನುಮತಿ ನೀಡಿತ್ತು.