ಇಲ್ಲಿನ ಪ್ರಸಿದ್ಧ ಮುರುಡೇಶ್ವರ ಓಲಗಮಂಟಪ 50ನೇ ವರ್ಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಗುರುವಾರ ತಡರಾತ್ರಿ ಗಣಪತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
ಗುರುವಾರ ಸಂಜೆ ಓಲಗಮಂಟಪದಿಂದ ಹೊರಟ ವಿಸರ್ಜನಾ ಮೆರವಣಿಗೆ ಕನ್ನಡ ಶಾಲೆ ಹಾಗೂ ಮುರುಡೇಶ್ವರ ದೇವಸ್ಥಾನದವರೆಗೆ ಎರಡೂ ದಿಕ್ಕುಗಳಲ್ಲಿಸಂಚರಿಸಿ ಹಿಂದಿರುಗಿತು. ರಸ್ತೆಯುದ್ದಕ್ಕೂ ಸಾವಿರಾರು ಜನರು ಇಕ್ಕೆಲಗಳಲ್ಲಿನಿಂತು ಗಣೇಶ ಮೆರವಣಿಗೆ ಕಣ್ತುಂಬಿಸಿಕೊಂಡರು. ವಿಷ್ಣುವಿನ ಅವತಾರ, ಶಿವನ ರುದ್ರ ತಾಂಡವ, ಸಂಜೀವಿನಿ ಪರ್ವತದೊಂದಿಗೆ ಜಿಗಿದ ಆಂಜನೇಯ, ಗೊಂಬೆ, ಯಕ್ಷಗಾನ ವೇಷಭೂಷಣ ಸ್ತಬ್ಧಚಿತ್ರಗಳು ಮೆರವಣಿಗೆಯುದ್ದಕ್ಕೂ ಗಮನ ಸೆಳೆದವು. ಪ್ರಸಾದ, ಲಡ್ಡು, ತರಕಾರಿ, ಇತರೇ ಸಿಹಿ ತಿನಿಸು, ಮತ್ತಿತರ ವಸ್ತುಗಳ ಹರಾಜು ಪ್ರಕ್ರಿಯೆ ಮುಗಿದ ನಂತರ ವಿಧ್ಯುಕ್ತವಾಗಿ ವಿಸರ್ಜನೆ ಕಾರ್ಯ ನೆರವೇರಿಸಲಾಯಿತು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಂಕರ ಭಟ್ರಹಿತ್ಲು, ನಾಗರಾಜ ಶೆಟ್ಟಿ, ಎಸ್ .ಎಸ್ .ಕಾಮತ್ , ಕೃಷ್ಣ ನಾಯ್ಕ, ಸಂತೋಷ ನಾಯ್ಕ, ಈಶ್ವರ ದೊಡ್ಮನೆ ಮೊದಲಾದವರು ವಿಸರ್ಜನಾ ಮೆರವಣಿಗೆಯಲ್ಲಿಭಾಗವಹಿಸಿದ್ದರು. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಎಮ್ .ಎನ್ ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಮಾರ್ಗದರ್ಶನ, ಎಎಸ್ ಪಿ ರಾನು ಗುಪ್ತ ನೇತೃತ್ವದಲ್ಲಿವಿಶೇಷ ಪೊಲೀಸ್ ಬಂದೋಬಸ್ ್ತ ಏರ್ಪಡಿಸಲಾಗಿತ್ತು.
25ಬಿಕೆಎಲ್ 1
ಮುರುಡೇಶ್ವರ ಓಲಗ ಮಂಟಪ ಶ್ರೀ ಗಣೇಶ ವಿಸರ್ಜನೆ ಗುರುವಾರ ರಾತ್ರಿ ನಡೆಯಿತು.