ವಿಕ ಸುದ್ದಿಲೋಕ ಕಂಪ್ಲಿ‘‘ ಕರ್ನಾಟಕ ರಾಜ್ಯ (6-8ನೇ ತರಗತಿ) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕು ಘಟಕದ 2026-31 ನೇ ಸಾಲಿಗೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ,’’ ಎಂದು ಚುನಾವಣಾಧಿಕಾರಿ ಹಾಗೂ ನಿವೃತ್ತ ಶಿಕ್ಷಕ ಜಿ.ವೀರೇಶ್ ತಿಳಿಸಿದರು.
ಚುನಾವಣಾಧಿಕಾರಿ ಮಾತನಾಡಿ, ‘‘8 ಪುರುಷರು, 4 ಮಹಿಳೆಯರು ಸೇರಿ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಒಬ್ಬರನ್ನು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸಿಲ್ಲ. ಆದ್ದರಿಂದ ನಿರ್ದೇಶಕರಾಗಿ ಮಂಜುನಾಥ, ಎ.ಉಮೇಶ, ಗಾದಿನಿಂಗಪ್ಪ, ಜಿ.ಪಂಪನಗೌಡ, ಸಿ.ಬಸವರಾಜ, ವೈ.ಪಾಂಡುರಂಗ, ವಾಲ್ಮೀಕಿ ಆಂಜನೇಯ, ಎನ್ .ಶಿವಕುಮಾರ್ , ಕೆ.ಸುನಿತಾಕುಮಾರಿ, ಜ್ಯೋತಿ ಇಟಗಿ, ಸಿ.ಜಿ.ರಾಜೇಶ್ವರಿ, ಕರೇಕನ್ನಪಳಿ ರೇಖಾ ಅವಿರೋಧ ಆಯ್ಕೆಯಾಗಿದ್ದಾರೆ. ಸೆ.28 ರಂದು ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಆಯ್ಕೆಗೆ ಚುನಾವಣೆ ನಡೆಯಲಿದೆ,’’ ಎಂದರು.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ .ದೊಡ್ಡಬಸಪ್ಪ ಇತರರು ಗೌರವಿಸಿದರು.
* ಪೊ.ಶೀ.24ಕೆಎಂಪಿ1;-
ಕಂಪ್ಲಿಯಲ್ಲಿಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ತಾಲೂಕು ಘಟಕಕ್ಕೆ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು.