ಉದ್ಯೋಗದ ಜತೆಗೆ ಶಿಕ್ಷಣ ಪಡೆಯಿರಿವಿಕ ಸುದ್ದಿಲೋಕ ಬಳ್ಳಾರಿ
‘‘ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡುವುದು ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಸಂಕಲ್ಪವಾಗಿದೆ,’’ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿಮಾತನಾಡಿ,‘‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯಲ್ಲಿ38 ಕಲಿಕಾ ಸಹಾಯ ಕೇಂದ್ರಗಳಿದ್ದು, ಪ್ರತಿ ತಾಲೂಕಿನಲ್ಲಿ70 ಪರೀಕ್ಷಾ ಕೇಂದ್ರಗಳಿವೆ. ಬಳ್ಳಾರಿ ಕಲಿಕಾ ಕೇಂದ್ರದಲ್ಲಿಈಗಾಗಲೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಾನಾ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅವಕಾಶವಿದೆ. ನಮ್ಮ ವಿಶ್ವ ವಿದ್ಯಾಲಯ ಎನ್ ಅರ್ ಎಪ್ ನಲ್ಲಿಇಡೀ ದೇಶದಲ್ಲಿ2ನೇ ಸ್ಥಾನದಲ್ಲಿದ್ದೇವೆ,’’ ಎಂದು ತಿಳಿಸಿದರು.
‘‘ಬೇರೆ ರಾಜ್ಯದಲ್ಲಿಕೆಲಸ ಮಾಡುತ್ತಾ ಉನ್ನತ ಪದವಿ ಪಡೆಯುವ ಆಸಕ್ತರಿಗೆ 10 ಆನ್ ಲೈನ್ ಕೋರ್ಸ್ ಗಳನ್ನು ನೀಡುತ್ತೇವೆ. ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಡಿ ಉಚಿತ ಯುಜಿ,ಪಿಜಿ ಶಿಕ್ಷಣ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಜತೆಗೆ ತೃತೀಯ ಲಿಂಗಿಗಳಿಗೆ ಹಾಗೂ ಕೋವಿಡ್ ನಲ್ಲಿಪೋಷಕರನ್ನು ಕಳೆದುಕೊಂಡ ಮಕ್ಕಳಿಗೂ ವಿಶ್ವವಿದ್ಯಾಲಯದಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಮಾಜಿ ಸೈನಿಕ, ಆಟೊ ಕ್ಯಾಬ್ ಚಾಲಕರ ಮಕ್ಕಳಿಗೂ ಶೇ.10 ರಷ್ಟು ರಿಯಾಯಿತಿಯಲ್ಲಿಶಿಕ್ಷಣ ಕೊಡಲಾಗುವುದು,’’ ಎಂದು ವಿವರಿಸಿದರು.
ವಿವಿಯ ಸಿಬ್ಬಂದಿ ಡಾ.ಎನ್ .ಆನಂದ್ ಗೌಡ, ಡಿ.ಎಸ್ .ಮೈತ್ರಿ, ಅರುಣ್ , ಎಚ್ .ಸುರೇಶ್ ಸೇರಿದಂತೆ ಇತರರಿದ್ದರು