ಕಾಟಚಾರಕ್ಕೆ ಗುಂಡಿ ಮುಚ್ಚುವ ಪಿಡಬ್ಲೂಡಿ ಇಲಾಖೆ | ವಾಹನ ಸವಾರರ ಪರದಾಟ | ಹೆಚ್ಚುತ್ತಿರುವ ಬೈಕ್ ಅಪಘಾತಗಳು(ಕಿಕ್ಕರ್ )
ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆಗಳು!----
ಕೆ.ಎಂ.ಶಿವಸ್ವಾಮಿ ನಾಯಕನಹಟ್ಟಿ
ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ
ಬರವಿದ್ದರೂ ರಾಜ್ಯ ಹೆದ್ದಾರಿ ರಸ್ತೆಗಳು ದೊಡ್ಡ ಪ್ರಮಾಣದಲ್ಲಿಹದಗೆಟ್ಟಿದ್ದು, ಚಾಲಕರು ವಾಹನ ಚಾಲನೆಗೆ ಪರದಾಡುವಂತಾಗಿದೆ.
ರಾಜ್ಯ ಹೆದ್ದಾರಿ 45 ಪಟ್ಟಣದ ಮೂಲಕ ಹಾದು ಹೋಗುತ್ತದೆ. ನಾಯಕನಹಟ್ಟಿ ಪಟ್ಟಣ, ಮನುಮೈನಹಟ್ಟಿ, ಚನ್ನಬಸಯ್ಯನಹಟ್ಟಿ, ಭೀಮಗೊಂಡನಹಳ್ಳಿ ಸೇರಿದಂತೆ ರಾಜ್ಯ ಹೆದ್ದಾರಿ ಹಾದು ಹೋಗುವ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಕಳೆದ ನಾಲ್ಕು ವರ್ಷಗಳಿಂದ ಡಾಂಬರೀಕರಣ ನಡೆದಿಲ್ಲ. ಇದಕ್ಕೆ ಬದಲಾಗಿ ಕೇವಲ ಗುಂಡಿಮುಚ್ಚುವ ಕಾರ್ಯವನ್ನು ಮಾತ್ರ ಪಿಡಬ್ಲೂಡಿ ಮಾಡುತ್ತಿದೆ. ಕಾಟಾಚಾರಕ್ಕೆ ಎಂಬಂತೆ ಗುಂಡಿ ಮುಚ್ಚಲಾಗುತ್ತದೆ. ದೊಡ್ಡ ಗುಂಡಿಗಳನ್ನು ಮುಚ್ಚಿದ ಸ್ಪಲ್ಪದಿನಗಳಲ್ಲಿಸಣ್ಣ ಪ್ರಮಾಣದ ಗುಂಡಿಗಳು ದೊಡ್ಡದಾಗಿರುತ್ತವೆ.
ವಾಹನದಟ್ಟಣೆ ಹೆಚ್ಚು:
ರಾಜ್ಯ ಹೆದ್ದಾರಿ ರಸ್ತೆ 150ಎ ರಾಷ್ಟ್ರೀಯ ಹೆದ್ದಾರಿಗಳಾದ 50 ಹಾಗೂ 150ಎ ನ್ನು ಸಂಪರ್ಕಿಸುತ್ತದೆ. ದೊಣ್ಣೆಹಳ್ಳಿ-ಚಿತ್ರದುರ್ಗ-ಹಿರಿಯೂರು ಮಾರ್ಗಕ್ಕೆ ಬದಲಾಗಿ ಲಾರಿಗಳು ಮತ್ತು ಬಸ್ ಗಳು ದೊಣ್ಣೆಹಳ್ಳಿ-ನಾಯಕನಹಟ್ಟಿ-ಚಳ್ಳಕೆರೆ-ಹಿರಿಯೂರು ಮಾರ್ಗದಲ್ಲಿಚಲಿಸುತ್ತವೆ. ಇದರಿಂದ 5 ರಿಂದ 8 ಕಿ.ಮೀ ದೂರ ಮತ್ತು ಸಮಯ ಕಡಿಮೆಯಾಗುತ್ತದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 50 ಸಂಚರಿಸುವ ಹೆಚ್ಚಿನ ಸಂಖ್ಯೆಯ ಭಾರೀ ವಾಹನಗಳು ಈ ಸಮೀಪದ ದಾರಿಯಲ್ಲಿಸಂಚರಿಸುತ್ತವೆ. ಹೀಗಾಗಿ ಹೆಚ್ಚಿನ ವಾಹನದಟ್ಟಣೆಯಿಂದ ರಸ್ತೆ ದೊಡ್ಡ ಪ್ರಮಾಣದಲ್ಲಿಹಾಳಾಗುತ್ತಿದೆ.
ಪಪಂ ವ್ಯಾಪ್ತಿ ರಸ್ತೆಯಲ್ಲಿಗುಂಡಿಗಳು:
ಜಗಳೂರು ಮತ್ತು ಚಳ್ಳಕೆರೆ ಮೂಲಕ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ ಗುಂಡಿ ಬಿದ್ದ ರಸ್ತೆಗಳು ವಾಹನ ಸವಾರರನ್ನು ಸ್ವಾಗತಿಸುತ್ತವೆ. ಚಿಕ್ಕಕೆರೆ ಬಸ್ ನಿಲ್ದಾಣ, ಒಳಮಠದ ಮುಂಭಾಗ, ದೇವಾಲಯದ ಮುಂಭಾಗದ ರಸ್ತೆ, ಮನುಮೈನಹಟ್ಟಿ ಸೇರಿದಂತೆ ನಾನಾ ಕಡೆಗಳಲ್ಲಿರಸ್ತೆ ಹಾಳಾಗಿದೆ. ಬಿದ್ದಿರುವ ಸಣ್ಣ ಪ್ರಮಾಣದ ಮಳೆಗೆ ದೊಡ್ಡ ಗುಂಡಿಗಳು ಉಂಟಾಗಿವೆ.
ಗುಂಡಿಗಳಿಂದ ಬೈಕ್ ಅಪಘಾತಗಳು ಹೆಚ್ಚುತ್ತಿವೆ. ರಸ್ತೆಗಳಲ್ಲಿಗುಂಡಿಗಳನ್ನು ತಪ್ಪಿಸುವುದಕ್ಕೆ ಹೋಗುವ ಬೈಕ್ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಪ್ರಹ್ಲಾದ್ ಡಾಬಾದ ಮುಂಭಾಗದಲ್ಲಿಕಳೆದ ವಾರ ಎರಡು ಬೈಕ್ ಗಳು ಮುಖಾಮುಖಿ ಅಪಘಾತವಾಗಿ ಒಬ್ಬರು ಕಾಲು ಮುರಿದುಕೊಂಡಿದ್ದಾರೆ. ಗುಂಡಿಬಿದ್ದಿರುವ ರಸ್ತೆಗಳನ್ನು ತಕ್ಷಣ ಮುಚ್ಚಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
====
ಕೋಟ್ / /
ಏಕಾಂತೇಶ್ವರ ದೇವಾಲಯದ ಕ್ರಾಸ್ ನಿಂದ ಪಟ್ಟಣದ ವ್ಯಾಪ್ತಿಯಲ್ಲಿರಸ್ತೆ ಹಾಳಾಗಿದೆ. ಒಂದು ಕಿ.ಮೀ. ದೂರ ಸಂಚರಿಸಲು ಐದು ನಿಮಿಷ ಬೇಕಾಗಿದೆ. ಬೈಕ್ ಸಂಚಾರರು ಗುಂಡಿ ತಪ್ಪಿಸಲು ಸರ್ಕಸ್ ಮಾಡಬೇಕಾಗಿದೆ. ಗುಂಡಿ ಮುಚ್ಚುವುದರ ಜತೆಗೆ ಪಪಂ ವ್ಯಾಪ್ತಿಯಲ್ಲಿಪೂರ್ಣ ಪ್ರಮಾಣದ ಡಾಂಬರೀಕರಣ ಮಾಡಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
-ಬಿ.ಟಿ.ರವಿಕುಮಾರ್ , ನಾಯಕನಹಟ್ಟಿ
----
ಎಸ್ ಎಚ್ ಡಿಪಿ ಯೋಜನೆಯಲ್ಲಿಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಮನುಮೈನಹಟ್ಟಿ ಸರ್ಕಲ್ ವರೆಗೆ ಏಳು ಮೀಟರ್ ದ್ವಿಪಥ ರಸ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಸರಕಾರದ ಮಟ್ಟದಲ್ಲಿರಿಂಗ್ ರೋಡ್ ಚಿಂತನೆಯಿದೆ. ಶೀಘ್ರದಲ್ಲಿಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
-ಹಕೀಮ್ , ಎಇಇ, ಪಿಡಬ್ಲೂಡಿ. ಚಳ್ಳಕೆರೆ
----
ಫೋಟೋ: 24 ಎನ್ ಕೆ ಹೆಚ್ 2, 2 ಎ
ನಾಯಕನಹಟ್ಟಿಯಲ್ಲಿಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆ 150ಎ ನಲ್ಲಿರುವ ಗುಂಡಿಗಳು.