ಬೆಂಗಳೂರಿಗರ ಕನಸು ದೊಡ್ಡ ಮನೆ

Contributed by: babitha.salian@timesgroup.com|Vijaya Karnataka•
bengaluru residents dream trends in buying larger homes
ರಿಯಾಲ್ಟಿ ಟ್ರೆಂಡ್ (ಸ್ಲಗ್ ) 429

ಬೆಂಗಳೂರಿಗರ ಕನಸು ದೊಡ್ಡ ಮನೆ
ಇಂಟ್ರೊ

ಬಾಡಿಗೆ ಮನೆಯಲ್ಲಿವಾಸಿಸುವವರಿಗೆ ಸ್ವಂತ ಮನೆಯ ಕನಸು. 1ಬಿಎಚ್ ಕೆ ಮನೆಯಲ್ಲಿಇರುವವರಿಗೆ 2ಬಿಎಚ್ ಕೆ...ಹೀಗೆ ಮನೆ ಇನ್ನೂ ದೊಡ್ಡದಾಗಬೇಕು ಎನ್ನುವ ಕನಸು ಎಲ್ಲರದ್ದು. ಈ ಕಾರಣ ಸದ್ಯಕ್ಕೆ ಆಸ್ತಿ ಬೆಲೆಗಳು ಏರಿಕೆಯಾಗುತ್ತಿದ್ದರೂ ಭಾರತದಲ್ಲಿಮನೆ ಖರೀದಿದಾರರು ದೊಡ್ಡ ಮನೆಗಳತ್ತ ಒಲವು ತೋರುತ್ತಿದ್ದಾರೆ. ಅದರಲ್ಲೂಬೆಂಗಳೂರಿನಲ್ಲಿವಾಸಿಸುವವರಿಗೆ ದೊಡ್ಡ ಮನೆಯ ಕನಸು ಉಳಿದ ನಗರಗಳಿಗಿಂತ ತುಸು ಹೆಚ್ಚೇ ಎಂದು ಸಮೀಕ್ಷೆಯೊಂದು ಹೇಳಿದೆ.

ಉಮಾ ಜಿ.

ಈಗ ದೊಡ್ಡ ಮನೆ, ಹೆಚ್ಚಿನ ಬಜೆಟ್ ಮತ್ತು ಹೊಸದಾಗಿ ಪ್ರಾರಂಭಿಸಲಾದ ಪ್ರಾಜೆಕ್ಟ್ಗಳ ಕಡೆಗೆ ಖರೀದಿದಾರರ ಆದ್ಯತೆಗಳು ಬದಲಾಗುತ್ತಿವೆ. ಮನೆ ಖರೀದಿದಾರರು ವಸತಿ ಮಾರುಕಟ್ಟೆಯಿಂದ ದೂರ ಸರಿಯುವ ಬದಲು ಹೆಚ್ಚಿದ ಬೆಲೆಗಳಿಗೆ ಹೊಂದಿಕೊಳ್ಳುತ್ತಿರುವುದು ಈಗಿನ ಟ್ರೆಂಡ್ . ಸಂಸ್ಥೆಯೊಂದು ನಡೆಸಿದ ಗ್ರಾಹಕ ಅಭಿಪ್ರಾಯ ಸಮೀಕ್ಷೆಯ ಪ್ರಕಾರ, 14 ನಗರಗಳಿಂದ 8,320 ಮಂದಿ ಪ್ರತಿಕ್ರಿಯಿಸಿದವರಲ್ಲಿಶೇ. 60 ಜನರು ಕಳೆದ ಜನವರಿಯಿಂದ ಜೂನ್ ವರೆಗೆ ರಿಯಲ್ ಎಸ್ಟೇಟ್ ಗೆ ಹೂಡಿಕೆಯ ಆಸ್ತಿಯಾಗಿ ಆದ್ಯತೆ ನೀಡಿದ್ದಾರೆ. ಷೇರು ಮಾರುಕಟ್ಟೆಯನ್ನು ಶೇ. 20, ಚಿನ್ನವನ್ನು ಶೇ. 11 ಮತ್ತು ಫಿಕ್ಸ್ ಡ್ ಡೆಪಾಸಿಟ್ ಗಳನ್ನು ಶೇ. 9ರಷ್ಟು ಜನರು ಆಯ್ಕೆ ಮಾಡಿದ್ದಾರೆ ಎಂದು ಈ ಸಮೀಕ್ಷೆಯ ವರದಿ ಹೇಳಿದೆ.

ದೊಡ್ಡ ಮನೆಗಳಿಗೆ ಆದ್ಯತೆ

ಈ ಸಮೀಕ್ಷೆಯಲ್ಲಿಭಾಗವಹಿಸಿದವರಲ್ಲಿಶೇ. 48 ಜನರು 3ಬಿಎಚ್ ಕೆ ಮನೆಗಳಿಗೆ ಆದ್ಯತೆ ನೀಡಿದರೆ, ಶೇ. 38 ಮಂದಿ 2ಬಿಎಚ್ ಕೆ ಮನೆಗಳನ್ನು ಆಯ್ಕೆ ಮಾಡಿದ್ದಾರೆ. 4ಬಿಎಚ್ ಕೆ ಮತ್ತು ಅದಕ್ಕಿಂತ ದೊಡ್ಡ ಮನೆಗಳಿಗೆ ಆದ್ಯತೆ ನೀಡಿದವರು ಶೇ. 5 ಶ್ರೀಮಂತ ಮಂದಿ ಮಾತ್ರ. ಅಹಮದಾಬಾದ್ , ಹೈದರಾಬಾದ್ , ಚೆನ್ನೈ, ದಿಲ್ಲಿಮತ್ತು ಸುತ್ತಲಿನ ಪ್ರದೇಶಗಳಲ್ಲಿ3ಬಿಎಚ್ ಕೆ ಮನೆಗಳ ಆದ್ಯತೆಯು ಶೇ. 50 ದಾಟಿದೆ. ಆದರೆ ಬೆಂಗಳೂರು ಶೇ. 19ರೊಂದಿಗೆ 4ಬಿಎಚ್ ಕೆಗೂ ಹೆಚ್ಚಿನ ಮನೆಗಳಿಗೆ ಅತ್ಯಧಿಕ ಆದ್ಯತೆ ದಾಖಲಿಸಿದೆ ಎಂದು ಸಮೀಕ್ಷೆ ಹೇಳಿದೆ. ದೊಡ್ಡ ಮನೆಗಳತ್ತ ಕಂಡು ಬರುತ್ತಿರುವ ಈ ಒಲವು ಖರೀದಿದಾರರ ಬಜೆಟ್ ಗಳಲ್ಲೂಪ್ರತಿಫಲಿಸುತ್ತದೆ. 90 ಲಕ್ಷ ರೂ.ಗಳಿಂದ 1.5 ಕೋಟಿ ರೂ.ಗಳವರೆಗಿನ ದರವು ಅತ್ಯಂತ ಆದ್ಯತೆಯ ಬಜೆಟ್ ವರ್ಗವಾಗಿದ್ದು, ಶೇ. 34 ಜನರು ಇದನ್ನು ಆಯ್ಕೆ ಮಾಡಿದ್ದಾರೆ. ಅದೇ ಸಮಯದಲ್ಲಿ45 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಮನೆಗಳಿಗೆ ಆದ್ಯತೆ ನೀಡುವ ಖರೀದಿದಾರರ ಪಾಲು 2022ರಲ್ಲಿಶೇ. 28ರಿಂದ ಶೇ. 18ಕ್ಕೆ ಕುಸಿದಿದೆ.

ಗ್ರಾಹಕರ ಕಳವಳ

ಆಸ್ತಿಗೆ ನಿರಂತರ ಬೇಡಿಕೆಯ ಹೊರತಾಗಿಯೂ ದುಬಾರಿ ಬೆಲೆಯು ಒಂದು ಪ್ರಮುಖ ಸವಾಲಾಗಿದೆ. ಸಮೀಕ್ಷೆಯಲ್ಲಿಭಾಗವಹಿಸಿದವರಲ್ಲಿಶೇ. 65 ಜನರು ವಸತಿ ಬೆಲೆಗಳ ಏರಿಕೆಯ ಬಗ್ಗೆ ಸ್ವಲ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಇದರಲ್ಲಿಶೇ. 35 ಜನರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಶೇ. 44 ಮಂದಿ ತಾವು ಯೋಜಿಸಿದಂತೆ ಖರೀದಿಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. ಶೇ. 38 ಜನರು ತಮ್ಮ ನಿರ್ಧಾರವನ್ನು ಸ್ವಲ್ಪಮಟ್ಟಿಗೆ ವಿಳಂಬಗೊಳಿಸುವುದಾಗಿ ಹೇಳಿದ್ದಾರೆ. ಕೇವಲ ಶೇ. 18 ಜನರು ಮಾತ್ರ ನಿರ್ದಿಷ್ಟವಾಗಿ ಮುಂದೂಡಬಹುದು ಅಥವಾ ತಮ್ಮ ಖರೀದಿಯನ್ನು ರದ್ದುಗೊಳಿಸಬಹುದು ಎಂದು ತಿಳಿಸಿದ್ದಾರೆ. ಖರೀದಿ ವಿಳಂಬಗೊಳಿಸಲು ಅಥವಾ ರದ್ದುಗೊಳಿಸಲು ಆಲೋಚಿಸುತ್ತಿರುವವರಲ್ಲಿಕೈಗೆಟುಕದ ಬೆಲೆಯೇ ಅತಿ ದೊಡ್ಡ ಕಳವಳವಾಗಿದೆ. ಶೇ. 44 ಜನರು ಇದನ್ನು ಒಪ್ಪಿದ್ದಾರೆ.

ಸ್ವಂತ ಬಳಕೆಗೆ ಆದ್ಯತೆ

ಹೊಸ ವಸತಿ ಪ್ರಾಜೆಕ್ಟ್ಗಳತ್ತ ಆಕರ್ಷಿತರಾಗುತ್ತಿರುವ ಖರೀದಿದಾರರು ತಕ್ಷಣವೇ ವಾಸಿಸಲು ಸಿದ್ಧವಾಗಿರುವ ಮನೆಗಳಿಗಿಂತ ಹೊಸದಾಗಿ ಪ್ರಾರಂಭಿಸಲಾದ ಪ್ರಾಜೆಕ್ಟ್ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಶೇ. 34 ಜನರು ಹೊಸ ಪ್ರಾಜೆಕ್ಟ್ಗಳಿಗೆ ಆದ್ಯತೆ ನೀಡಿದ್ದು, ಶೇ. 18 ಜನರು ತಕ್ಷಣವೇ ವಾಸಿಸಲು ಸಿದ್ಧವಾಗಿರುವ ಆಸ್ತಿಗಳನ್ನು ಆಯ್ಕೆ ಮಾಡಿದ್ದಾರೆ. ಡೆವಲಪರ್ ಗಳ ಹೆಸರು, ಖ್ಯಾತಿ ಮತ್ತು ಪ್ರಾಜೆಕ್ಟ್ನ ಸ್ಥಳವನ್ನು ಶೇ. 34 ಜನರು ಪ್ರಮುಖ ಅಂಶಗಳಾಗಿ ಉಲ್ಲೇಖಿಸಿದ್ದಾರೆ. ಆದರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಶೇ. 22 ಜನರು ಪ್ರಮುಖ ಅಂಶವೆಂದು ಅಭಿಪ್ರಾಯಪಟ್ಟಿದ್ದಾರೆ. ಸ್ವಂತ ಬಳಕೆಯೇ ಮನೆ ಖರೀದಿಸಲು ಮುಖ್ಯ ಕಾರಣವಾಗಿದ್ದು, ಶೇ. 68 ಜನರು ಸ್ವಂತ ಬಳಕೆಗಾಗಿ ಮನೆ ಖರೀದಿಸುತ್ತಿದ್ದಾರೆ.

ಬಾಕ್ಸ್

ಆದಾಯ ಸಾಮರ್ಥ್ಯ

ಖರೀದಿದಾರರು ತಮ್ಮ ಮನೆಗಳ ಹೂಡಿಕೆಯ ಸಾಮರ್ಥ್ಯವನ್ನೂ ಪರಿಗಣಿಸುತ್ತಿದ್ದಾರೆ. ಶೇ. 67 ಜನರು ಮರುಮಾರಾಟ ಮೌಲ್ಯವನ್ನು ಪ್ರಮುಖ ಅಥವಾ ಅತ್ಯಂತ ಪ್ರಮುಖ ಎಂದು ಪರಿಗಣಿಸಿದರೆ, ಶೇ. 77 ಜನರು ಬಾಡಿಗೆ ಆದಾಯದ ಸಾಮರ್ಥ್ಯವನ್ನು ಪ್ರಮುಖ ಅಥವಾ ಅತ್ಯಂತ ಪ್ರಮುಖ ಎಂದು ಪರಿಗಣಿಸಿದ್ದಾರೆ ಎಂದು ವರದಿ ಹೇಳಿದೆ. ದೇಶದ ಪ್ರಮುಖ ಏಳು ನಗರಗಳಲ್ಲಿಸರಾಸರಿ ವಸತಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ. 7ರಷ್ಟು ಏರಿಕೆಯಾಗಿವೆ. ಈ ತ್ರೈಮಾಸಿಕದಲ್ಲಿಹೊಸದಾಗಿ ಪ್ರಾರಂಭಿಸಲಾದ ಪ್ರಾಜೆಕ್ಟ್ಗಳಲ್ಲಿ1.5 ಕೋಟಿ ರೂ.ಗಿಂತ ಹೆಚ್ಚಿನ ಬೆಲೆಯ ಮನೆಗಳು ಶೇ. 53ರಷ್ಟಿವೆ ಎಂಬುದು ಗಮನಿಸಬೇಕಾದ ಅಂಶ.