ಮೇಷ : ಸರಕಾರಿ ಕೆಲಸದಲ್ಲಿಬಡ್ತಿ ದೊರೆತು ವರ್ಗಾವಣೆಯಾಗುವ ಸುದ್ದಿ ಖಚಿತವಾಗುವುದು. ಯಂತ್ರಗಳನ್ನು ಬಳಸುವಾಗ ತೊಂದರೆಯಾಗಬಹುದು. ತೈಲ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಿತ್ತಳೆ)
--------------
ವೃಷಭ : ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿಸುಲಭವಾಗಿ ಅಧಿಕ ಸಂಭಾವನೆಯ ಅಧ್ಯಾಪಕ ವೃತ್ತಿ ದೊರೆಯುವ ಸಂಭವವಿದೆ. ಧನ ಹೂಡಿಕೆಯ ಯೋಜನೆ ಸರಿಯಾದ ಮಾರ್ಗದಲ್ಲಿಇರುವುದರಿಂದ ನಾನಾ ರೀತಿಯ ಲಾಭ ಸಿಗುವುದು.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಗುಲಾಬಿ)
-----------
ಮಿಥುನ : ಬದುಕನ್ನು ಹೆಚ್ಚು ಅರ್ಥಪೂರ್ಣವಾಗಿರುವುದು ಹೇಗೆಂಬುದು ಅನುಭವದಿಂದ ನಿಮಗೆ ತಿಳಿಯುವುದು. ರಾಜಕೀಯ ವರ್ಗದವರಿಗೆ ಶತ್ರುಗಳ ಸಂಖ್ಯೆ ಹೆಚ್ಚಲಿದೆ ಮತ್ತು ಶತ್ರುಗಳಿಂದ ತೊಂದರೆ ಎದುರಾಗುವುದು.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ನೀಲಿ)
-----------
ಕಟಕ : ವಿದ್ಯುತ್ ಚಾಲಿತ ಯಂತ್ರೋಪಕರಣಗಳ ಮಾರಾಟದ ಮಧ್ಯಸ್ಥಿಕೆಯಲ್ಲಿಸ್ನೇಹಿತರ ಸಹಾಯದಿಂದ ಅಧಿಕ ಲಾಭ ಗಳಿಸುವಿರಿ. ಸರಕಾರಿ ಗುತ್ತಿಗೆದಾರರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಆರೋಗ್ಯದಲ್ಲಿಸುಧಾರಣೆಯಾಗಲಿದೆ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕಂದು ಕೆಂಪು)
-----------
ಸಿಂಹ : ರೈತರು ಪ್ರಾಯೋಗಿಕವಾಗಿ ಬೆಳೆದ ಉತ್ತಮ ತಳಿಯ ಬೆಳೆಯಿಂದ ಹೆಚ್ಚಿನ ಸಂತೋಷವನ್ನು ಹೊಂದುವರು. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗುತ್ತದೆ. ನಿಮ್ಮ ಸ್ವಯಂ-ಸಾಮರ್ಥ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ.
(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಪಾಚಿ ಹಸಿರು)
-----------
ಕನ್ಯಾ : ಕುಟುಂಬ ಅಭಿವೃದ್ಧಿಗೆ ಉತ್ತಮ ಯೋಚನೆಗಳು ನಿಮ್ಮೆಡೆಗೆ ಬರಲಿವೆ. ಪ್ರಯೋಜನಕಾರಿಯಾಗಿ ಉಪಯೋಗಿಸಿಕೊಳ್ಳಿ. ದೇಹಾಯಾಸ ಉಂಟಾಗಿ ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿ ಎದುರಾಗಬಹುದು.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಂದು)
-------------------
ತುಲಾ : ಬಹಳ ಹುಡುಕಾಟದ ನಂತರ ಖಾಸಗಿ ಕಂಪನಿಯೊಂದರಲ್ಲಿನೌಕರಿ ಪ್ರಾಪ್ತಿಯಾಗಿ ಮನೆಯಲ್ಲಿಸಂತಸ ಮೂಡಲಿದೆ. ನಿಮ್ಮ ಆರನೇ ಇಂದ್ರೀಯದ ಸಹಾಯ ಉಪಯುಕ್ತವಾಗಲಿದೆ. ವ್ಯಾಪಾರದಲ್ಲಿಅತೀವ ಆಸಕ್ತಿ ಮೂಡುತ್ತದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ನೀಲಿ)
------
ವೃಶ್ಚಿಕ : ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಂತೆ ನಟನೆ ಮಾಡಿಯಾರು. ಇಂತಹ ವ್ಯಕ್ತಿಗಳನ್ನು ದೂರವಿಡುವುದು ಭವಿಷ್ಯಕ್ಕೆ ಶುಭ. ಬದುಕಿನಲ್ಲಿಸ್ಥಿರತೆಯ ಭಾವದಿಂದ ಮುಂದೆ ಬರುವಿರಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಸಿರು)
----------
ಧನು : ಮಕ್ಕಳ ವಿದ್ಯಾಭ್ಯಾಸ ವಿಚಾರದಲ್ಲಿಕಾರ್ಯಪ್ರವೃತ್ತರಾಗುವುದರಿಂದ ಆಸೆಪಟ್ಟಂತಹ ವಿಷಯದ ಅಧ್ಯಯನಕ್ಕೆ ಆಸ್ಪದ ಸಿಗುತ್ತದೆ. ತಂಗಿಗಾಗಿ ಸಮಯ ಮತ್ತು ಹಣವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಳದಿ)
----------
ಮಕರ : ಸಾಲ ತೀರಿದ ನೆಮ್ಮದಿಯ ಜೊತೆಗೆ ಭೂಮಿ ಖರೀದಿ ಅಥವಾ ಗೃಹ ನಿರ್ಮಾಣದ ಕಾರ್ಯಗಳು ಆರಂಭವಾಗಬಹುದು. ವಿದೇಶಿ ಉತ್ಪನ್ನಗಳ ಮಾರಾಟ ನಡೆಸುವವರಿಗೆ ವ್ಯವಹಾರದಲ್ಲಿಸಂಕಷ್ಟ ಎದುರಾಗಬಹುದು.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಖಾಕಿ)
-------
ಕುಂಭ : ಕೆಲಸ-ಕಾರ್ಯಗಳಲ್ಲಿಸಮಾನ ಮನಸ್ಕರು ಸಿಗುವುದರಿಂದ ವ್ಯವಸ್ಥಿತವಾಗಿ ಮಾತುಕತೆ ನಡೆದು ಕಾರ್ಯಭಾರ ಸುಗಮವಾಗುತ್ತದೆ. ಕುಟುಂಬದವರ ಜೊತೆ ಮನರಂಜನೆಗಾಗಿ ಅಲ್ಪ ಕಾಲ ಮೀಸಲಿಡಲು ಪ್ರಯತ್ನಿಸಿ.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಬೂದು)
---------
ಮೀನ : ಕುಟುಂಬದ ಜೊತೆ ಅಥವಾ ಆಫೀಸಿನ ಸಭೆಯಲ್ಲಾಗಲಿ ಸಂದರ್ಭಕ್ಕೆ ಸರಿಯಾದ ಮಾತುಗಳನ್ನು ಆಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದು. ಸಹಕಾರ ಬಯಸುವವರು ಎದುರಾದಾಗ ಅವರಿಗೆ ಅಗೌರವ ತೋರಬೇಡಿ.