ಡಿ.ತ್ರಿಲೋಕ್ ಚಂದರ್ ನಿರ್ದೇಶನದ ಸಿನಿಮಾ ‘ಅನಂತರ ಇ ಕಿಸ್ಸಾನ್ ಟಿವಿ-2’. ಗ್ರಾಮೀಣ ಪರಿಸರದಲ್ಲಿಮುಗ್ಧ ಯುವಕನ ಸುತ್ತ ನಡೆಯುವ ಕಥೆಯಿದು. ಸ್ನೇಹಿತರ ಸಹವಾಸದಿಂದ ಕೊಲೆ ಪ್ರಕರಣದಲ್ಲಿಸಿಲುಕಿ ಜೈಲಿಗೆ ಹೋಗಿ ಹೊರಬಂದ ಮೇಲೆ ಆ ಯುವಕನ ಮುಂದಿನ ಜೀವನ ಹೇಗಿರುತ್ತದೆ ಎಂಬುದೇ ಕಥೆಯ ಸಾರಾಂಶ. ಸಂಬಂಧಕ್ಕಿಂತ ಹಣಕ್ಕೆ ಹೆಚ್ಚು ಬೆಲೆ ಕೊಡುವ ಸಂಬಂಧಿಕರ ಮಧ್ಯೆ ಆತನೊಬ್ಬನೇ ಏಕಾಂಗಿಯಾಗಿ ಹೇಗೆ ಹೋರಾಡುತ್ತಾನೆ ಎಂಬುದನ್ನು ಮನರಂಜನಾತ್ಮಕವಾಗಿ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕರು.ಚಿತ್ರದ ನಾಯಕ ಯೋಗೇಶ್ ಗೌಡ. ನಾಯಕಿಯರಾಗಿ ಯಶಸ್ವಿನಿ, ರಮ್ಯಾ, ಸುಧಾ, ಪವನ್ ಚಾರಿ, ವಾತ್ಸಲ್ಯ ಮುಂತಾದವರು ನಟಿಸಿದ್ದಾರೆ. ಸೃಜನ್ , ಸುಹಾಸ್ ಅವರ ಛಾಯಾಗ್ರಹಣ, ಜೆವಿನ್ಸನ್ ಲೆವಿಸ್ ಅವರ ಸಂಗೀತ ಸಂಯೋಜನೆ ಹಾಗೂ ಸಂಕಲನ ಈ ಚಿತ್ರಕ್ಕಿದೆ.