ಸದಾನಂದ ಹೆಗಡೆಇಂಟ್ರೊ: ಡಿಜಿಟಲ್ ಕಾಲದಲ್ಲಿಎಐ ತಂತ್ರಜ್ಞಾನದ ಕೃತಕ ರೆಟ್ರೋ ಪ್ರಯೋಗಗಳ ನಡುವೆ, ನೈಜ ರಂಗಭೂಮಿ ವೈಭವವನ್ನು ಮರುಸೃಷ್ಟಿಸುವ ರೆಟ್ರೋ ಪ್ರಯೋಗವಾಗಿ ಸಂಪತ್ತಿಗೆ ಸವಾಲ್ ಪ್ರದರ್ಶನಗೊಳ್ಳಲಿದೆ.
ಇದೊಂದು ರೆಟ್ರೋ ಸ್ಟೈಲ್ ಪ್ರಯೋಗ. ಆದರೆ ಇತ್ತೀಚೆಗೆ ಜಾಲತಾಣದಲ್ಲಿರಾರಾಜಿಸುತ್ತಿರುವ 1950 ರಿಂದ 80ರ ನಡುವಿನ ಸಿನಿಮಾ ಹೀರೋಗಳ ರೂಪದಲ್ಲಿನಮ್ಮನ್ನು ನಾವು ಕಾಣುವ ಎಐ ಚಮತ್ಕಾರ ಅಲ್ಲ. ಡಾ. ರಾಜ್ ಅಭಿನಯದ ಸೂಪರ್ ಹಿಟ್ ‘ಸಂಪತ್ತಿಗೆ ಸವಾಲ್ ’ ಸಿನಿಮಾದ ನಿಜ ಅರ್ಥದ ರೆಟ್ರೋ. ಸಿನಿಮಾವನ್ನು ಮರಳಿ ರಂಗಪ್ರಯೋಗವಾಗಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುತ್ತಿದೆ.
ಮರು ನಿರ್ಮಾಣ
ರಾಜ್ಯದ ವೃತ್ತಿ ರಂಗಭೂಮಿ ರಂಗಾಯಣ ಇದನ್ನು ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘದ ಮೂಲಕ ಮರುನಿರ್ಮಾಣ ಮಾಡಿದೆ. ಇದೇ ಸೆ. 25 ರಂದು ದಾವಣಗೆರೆಯಲ್ಲಿಈ ನಾಟಕ ಪ್ರದರ್ಶನಗೊಳ್ಳಲಿದ್ದು, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಚಾಲನೆ ನೀಡುವರು.
‘ಉಳುವವನೇ ಹೊಲದೊಡೆಯ’ ಕಾಲದ ಒಡೆಯ-ಒಕ್ಕಲು ಸಾಮಾಜಿಕ ಸಂಘರ್ಷದ ಗಟ್ಟಿ ವಿಷಯಕ್ಕೆ ಸಿನಿಮಾ ಅಗತ್ಯವಾದ ಅಮರ ಪ್ರೇಮದ ನೆಲೆಯಲ್ಲಿರಂಗರೂಪ ಪಡೆದ ಕಥೆ. ಮೂಲ ಪಿ. ವಿ. ಧುತ್ತರಗಿ ವಿರಚಿತ ನಾಟಕವನ್ನು 1974 ರಲ್ಲಿಸಿನಿಮಾ ಮಾಡಲಾಯಿತು. ಇದೀಗ ಐದು ದಶಕಗಳ ಬಳಿಕ ಮತ್ತೆ ನಾಟಕದ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಕೆ. ಎಸ್ . ಡಿ. ಎಲ್ . ಚಂದ್ರು ನಾಟಕ ನಿರ್ದೇಶನ ಮಾಡಿದ್ದಾರೆ.
ಅದೇ ಹಾಡು, ಅದೇ ಎಮ್ಮೆಯ ಮೇಲೆ ಡಾ. ರಾಜ್ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ.. ನಿನ್ನ ನೆಮ್ಮದಿಗೆ ಭಂಗವಿಲ್ಲ..’ ಎನ್ನುತ್ತ ನಾಯಕ ಭದ್ರ ಬರುತ್ತಾನೆ. ಸಂಪತ್ತಿಗೆ ಸವಾಲ್ ನ ಡಾ. ರಾಜ್ ಅವರ ಪಾತ್ರದಲ್ಲಿನಾಟಕ ಕಂಪನಿ ಮಾಲೀಕ ಪಾಪು ಕಲ್ಲೂರ, ನಾಯಕಿ ಮಂಜುಳಾ ಪಾತ್ರದಲ್ಲಿಕನಕಲಕ್ಷ್ಮಿ ಶಿರಸಿ, ಗೌಡನ ಪಾತ್ರದಲ್ಲಿಸಂಕೇತ್ ಮಂಗಳೂರು, ಕುಲಕರ್ಣಿ ಪಾತ್ರದಲ್ಲಿಆನಂದ್ ಪತ್ತಾರ್ ಮತ್ತಿತರರು ಜೀವ ತುಂಬಿದ್ದಾರೆ.
ಬೆಳ್ಳಿ ತೆರೆಯ ಬದಲಿಗೆ ರಂಗುರಂಗಿನ ನಾಟಕ ಪರದೆಗಳು, ಲೈಟಿಂಗ್ , ಸಂಭಾಷಣೆ ಪ್ರೇಕ್ಷಕರನ್ನು ಆ ಕಾಲಕ್ಕೆ ಕೊಂಡು ಹೋಗುತ್ತದೆ. 70 ರ ದಶಕದಲ್ಲಿವೈಭವದಲ್ಲಿದ್ದ ವೃತ್ತಿ ರಂಗಭೂಮಿಗೆ ಈ ಮೂಲಕ ರೆಟ್ರೋ ರೂಪ ಸಾಧ್ಯವಾಗಿಸುತ್ತಿದೆ.
ಕೋಟ್
ಡಾ. ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾವನ್ನು ನಮ್ಮ ಕಂಪನಿಯಿಂದ ನಾಟಕ ರೂಪದಲ್ಲಿಆಡುವುದು ಹೆಮ್ಮೆಯ ವಿಷಯ. ಇಂಥ ಅವಕಾಶಕ್ಕೆ ವೃತ್ತಿ ರಂಗಾಯಣಕ್ಕೆ ಕೃತಜ್ಞತೆಗಳು. ಆ ಕಲಾವಿದನ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವೆ.
ವೃತ್ತಿ ರಂಗಭೂಮಿ ಇದ್ದಲ್ಲಿಗೆ ರಂಗಾಯಣ ತೆರಳುವ ಯೋಜನೆ ಇದು. ಕಳೆದ ವರ್ಷ ಹುಬ್ಬಳ್ಳಿಯ ಕ್ಯಾಂಪ್ ನಲ್ಲಿಯೇ ಹೊಳೆ ಹುಚ್ಚೇಶ್ವರ ನಾಟ್ಯ ಸಂಘಕ್ಕೆ ಕೇಳಿಕೊಂಡಿದ್ದೆವು. ಈ ವರ್ಷ ಅವರ ಕ್ಯಾಂಪ್ ದಾವಣಗೆರೆಯಲ್ಲಿಇರುವ ಕಾರಣ ಕಾರ್ಯರೂಪಕ್ಕೆ ತರುವುದು ಸಾಧ್ಯವಾಯಿತು. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿದ್ದೇವೆ.