ಕೊನೆಯ ಪತ್ರ

Contributed by: shubha.hegde@timesgroup.com|Vijaya Karnataka•
the last letter bhargavs unique thriller
ಸಸ್ಪೆಸ್ಸ್ ಥ್ರಿಲ್ಲರ್ ನ ಕೊನೆಯ ಪತ್ರ

ಭಾರ್ಗವ್ .ಬಿ.ವಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ‘ಕೊನೆಯ ಪತ್ರ’.
ಈ ಚಿತ್ರದಲ್ಲಿಭಾರ್ಗವ್ ಅವರೇ ನಾಯಕ. ಐರಾ ಮೆನನ್ ಮತ್ತು ಶಬೀನಾ ನಾಯಕಿಯರು. ಕಿಶೋರ್ ನಾಯಕನ ಗೆಳೆಯನಾಗಿ ನಟಿಸುತ್ತಿದ್ದಾರೆ.

‘ಶೀರ್ಷಿಕೆ ಕ್ಲಾಸಿಕಲ್ ಅನಿಸಿದರೂ ಇದು ಔಟ್ ಅಂಡ್ ಔಟ್ ಮಾಸ್ ಕಂಟೆಂಟ್ ಹೊಂದಿರುವ ಕಥೆ. ನರಸಾಪುರದ ನರಸಿಂಹ ಎಂಬ ರಗಡ್ ಯುವಕನಿಗೆ ಬರುವ ಒಂದು ಪತ್ರ ಆತನನ್ನು ಹೇಗೆ ಬದಲಾಯಿಸುತ್ತದೆ ಎಂಬುದೇ ಚಿತ್ರದ ಕಥಾಹಂದರ. ಈ ಚಿತ್ರವು ಎರಡು ಭಾಗಗಳಲ್ಲಿಮೂಡಿಬರಲಿದ್ದು, ಹೈದರಾಬಾದ್ , ಮಂಗಳೂರು, ಉಡುಪಿ ಹಾಗೂ ಕನಕಪುರದಲ್ಲಿಮೂರು ಹಂತಗಳಲ್ಲಿಚಿತ್ರೀಕರಣ ನಡೆಸಲು ಯೋಜಿಸಲಾಗಿದೆ’ ಎಂದು ನಟ ಹಾಗೂ ನಿರ್ದೇಶಕ ಭಾರ್ಗವ್ .ಬಿ.ವಿ ಮಾಹಿತಿ ನೀಡಿದ್ದಾರೆ.

ವೇದಶ್ರೀ, ಬಲರಾಜವಾಡಿ, ಕಿಲ್ಲಿಕ್ರಾಂತಿ, ಛತ್ರಪತಿ ಶೇಖರ್ , ಪ್ರೇಮ್ ಸಾಗರ್ , ಜಬರ್ ದÓ್ತ… ನವೀನ್ , ಶೃತಿ, ತಗುಬಾತು ಶ್ರೀನು ಹಾಗೂ ಟೆಸ್ಟಿ ತೇಜ ಅಭಿನಯಿಸುತ್ತಿದ್ದಾರೆ.ಪೆದ್ದಪಲ್ಲಿರೋಹಿತ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಆರ್ಯ ಸಾಯಿಕೃಷ್ಣ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.